ಕೆಎಸ್‌ಆರ್‌ಟಿಸಿ ಘಟಕದಲ್ಲಿ ಸೇವಾ ನಿವೃತ್ತಿಯಾದವರಿಗೆ ಬೀಳ್ಕೊಡುಗೆ

0

ರಾಜ್ಯ ರಸ್ತೆ ಸಾರಿಗೆ ನಿಗಮ, ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ವತಿಯಿಂದ ಸನ್ಮಾನ
ನಿವೃತ್ತ ಸಂಚಾರ ನಿಯಂತ್ರಕ ಕೋಚಣ್ಣ ಪೂಜಾರಿ ಸಹಿತ ನಾಲ್ವರು ಸಿಬ್ಬಂದಿಗಳಿಗೆ ಗೌರವ

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಳೆದ 30 ವರುಷಗಳಿಂದ ವಿವಿಧ ಸ್ತರಗಳಲ್ಲಿ ಹುದ್ದೆ ನಿರ್ವಹಿಸಿ, ಸಂಚಾರ ನಿಯಂತ್ರಕರಾಗಿ ಸೇವೆಯಿಂದ ನಿವೃತ್ತರಾದ ಕೆದಂಬಾಡಿ ಗ್ರಾಮದ ಎಂಡೆಸಾಗು ನಿವಾಸಿ ಕೋಚಣ್ಣ ಪೂಜಾರಿ ಸಹೋದ್ಯೋಗಿಗಳಾದ ಮಥಾಯಿಸ್ ಮತ್ತು ವಲ್ಲಿ ಮಸ್ಕರೇನ್ಹಸ್ ಹಾಗೂ ಪದ್ಮನಾಭನ್ ಇವರಿಗೆ ಬೀಳ್ಕೋಡುಗೆ ಕಾರ್ಯಕ್ರಮ ಜು.31ರಂದು ನಿಗಮದ ಮುಕ್ರಂಪಾಡಿ ಘಟಕದ ಆವರಣದಲ್ಲಿ ನಡೆಯಿತು.


ನಿಗಮದ ವಿಭಾಗೀಯ ತಾಂತ್ರಿಕ ಅಭಿಯಂತರ ವೆಂಕಟೇಶ್ ಮಾತನಾಡಿ, ಸರಕಾರಿ ಸೇವೆಗೆ ಸೇರಿ ಬಳಿಕ ಸೇವೆಯಿಂದ ನಿವೃತ್ತರಾಗೋ ಸಮಯಗಳ ನಡುವೆ ನಾವೆಲ್ಲರೂ ಸಂಸ್ಥೆಗೆ ನೀಡಿರುವಂತಹ ಕೊಡುಗೆ ಅವಿಸ್ಮರಣೀಯವಾಗಿದ್ದಾಗ ಫಲಿತಾಂಶವು ಪ್ರಜ್ವಲಿಸಬಲ್ಲದೆಂದು ಹೇಳಿ ಹಾರೈಸಿದರು.


ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷೆ ಜ್ಯೋತಿ ಅನಂತ ಸುಬ್ಬರಾವ್ ಮಾತನಾಡಿ, ಬೀಳ್ಕೋಡುಗೆ ಸಮಾರಂಭ ಒಂಥರಾ ಸಂತಸದ ಘಳಿಗೆಯು ಹೌದು, ಭಾವುಕದ ಕ್ಷಣವೂ ಹೌದು. 30-35 ವರುಷಗಳ ಕಾಲ ಎಲ್ಲರ ಜತೆಯಾಗಿ ದುಡಿದು, ನಿವೃತ್ತಿಯಾಗೋರ ಕಣ್ಣಲ್ಲಿ ನೀರು ತುಂಬೋದು ಸಹಜ. ಸಂಸ್ಥೆಯಲ್ಲಿ ಏನೇ ಕಷ್ಟ ನಷ್ಟ ನೋವು ನಲಿವು ಅನುಭವಿಸಿದರೂ ಎಲ್ಲವೂ ಸುಂದರ ಅನುಭವ ಮನೆಯ ಸದಸ್ಯರನ್ನೆಲ್ಲಾ ಬಿಟ್ಟು, ಯಂತ್ರಗಳ ಚಕ್ರ ತಿರುಗುವ ಹಾಗೇ ನಿಗಮದ ನೌಕರರೆಲ್ಲಾ ಬಿಡುವಿಲ್ಲದೇ ಕಾರ್ಯ ನಿರ್ವಹಿಸೋರು ಎಂದು ಹೇಳಿ, ನಿವೃತ್ತ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.


ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿಜಯರಾಜ್ , ಸ್ಟಾಫ್ ಆ್ಯಂಡ್ ವರ್ಕರ್ಸ್ ಕೋಶಾಧಿಕಾರಿ ಚಂದ್ರೇಗೌಡ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೇಡೆಂಜಿ, ಕೋಚಣ್ಣ ಪೂಜಾರಿಯವರ ಪುತ್ರಿ ಅಧೀಕ್ಷ ಎಚ್.ಕೆ ಹಾಗೂ ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಭಟ್ ಸಹಿತ ಹಲವಾರು ಅತಿಥಿಗಳು ಶುಭ ಹಾರೈಸಿದರು.


ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಕಾರ್ಯಾಧ್ಯಕ್ಷ ರಂಗೇಗೌಡ, ಜೊತೆ ಕಾರ್ಯದರ್ಶಿ ಬಾಲಕೃಷ್ಣ, ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಲೋಕೇಶ್ವರ ಉರ್ಲಾಂಡಿ, ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಬಾಳಪ್ಪ ಸುವರ್ಣ, ಕಾರ್ಯದರ್ಶಿ ಶಿವಪ್ರಸಾದ್, ವಲಯ ಸಂಚಾಲಕ ಬಾಬು ಪೂಜಾರಿ ಮತ್ತು ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಕರ್ಕೇರ ತರವಾಡು ದೈವಸ್ಥಾನ ಕೊಂಬರಡ್ಕ ಬಾರಿಕೆ ಇದರ ಪದಾಧಿಕಾರಿಗಳು ಮತ್ತು ಸದಸ್ಯರು, ಕೋಚಣ್ಣ ಪೂಜಾರಿಯವರ ಪತ್ನಿ ಮಾಲತಿ, ಪುತ್ರರಾದ ಅಭಿಲಾಷ್ ಮತ್ತು ಅಖಿಲೇಶ್ ಹಾಗೂ ಸೊಸೆ ರಂಜಿತಾ ಅಭಿಲಾಷ್ , ಮೊಮ್ಮಗ ಶೌರ್ಯ, ನಿಗಮದ ಪದಾಧಿಕಾರಿಗಳು, ಸಿಬಂದಿಗಳು ಮತ್ತು ಕುಟುಂಬ ವರ್ಗದವರು ಹಾಜರಿದ್ದರು. ಶ್ರೀ ಶೈಲ ಪ್ರಾರ್ಥನೆ ನೆರವೇರಿಸಿ, ವೆಂಕಟರಮಣ ಭಟ್ ಸ್ವಾಗತಿಸಿ, ನಿಗಮದ ಸಿಬ್ಬಂದಿಗಳಾದ ಅಬ್ಬಾಸ್, ಅನೀಶ್,ಸಂಜೀವ್ , ಮಿಥುನ್ ,ಅಜಿತ್ ಸಹಕಾರ ನೀಡಿದರು.

ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯುವೆ…
ಇಂದು ಸಿಕ್ಕಿರುವ ಸನ್ಮಾನ ಇನ್ನಷ್ಟು ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಲು ಪ್ರೋತ್ಸಾಹ ಕೊಟ್ಟಂತಾಗಿದೆ. ಬಾಲ್ಯದಲ್ಲಿ ತುಂಬಾ ಕಷ್ಟದ ದಿನಗಳನ್ನು ಎದುರಿಸಿದ್ದೇನೆ.ಪ್ರೌಢ ಶಿಕ್ಷಣದ ಬಳಿಕ
ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕಿದ್ದು ರಾತ್ರಿ ಪಾಳಿಯಲ್ಲಿ ಪದವಿ ಶಿಕ್ಷಣವನ್ನು ಪಡೆದುಕೊಂಡೆ. ಆ ಬಳಿಕ ಖಾಸಗಿ ಬಸ್ ನಿರ್ವಾಹಕನಾಗಿ, ತದನಂತರ ಮಾಜಿ ಶಾಸಕ ವಿನಯಕುಮಾರ್ ಸೊರಕೆಯವರ ಮೂಲಕ ಮುಖಾಂತರ ರಾಜ್ಯ ಸಾರಿಗೆ ನಿಗಮದಲ್ಲಿ ಕೆಲಸ ಪಡೆದುಕೊಂಡು, 30 ವರ್ಷದಿಂದ ಒಂದೇ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ನನ್ನ ಭಾಗ್ಯ. ಇದಕ್ಕಾಗಿ ಎಲ್ಲಾ ರೀತಿಯ ಅಧಿಕಾರಿ ವರ್ಗಕ್ಕೆ, ಸಹಕಾರ ನೀಡಿದ ಸಹೋದ್ಯೋಗಿಗಳಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವೆ. ಸ್ಟಾಪ್ ಆಂಡ್ ವರ್ಕರ್ಸ್ ಯೂನಿಯನ್ ಸಂಘಟನೆ ಸದಸ್ಯನಾಗಿ, ಆ ಬಳಿಕ ಸಂಘಟನೆಯ ಪದಾಽಕಾರಿಗಳು ನನಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಸಂಘಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿರುವಂತಹ ಎಲ್ಲರಿಗೂ ಅನಂತ ವಂದನೆಗಳು. ಸೇವಾವಧಿಯಲ್ಲಿ ಯಾರಿಗೂ ನೋವು ಮಾಡಿಲ್ಲ ಒಂದು ವೇಳೆ ಆಗಿದ್ದರೆ ಎಲ್ಲರೂ ಕ್ಷಮಿಸಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಈವರೆಗೆ ಕಾರ್ಯನಿರ್ವಹಿಸಿದ್ದೇನೆ ಮುಂದೆಯೂ ನಿಮ್ಮೆಲ್ಲರ ಸಹಕಾರ ಬಯಸುವೆ.

ಕೋಚಣ್ಣ ಪೂಜಾರಿ ಎಂಡೆಸಾಗು. ನಿವೃತ್ತ ಟಿ.ಸಿ ಹಾಗೂ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಪ್ರ.ಕಾರ್ಯದರ್ಶಿ

ಕೋಚಣ್ಣ ಪೂಜಾರಿ ಎಂಡೆಸಾಗು. ನಿವೃತ್ತ ಟಿ.ಸಿ ಹಾಗೂ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಪ್ರ.ಕಾರ್ಯದರ್ಶಿ

LEAVE A REPLY

Please enter your comment!
Please enter your name here