







ಪುತ್ತೂರು:3 ವರ್ಷದ ಹಿಂದೆ ಮಾಡ್ನೂರು ಗ್ರಾಮದ ಅಮ್ಚಿನಡ್ಕದಲ್ಲಿ ನಡೆದ ಅಡಿಕೆ ಕಳವು ಪ್ರಕರಣದ ಮೂವರು ಆರೋಪಿಗಳನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.


2023ರ ಸೆ.3ರಂದು ಮಾಡ್ನೂರು ಗ್ರಾಮದ ಅಮ್ಚಿನಡ್ಕ ‘ಭಾರವಿ’ ಮನೆಯ ವಿಷ್ಣು ಕಲ್ಲೂರಾಯ ಅವರ ಮನೆಯ ಉಗ್ರಾಣದಲ್ಲಿಟ್ಟಿದ್ದ 2 ಕ್ವಿಂಟಾಲ್ ಅಡಿಕೆ ಮತ್ತು ಹುಲ್ಲು ತೆಗೆಯುವ ಮೆಷಿನ್ ಕಳವಾಗಿತ್ತು.ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು.ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಕಿರಣ್ ಕುಮಾರ್, ಸಂತೋಷ್, ಮೊಹಮ್ಮದ್ ಸಿನ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದರು.ವಿಚಾರಣೆ ನಡಸಿದ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ಮೋಹಿನಿ ಶೆಟ್ಟಿ ವಾದಿಸಿದ್ದರು.













