ಪಡುಬೆಟ್ಟು ಸೌಹಾರ್ದ ಫ್ರೆಂಡ್ಸ್ ಕ್ಲಬ್ ಪುನರ್‌ರಚನೆ

0

ಗೌರವಾಧ್ಯಕ್ಷ: ಮಹಾಲಿಂಗ ಕೆ., ಅಧ್ಯಕ್ಷ: ಸಲಾಂ ಬಿಲಾಲ್, ಪ್ರಧಾನ ಕಾರ್ಯದರ್ಶಿ: ಚೇತನ್ ಪಿ.

ನೆಲ್ಯಾಡಿ: ಸೌಹಾರ್ದ ಫ್ರೆಂಡ್ಸ್ ಕ್ಲಬ್ ಪಡುಬೆಟ್ಟು ಇದರ ಪುನರ್ ರಚನಾ ಸಭೆಯು ಸಲಾಂ ಬಿಲಾಲ್ ಇವರ ಅಧ್ಯಕ್ಷತೆಯಲ್ಲಿ ಪಡುಬೆಟ್ಟು ಶಾಲಾ ಬಳಿ ನಡೆಯಿತು.


ಗೌರವಾಧ್ಯಕ್ಷರಾಗಿ ಮಹಾಲಿಂಗ ಕೆ., ಅಧ್ಯಕ್ಷರಾಗಿ ಸಲಾಂ ಬಿಲಾಲ್, ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಪಿ., ಆಯ್ಕೆಯಾಗಿದ್ದಾರೆ. ಉಳಿದಂತೆ ಕೋಶಾಧಿಕಾರಿಯಾಗಿ ಸಮೀರುದ್ದೀನ್, ಕ್ರೀಡಾ ಕಾರ್ಯದರ್ಶಿಯಾಗಿ ಫಾರೂಕ್, ಉಪಾಧ್ಯಕ್ಷರಾಗಿ ಇಕ್ಬಾಲ್, ಗೋಪಾಲಕೃಷ್ಣ, ಜೊತೆ ಕಾರ್ಯದರ್ಶಿಯಾಗಿ ತೌಫಿಕ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಬೀರ್ ತಾಜ್, ಸಿನಾನ್, ವೀರಪ್ಪ ಕೆ., ಶೇಖರ ಕಲ್ಲಚೆಡವು, ಹನೀಫ್ ಉಳಿತ್ತೊಟ್ಟು, ಸ್ವಾಲಿ ಪಡುಬೆಟ್ಟು, ಗೌರವ ಸಲಹೆಗಾರರಾಗಿ ಅಣ್ಣಿ ಏಳ್ತಿಮಾರ್, ಗಂಗಾಧರ ಶೆಟ್ಟಿ ಹೊಸಮನೆ ಹಾಗೂ ಶರೀಫ್ ತಾಜ್ ಆಯ್ಕೆಯಾಗಿದ್ದಾರೆ. ಮಹಾಲಿಂಗ ಕೆ.ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ್ ಪಿ.ಸ್ವಾಗತಿಸಿದರು. ಕಬೀರ್ ತಾಜ್ ವಂದಿಸಿದರು. ತೌಫಿಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here