ಬಡಕೋಡಿ: ವ್ಯಕ್ತಿಗೆ ಹಲ್ಲೆ ಪ್ರಕರಣ – ಇಬ್ಬರು ಆರೋಪಿಗಳು ದೋಷಮುಕ್ತ

0

ಪುತ್ತೂರು:ಸರ್ವೆ ಸಮೀಪದ ಬಡಕೋಡಿಯಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿಗಳಿಬ್ಬರನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿದೆ.


2024ರ ಅ.19ರಂದು ರಾತ್ರಿ ಬಡಕೋಡಿ ನಿವಾಸಿ ಮಹಮ್ಮದ್ ಸುಹೈಲ್ ಅವರು ರಿಕ್ಷಾ ನಿಲ್ಲಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಇರ್ಫಾನ್ ಎಂಬಾತ ಹಲ್ಲೆ ನಡೆಸಿದ್ದಲ್ಲದೆ,ಸ್ಥಳಕ್ಕೆ ಬಂದ ಇ-ನ್ ಅವರ ತಂದೆ ಇಸ್ಮಾಯಿಲ್ ಅವರೂ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.ಈ ಕುರಿತು ಮಹಮ್ಮದ್ ಸುಹೈಲ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ಮೋಹಿನಿ ಶೆಟ್ಟಿ ವಾದಿಸಿದ್ದರು.

LEAVE A REPLY

Please enter your comment!
Please enter your name here