







6.24 ಲಕ್ಷ ರೂ.ನಿವ್ವಳ ಲಾಭ ; ಶೇ.20 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 1.38 ರೂ.ಬೋನಸ್ ಘೋಷಣೆ


ನೆಲ್ಯಾಡಿ: ಕಾಂಚನ ಹಾಲು ಉತ್ಪಾದಕರ ಸಹಕಾರಿ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಆ.1ರಂದು ಸಂಘದ ವಠಾರದಲ್ಲಿ ನಡೆಯಿತು.



ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಿ.ಡೆನ್ನಿಸ್ ಪಿಂಟೊ ಪುಯಿಲ ಮಾತನಾಡಿ, ಸಂಘವು ಹೆಚ್ಚಿನ ಪ್ರಗತಿ ಸಾಧಿಸಿದ್ದು 2025-26ನೇ ಸಾಲಿನಲ್ಲಿ 3.84,98,993 ರೂ.ವ್ಯವಹಾರ ನಡೆಸಿದ್ದು 6,24,786 ರೂ.ನಿವ್ವಳ ಲಾಭ ಬಂದಿದೆ. ಇದರ ಕೀರ್ತಿ ಸಂಘದ ಸದಸ್ಯರಿಗೆ ಸಲ್ಲಬೇಕು. ಲಾಭಾಂಶವನ್ನು ಬೈಲಾ ಪ್ರಕಾರ ವಿಂಗಡಣೆ ಮಾಡಲಾಗಿದ್ದು ಸದಸ್ಯರಿಗೆ ಶೇ.20 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 1.38 ರೂ. ಬೋನಸ್ ನೀಡಲಾಗುವುದು ಎಂದು ಹೇಳಿದರು. ಗುಣಮಟ್ಟದ ಮೇಲೆ ಹಾಲಿಗೆ ದರ ನಿಗದಿಯಾಗುತ್ತದೆ. ಗುಣಮಟ್ಟದ ಹಾಲು ಉತ್ಪಾದನೆಯಿಂದ ಸಂಘದ ಅಭಿವೃದ್ಧಿಯ ಜೊತೆಗೆ ವೈಯಕ್ತಿಕ ಅಭಿವೃದ್ಧಿಯೂ ಆಗಲಿದೆ. ಹೈನುಗಾರಿಕೆಯಲ್ಲೂ ಸಾಧನೆ ಮಾಡಿದ ಹಲವರು ಇದ್ದಾರೆ. ಇಂಜಿನಿಯರಿಂಗ್ ಉದ್ಯೋಗ ಬಿಟ್ಟು ಹೈನುಗಾರಿಕೆಯಲ್ಲಿ ತೊಡಗಿಕೊಂಡ ಸಾಕಷ್ಟು ಮಂದಿ ಇದ್ದಾರೆ. ಇದರಿಂದ ಅವರ ಆರ್ಥಿಕ ಸುಧಾರಣೆ, ಜೀವನ ಮಟ್ಟವೂ ಸುಧಾರಣೆಯಾಗಿದೆ. ಸಂಘದಲ್ಲಿ 200 ಸದಸ್ಯರಿದ್ದು ಕನಿಷ್ಠ 100 ಸದಸ್ಯರಾದರೂ ಸಂಘಕ್ಕೆ ಹಾಲು ಹಾಕುವಂತಾಗಬೇಕು. ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಮಾಹಿತಿ ಶಿಬಿರ ಸಹಿತ ಇತರೇ ಯೋಜನೆ ಹಾಕಿಕೊಳ್ಳಲಾಗಿದೆ. ಸದಸ್ಯರು ಸಹಕರಿಸುವಂತೆ ಹೇಳಿದರು.
ದ.ಕ.ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಸತೀವ್ ರಾವ್ ಮಾತನಾಡಿ, ಪುತ್ತೂರು ತಾಲೂಕಿನಲ್ಲಿ 97 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಇವುಗಳ ಪೈಕಿ ಕಾಂಚನ ಸಂಘ 5ನೇ ಸ್ಥಾನದಲ್ಲಿದೆ. ಆಡಳಿತ ಮಂಡಳಿ, ಸಿಬ್ಬಂದಿಗಳ ಪಾರದರ್ಶಕ ಸೇವೆಯಿಂದ ಕಳೆದ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಲಾಭವೂ ಬಂದಿದೆ. ಹಾಲಿಗೆ ಗುಣಮಟ್ಟದ ಪ್ರಕಾರ ದರ ನೀಡಲಾಗುತ್ತದೆ. 1 ಲೀ.ಹಾಲಿಗೆ 50 ರೂ.ಪಡೆದುಕೊಂಡ ಸದಸ್ಯರೂ ಇದ್ದಾರೆ. ಆದ್ದರಿಂದ ಗುಣಮಟ್ಟಕ್ಕೆ ಒತ್ತು ನೀಡುವಂತೆ ಹೇಳಿದರು. ಹಾಲಿನಲ್ಲಿ ಡಿಗ್ರಿ ಹಾಗೂ ಪ್ಲಾö್ಯಟ್ ಬರಲು ಹಾಲು ಉತ್ಪಾದಕರು ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಸತೀಶ್ ರಾವ್ ಅವರು ಮಾಹಿತಿ ನೀಡಿದರು.
ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಅವರು ಮಾತನಾಡಿ, ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತು, ವಿಮಾ ಸೌಲಭ್ಯಗಳ ಕುರಿತಂತೆ ಮಾಹಿತಿ ನೀಡಿ, ಒಕ್ಕೂಟದಿಂದ ಸಿಗುವ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಸಂಘದ ಉಪಾಧ್ಯಕ್ಷ ಯಂ.ಶಶಿಧರ ಗೌಡ, ನಿರ್ದೇಶಕರಾದ ಯಂ.ಹರಿಶ್ಚAದ್ರ ಗೌಡ, ಯಂ.ರವೀAದ್ರ ಗೌಡ. ಯನ್.ಉಮೇಶ ಗೌಡ, ಸುರೇಶ್ ಕೆ., ಪ್ರೇಮ, ಹೊನ್ನಮ್ಮ, ನಾರಾಯಣ ಕೆ., ರುಕ್ಮಯ ಗೌಡ, ಶ್ರೀಧರ ಬಿ., ವಸಂತಿ ಬಿ., ರತ್ನಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಕಾರ್ಯದರ್ಶಿ ಚಂದ್ರಶೇಖರ ಗೌಡ, ಸದಸ್ಯರಾದ ಶ್ರೀಧರ ಗೌಡ ಮುದ್ಯ, ದುಗ್ಗಪ್ಪ ಗೌಡ ಅಗರ್ತಿಮಾರು, ತಿಮ್ಮಪ್ಪ ಗೌಡ ಉಪಾತಿಪಾಲು ಮತ್ತಿತರರು ವಿವಿಧ ಸಲಹೆ ಸೂಚನೆ ನೀಡಿದರು. ಸಂಘದ ಕಾರ್ಯದರ್ಶಿ ಅಜಯ್‌ಕುಮಾರ್ ವರದಿ ವಾಚಿಸಿದರು. ಶಶಿಧರ ಗೌಡ ಸ್ವಾಗತಿಸಿ, ಶ್ರೀಧರ ಬಿ.ವಂದಿಸಿದರು. ಸುರೇಶ್ ಕೆ.ಪ್ರಾರ್ಥಿಸಿದರು. ಹಾಲು ಪರೀಕ್ಷಕಿ ಭವಾನಿ ಬಿ.ಸಹಕರಿಸಿದರು.
ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಬಹುಮಾನ:
2025-26ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಮೂವರು ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 6,91,480 ರೂ.ಮೌಲ್ಯದ ಹಾಲು ಹಾಕಿದ ಸುಧಾಕರ ಗೌಡ ಮುದ್ಯ (ಪ್ರಥಮ), 5,43,992 ರೂ.ಮೌಲ್ಯದ ಹಾಲು ಹಾಕಿದ ಡೆನ್ನಿಸ್ ಪಿಂಟೊ ಪುಯಿಲ(ದ್ವಿತೀಯ) ಹಾಗೂ 4,59,918 ರೂ.ಮೌಲ್ಯದ ಹಾಲು ಹಾಕಿದ ತಿಮ್ಮಪ್ಪ ಗೌಡ ಉಪಾತಿಪಾಲು (ತೃತೀಯ) ಅವರು ಬಹುಮಾನ ಪಡೆದುಕೊಂಡರು. ಉಳಿದಂತೆ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.










