







ಪುತ್ತೂರು: ಬೆಂಗಳೂರಿನ ಪ್ರತಿಷ್ಠಿತ ‘ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ’ ಸಂಸ್ಥೆ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನೋರೋಗ ತಜ್ಞೆ ಡಾ| ಸುಜಯ್ ಪಾಂಡಿಯನ್ ಅವರ ಸೇವೆ ಇನ್ನು ಮುಂದೆ ಪುತ್ತೂರಿನಲ್ಲೂ ಲಭ್ಯವಾಗಲಿದೆ.


ಮೂಲತಃ ಪುತ್ತೂರಿನ ಮುಂಡೂರುನವರಾದ ಇವರ ಕುಟುಂಬವರ್ಗದವರು ಅಲ್ಲಿ ವಾಸವಿದ್ದಾರೆ. ಸಂಪ್ಯದ ಮೆಡ್ ಲ್ಯಾಂಡ್ ಆಸ್ಪತ್ರೆಯಲ್ಲಿ ಪ್ರತಿ ಭಾನುವಾರ ಲಭ್ಯರಾಗಲಿರುವ ಇವರು
ಮೈಸೂರಿನಲ್ಲಿ ಎಂ.ಬಿ.ಬಿ.ಎಸ್. ಮತ್ತು ಕಂಕನಾಡಿ ಫಾದರ್ ಮುಲ್ಲರ್ ನಲ್ಲಿ ಸೈಕಿಯಾಟ್ರಿಸ್ಟ್ ಅಭ್ಯಾಸ ಮಾಡಿದ್ದಾರೆ. ಜತೆಗೆ ಕಾಸರಗೋಡಿನ ಪ್ರಸಿದ್ಧ ‘ಯುನೈಟೆಡ್ ಆಸ್ಪತ್ರೆ’ಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಕೇರಳ ಸರ್ಕಾರದ ಮನೋವೈದ್ಯ ತಂಡದಲ್ಲೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.



ಸೋಮವಾರಪೇಟೆ, ಮಡಿಕೇರಿ, ಸುಳ್ಯ, ಬೇಕಲ, ಬದಿಯಡ್ಕ, ಉಪ್ಪಳ ಸೇರಿದಂತೆ ವಿವಿಧ ಭಾಗಗಳಿಂದ ಮನೋರೋಗಿಗಳು ಚಿಕಿತ್ಸೆಗಾಗಿ ಅವರ ಕಾಸರಗೋಡಿನ ಕ್ಲಿನಿಕ್ ಗೆ ಬರುತ್ತಿದ್ದಾರೆ. ಪುತ್ತೂರಿನ ಮನೋರೋಗಿಗಳ ಅನುಕೂಲಕ್ಕಾಗಿ ಡಾ| ಸುಜಯ್ ಪಾಂಡಿಯನ್ ಅವರು ವಾರಕ್ಕೆ ಎರಡು ದಿನ ಪುತ್ತೂರಿಗೆ ಬಂದು ಚಿಕಿತ್ಸೆ ನೀಡಲಿದ್ದಾರೆ.ಇದಲ್ಲದೆ, ಚಿಕಿತ್ಸೆಯಿಂದ ಗುಣಮುಖರಾದ ಅನಾಥ ಮನೋರೋಗಿಗಳಿಗಾಗಿ ಟ್ರಸ್ಟ್ ಸ್ಥಾಪಿಸಿ ಅವರಿಗೆ ಸ್ವಉದ್ಯೋಗ ಕಲ್ಪಿಸುವ ಯೋಜನೆಯನ್ನೂ ಅವರು ಹೊಂದಿದ್ದಾರೆ. ಅರವತ್ತರ ಹರೆಯದಲ್ಲೂ ಚಲನಶೀಲರಾಗಿರುವ ಡಾ| ಸುಜಯ್ ಪಾಂಡಿಯನ್ ಅವರು ಪುತ್ತೂರಿನ ಯಾವ ಕ್ಲಿನಿಕ್ ನಲ್ಲಿ ಲಭ್ಯ ಎಂಬ ಮಾಹಿತಿಗೆ ನೇರವಾಗಿ ಸಂಪರ್ಕಿಸಬಹುದು.
ಸಂಪರ್ಕ: ಡಾ| ಸುಜಯ್ ಪಾಂಡಿಯನ್ – 94474 69776










