ಮಜ್ಜಾರಡ್ಕ: ಸ್ವಾಮಿನಗರದಲ್ಲೊಂದು ಅಪಾಯಕಾರಿ ಮರ – ತೆರವುಗೊಳಿಸುವಂತೆ ಗ್ರಾಮಸ್ಥರ ಆಗ್ರಹ

0

ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜ್ಜಾರಡ್ಕ-ಗೋಳ್ತಿಲ ರಸ್ತೆಯ ಸ್ವಾಮಿನಗರ ಎಂಬಲ್ಲಿ ಅಪಾಯಕಾರಿ ಮರವೊಂದು ವಿದ್ಯುತ್ ಕಂಬದ ತಂತಿಗಳ ಮೇಲೆ ವಾಲಿದ್ದು ಬೀಳುವ ಸ್ಥಿತಿಯಲ್ಲಿದೆ. ಅಕೇಶಿಯಾ ಮರವೊಂದು ವಿದ್ಯುತ್ ತಂತಿಗಳ ಮೇಲ್ಬಾಗದಿಂದ ವಾಲಿದ್ದು ಅಪಾಯದಲ್ಲಿದೆ. ಒಂದು ವೇಳೆ ಮರ ಮುರಿದು ಅಥವಾ ಮರದ ಕೊಂಬೆಗಳು ಮುರಿದು ಬಿದ್ದರೂ ವಿದ್ಯುತ್ ಕಂಬ ಸಹಿತ ತಂತಿಗಳು ತುಂಡಾಗಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೆ ಈ ರಸ್ತೆಯಲ್ಲಿ ಶಾಲಾ ವಾಹನ, ಶಾಲಾ ವಿದ್ಯಾರ್ಥಿಗಳು ಕೂಡ ಓಡಾಡುತ್ತಿದ್ದು ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ. ಈ ಬಗ್ಗೆ ಈಗಾಗಲೇ ಸ್ಥಳೀಯರು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಪವರ್‌ಮೆನ್‌ಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಮರವನ್ನು ತೆರವುಗೊಳಿಸುವ ಕೆಲಸ ಮಾತ್ರ ನಡೆದಿಲ್ಲ ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ಮರವನ್ನು ತೆರವುಗೊಳಿಸುವಂತೆ ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here