







ಸವಣೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವದ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬೆಳ್ಳಾರೆ ವಲಯದ ಪಾಲ್ತಾಡಿ ಘಟ ಸಮಿತಿ ಸಹಯೋಗದಲ್ಲಿ ಅಂಕತಡ್ಕ ಪೇಟೆ ಹಾಗೂ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಲಾಯಿತು.


ಈ ಸಂದರ್ಭದಲ್ಲಿ ಯೋಜನೆಯ ಬೆಳ್ಳಾರೆ ವಲಯ ಸಂಯೋಜಕಿ ಶೀಬಾ ರೈ , ಸೇವಾದೀಕ್ಷಿತೆ ಆಶಾಲತಾ ,ಪಾಲ್ತಾಡು ಘಟ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಉಪಾಧ್ಯಕ್ಷ ರಾಮಣ್ಣ ರೈ ಬಾಕಿಜಾಲು, ಕಾರ್ಯದರ್ಶಿ ಕಿಶೋರ್ ಕುಮಾರ್ ಸಮೃದ್ದಿ, ನಿಕಟಪೂರ್ವ ಕಾರ್ಯದರ್ಶಿ ಹರೀಶ್ ಮಡಿವಾಳ ಹಾಗೂ ಘಟ ಸಮಿತಿಯ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.













