ಶಿವಸದನದಲ್ಲಿ ವಿಪ್ರಸಮಾಗಮ ವೇದಿಕೆಯಿಂದ ಕಲಾಸಂಗಮ

0

ಪುತ್ತೂರು: ಪುತ್ತೂರಿನ ಮುರದಲ್ಲಿರುವ ‘ಶಿವಸದನ’ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ವಸತಿ ನಿಲಯದಲ್ಲಿ ಮಂಗಳೂರಿನ ವಿಪ್ರಸಮಾಗಮ ವೇದಿಕೆಯ ವತಿಯಿಂದ ಆಯೋಜಿಸಲಾದ ಕಲಾಸಂಗಮ ಕಾರ್ಯಕ್ರಮ ನಡೆಯಿತು.

ಭಜನೆ, ಸಂಗೀತ, ನೃತ್ಯ, ಕೊಳಲು ವಾದನ, ಜಾನಪದ ಹಾಡು ಮುಂತಾದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.ಶಿವಸದನ ಚಾರಿಟೇಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ರಘುನಾಥ ರಾವ್, ಕಾರ್ಯದರ್ಶಿ ಕರುಣ್ ಬೆಳ್ಳೆ, ಟ್ರಸ್ಟ್ ಸದಸ್ಯರಾದ ಚೇತನ್ ಶರ್ಮಾ ಮತ್ತು ಸಂತೋಷ್ ಉಜ್ಜೋಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಟ್ರಸ್ಟ್‌ನ ಅಧ್ಯಕ್ಷೆ ಸುಮಂಗಲ ಪ್ರಭಾಕರ್ ಸ್ವಾಗತಿಸಿದರು. ಟ್ರಸ್ಟಿ ಶ್ರೀಕಾಂತ್ ರಾವ್ ಅವರು ಶಿವಸದನ ಬೆಳೆದು ಬಂದ ದಾರಿಯನ್ನು ವಿವರಿಸಿದರು.ಶಾರದಾ ವಿದ್ಯಾಲಯದ ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ್ ಮೆಚ್ಚುಗೆಯ ಮಾತನಾಡಿದರು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಶುಭಾಶಯ ಕೋರಿದರು. ವಿಪ್ರಸಮಾಗಮ ವೇದಿಕೆಯ ಅಧ್ಯಕ್ಷ ಶೇಷಾದ್ರಿ ಭಟ್ ಅವರು ಕಾರ್ಯಕ್ರಮ ವೀಕ್ಷಿಸಿ ಸ್ಪೂರ್ತಿಗೊಂಡು, ಟ್ರಸ್ಟ್ ಸದಸ್ಯ ಸಂತೋಷ್ ಉಜ್ಜೋಡಿ ಅವರೊಂದಿಗೆ ಊಟದ ಟೇಬಲ್ ನೀಡಿದರು.

ಟ್ರಸ್ಟ್‌ನ ಕೋಶಾಧಿಕಾರಿ ದಿನಕರ ರಾವ್ ಅವರು ದೇಣಿಗೆ ನೀಡಿದ ವಿಪ್ರಸಮಾಗಮ ವೇದಿಕೆಯ ಸದಸ್ಯರು, ಪುತ್ತೂರಿನ ಬಂಧುಗಳು, ಟ್ರಸ್ಟ್ ಸದಸ್ಯರು, ಹಿರಿಯರು, ವಿಶೇಷ ಚೇತನ ಮಕ್ಕಳು, ಸಿಬ್ಬಂದಿ, ಮ್ಯಾನೇಜರ್, ಮ್ಯಾಟ್ರನ್ ವಂದಿಸಿದರು. ಕಾರ್ಯಕ್ರಮವನ್ನು ಪೂರ್ಣಿಮಾ ಪೇಜಾವರ್ ನಿರೂಪಿಸಿದರು.

LEAVE A REPLY

Please enter your comment!
Please enter your name here