ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ : ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಅಭಿಯಾನ

0

ಪುತ್ತೂರು: ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ ಪಡೀಲ್ ಎಂಡಿಎಸ್ ಹಾಲ್‌ನಲ್ಲಿ ನಡೆಯಿತು. ಸ್ವಾಗತ ಸಮಿತಿ ಚೇರ್‌ಮೆನ್ ಅಬ್ದುಲ್ ಅಝೀಝ್ ಚೆನ್ನಾರ್ ಅಧ್ಯಕ್ಷತೆ ವಹಿಸಿದ್ದರು.


ಐದು ವೇದಿಕೆಗಳಲ್ಲಿ ಐನೂರರಷ್ಟು ವಿದ್ಯಾರ್ಥಿಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಮಾಡಾವು ಸೆಕ್ಟರ್ ಚಾಂಪಿಯನ್ ಸ್ಥಾನ ತಮ್ಮದಾಗಿಸಿತು.ಕೋಶಾಧಿಕಾರಿ ಇಕ್ಬಾಲ್ ಬಪ್ಪಳಿಗೆ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ಜಂಇಯತುಲ್ ಉಲಮಾ ಪುತ್ತೂರು ನಾಯಕ ಅಬುಲ್ ಬುಶ್ರಾ ಅಬ್ದುರ್ರಹ್ಮಾನ್ ಫೈಝಿ ಸಂಪ್ಯ ಉದ್ಘಾಟಿಸಿ ಮಾತನಾಡಿದರು. ಬಳಿಕ ಮಾದಕ ದ್ರವ್ಯಗಳ ವಿರುದ್ಧ ಜನ ಜಾಗೃತಿ ಅಭಿಯಾನ ನಡೆಯಿತು. ನೌಷಾದ್ ಸಖಾಫಿ ಕುಂಬ್ರ ಮಾದಕ ದ್ರವ್ಯಗಳಗಳಿಂದ ಸಮಾಜದಲ್ಲಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು.


ಸಮಸ್ತ ಸೆಂಟಿನರಿ ಪ್ರಯುಕ್ತ ರಾಫಿ ಹಿಮಮಿ ಕಾಮಿಲ್ ಸಖಾಫಿ ಕೊಡಗುರವರು ಮುಖ್ಯ ಪ್ರಭಾಷಣಗೈದರು. ಸಾಹಿತ್ಯೋತ್ಸವದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಎಸ್‌ವೈಎಸ್ ಜಿಲ್ಲಾ ಅಧ್ಯಕ್ಷ ಅಶ್ರಫ್ ಸಖಾಫಿ ಮಾಡಾವು, ಜಿಲ್ಲಾ ಉಪಾಧ್ಯಕ್ಷ ಅಬೂಶಝ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ, ಜಿಲ್ಲಾ ಪ್ರ.ಕಾರ್ಯದರ್ಶಿ ಸ್ವಾಲಿಹ್ ಮುರ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಫೀಕ್ ಸಅದಿ ಈಶ್ವರಮಂಗಲ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಕುಂಬ್ರ ಮರ್ಕಝುಲ್ ಹುದಾದ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಯೂಸುಫ್ ಗೌಸಿಯ ಸಾಜ, ಅಡ್ವೊಕೇಟ್ ನೂರುದ್ದೀನ್ ಸಾಲ್ಮರ, ಮೋನು ಬಪ್ಪಳಿಗೆ, ಆದಂ ಹಾಜಿ ಪಡೀ , ಉಮರ್ ಹಾಜಿ ಬನ್ನೂರು, ಅಬ್ದುಲ್ ಅಝೀಝ್ ಮಿಸ್ಬಾಹಿ, ಎಸ್ ವೈಎಸ್ ಜಿಲ್ಲಾಕೋಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಯೂಸುಫ್ ಹಾಜಿ ಕೈಕಾರ, ಬಶೀರ್ ಪರ್ಲಡ್ಕ, ರಿಯಾಝ್ ಪರ್ಲಡ್ಕ, ಕರೀಮ್ ಹಾಜಿ ಕಾವೇರಿ, ಆಸಿಫ್ ನರಿಮೊಗರು ಕುವೈತ್, ಇಸ್ಮಾಯಿಲ್ ಹಾಜಿ ಬನ್ನೂರು, ಇಬ್ಬ ಬಪ್ಪಳಿಗೆ, ಹಸೈನಾರ್ ಹಾಜಿ ಮಜ್ಮ, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಅಬ್ದುಲ್ಲ ಕಾವು, ಹನೀಫ್ ಇರ್ದೆ ಬಹರೈನ್ , ಝುಬೈರ್ ಸಖಾಫಿ ಗಟ್ಟಮನೆ, ಕೆಎಂಜೆ ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಬಾಯಂಬಾಡಿ, ಫವಾಝ್ ಕಟ್ಟತ್ತಾರ್, ಶಾಹುಲ್ ಹಮೀದ್ ಕಬಕ, ಮಜೀದ್ ಕಬಕ, ಸಿದ್ದೀಕ್ ಹಾಜಿ ಕಬಕ, ಎಸ್ಸೆಸ್ಸೆಫ್ ಅಧ್ಯಕ್ಷ ಸಲಾಮ್ ಹನೀಫಿ, ಕಾರ್ಯದರ್ಶಿ ಸಾಬಿತ್ ಪಾಟ್ರಕೋಡಿ, ಫಾರೂಕ್ ಬನ್ನೂರು, ಸಾಜಿದ್ ಪಾಟ್ರಕೋಡಿ, ಮುಹ್ಸಿನ್ ಕಟ್ಟತ್ತಾರು, ಶಾಕಿರ್ ಕೊಳ್ತಿಗೆ, ಸಿನಾನ್ ಸಖಾಫಿ ಹಸನ್‌ನಗರ, ಸಿನಾನ್ ಸಅದಿ ಈಶ್ವರಮಂಗಲ ಉಪಸ್ಥಿತರಿದ್ದರು. ಕನ್ವೀನರ್ ಹಾರಿಸ್ ಅಡ್ಕ ಸ್ವಾಗತಿಸಿದರು.ಪ್ರೋಗ್ರಾಂ ಸಮಿತಿಯ ಫೈಝಲ್ ಈಶ್ವರಮಂಗಲ ವಂದಿಸಿದರು. ನೌಷಾದ್ ಹಿಮಮಿ ಕರಿಂಬಿಲ ನಿರೂಪಿಸಿದರು.

LEAVE A REPLY

Please enter your comment!
Please enter your name here