ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ

0

ಅಧ್ಯಕ್ಷ: ಮಂಜುನಾಥ ನಾಯ್ಕ ಎನ್.ಎಸ್,ಕಾರ್ಯದರ್ಶಿ: ರಾಮಚಂದ್ರ ನಾಯ್ಕ, ಕೋಶಾಧಿಕಾರಿ:ಶಿವಪ್ಪ ನಾಯ್ಕ ಎಸ್

ಪುತ್ತೂರು: ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಆ.2 ರಂದು ಚುನಾವಣಾಧಿಕಾರಿಗಳಾದ ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸು ನಾಯ್ಕ ಹಾಗೂ ನ್ಯಾಯವಾದಿ ಮಂಜುನಾಥ ನಾಯ್ಕ ಎನ್.ಎಸ್ ರವರ ಮುಂದಾಳತ್ವದಲ್ಲಿ ಜರಗಿತು.


ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಮಂಜುನಾಥ ನಾಯ್ಕ ಎನ್. ಎಸ್, ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಬಲ್ನಾಡ್, ಕಾರ್ಯದರ್ಶಿಯಾಗಿ ರಾಮಚಂದ್ರ ನಾಯ್ಕ ಕೇಪುಲು, ಜೊತೆ ಕಾರ್ಯದರ್ಶಿಯಾಗಿ ಮೋಹನ ನಾಯ್ಕ ದರ್ಬೆ, ಕೋಶಾಧಿಕಾರಿಯಾಗಿ ಶಿವಪ್ಪ ನಾಯ್ಕ ಎಸ್ ನೆಹರುನಗರ, ಸಂಘಟನಾ ಕಾರ್ಯದರ್ಶಿಗಳಾಗಿ ಬಾಲಕೃಷ್ಣ ನಾಯ್ಕ ಕಪ್ಪೆಕೆರೆ, ಪರಮೇಶ್ವರ ನಾಯ್ಕ ಪಾಂಗ್ಲಾಯಿ, ರಾಮ ನಾಯ್ಕ ಗೆಣಸಿನಕುಮೇರು, ಗಿರೀಶ್ ನಾಯ್ಕ ಸೊರಕೆ, ಸದಾನಂದ ಭರಣ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಂಗಾಧರ ಕೌಡಿಚ್ಚಾರು(ಅರಿಯಡ್ಕ ಗ್ರಾಮ), ರಾಮ ನಾಯ್ಕ ಗೆಣಸಿನಕುಮೇರು(ಆರ್ಯಾಪು), ಬಾಲಕೃಷ್ಣ ನಾಯ್ಕ ಕಪ್ಪೆಕೆರೆ(ಸಾಜ ಬಲ್ನಾಡು), ಅಶೋಕ್ ಬಲ್ನಾಡು(ಉಜ್ರುಪಾದೆ), ಮಂಜುನಾಥ ಎನ್.ಎಸ್(ಇರ್ದೆ ಬೆಟ್ಟಂಪಾಡಿ), ಮಾಯಿಲಪ್ಪ ನಾಯ್ಕ ಸಂಟ್ಯಾರು(ಒಳಮೊಗ್ರು), ಶಿವಪ್ಪ ನಾಯ್ಕ(ಕಬಕ), ಬಾಬು ನಾಯ್ಕ ಕೊಳ್ತಿಗೆ(ಕೊಳ್ತಿಗೆ-ಪೆರ್ಲಂಪಾಡಿ), ಮಹಾಲಿಂಗ ನಾಯ್ಕ(ನರಿಮೊಗರು), ಪೂವಪ್ಪ ನಾಯ್ಕ(ಮಾಡ್ನೂರು), ದೇವಪ್ಪ ನಾಯ್ಕ ಬಡಗನ್ನೂರು(ಬಡಗನ್ನೂರು), ಶೀನಪ್ಪ ನಾಯ್ಕ(ನೆಲ್ಯಾಡಿ), ತಾರಾನಾಥ ನುಳಿಯಾಲು(ನಿಡ್ಪಳ್ಳಿ), ಸುರೇಶ್ ನಾಯ್ಕ(ಈಶ್ವರಮಂಗಿಲ), ಸದಾನಂದ ಭರಣ್ಯ(ಪಾಣಾಜೆ), ಸುಬ್ಬಣ್ಣ ನಾಯ್ಕ(ಪಡ್ನೂರು), ಗಿರೀಶ್ ಸೊರಕೆ(ಸರ್ವೆ-ಕೆದಂಬಾಡಿ), ಹೊನ್ನಪ್ಪ ನಾಯ್ಕ(ಸಂಪ್ಯ-ಆರ್ಯಾಪು-ಕುರಿಯ), ಧರ್ಣಪ್ಪ ನಾಯ್ಕ (ಉಪ್ಪಿನಂಗಡಿ-ನೆಕ್ಕಿಲಾಡಿ), ಮಹಿಳಾ ಸದಸ್ಯರಾಗಿ ವಿಜಯ ಪರ್ಲಡ್ಕ, ಯಮುನಾ ಪಟ್ಟೆ, ಪುತ್ತೂರು ನಗರದಿಂದ ಕರುಣಾಕರ ಪಾಂಗ್ಲಾಯಿ, ವಾಸು ನಾಯ್ಕ ಗಣೇಶ್ ಬಾಗ್, ಅಶೋಕ್ ಬನ್ನೂರು, ಕೆ.ಈಶ್ವರ ನಾಯ್ಕ ನೆಹರುನಗರ, ರಾಮಚಂದ್ರ ನಾಯ್ಕ ಕೇಪುಳು, ಸುಂದರ ನಾಯ್ಕ ಬಪ್ಪಳಿಗೆ, ಶೀನ ನಾಯ್ಕ ಗಣೇಶ್ ಬಾಗ್, ಪರಮೇಶ್ವರ ನಾಯ್ಕ ಪಾಂಗ್ಲಾಯಿ, ವೆಂಕಪ್ಪ ನಾಯ್ಕ ನಗರ, ಪುಷ್ಪರಾಜ್ ನಾಯ್ಕ ಪಾಂಗ್ಲಾಯಿ, ಮೋಹನ್ ನಾಯ್ಕ ದರ್ಬೆ, ಜೆ.ಸುಬ್ಬಣ್ಣ ನಾಯ್ಕ ಕೃಷ್ಣನಗರ, ಪಿ.ಎಂ ಕೃಷ್ಣ ನಾಯ್ಕ ಕೃಷ್ಣನಗರ, ಬಾಲಕೃಷ್ಣ ನಾಯ್ಕ ಪಡೀಲು, ದುಗ್ಗಪ್ಪ ನಾಯ್ಕ ಬಡಾವುರವರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷ/ಕಾರ್ಯದರ್ಶಿ/ಕೋಶಾಧಿಕಾರಿ ಪರಿಚಯ..
ನೂತನ ಅಧ್ಯಕ್ಷರಾದ ಮಂಜುನಾಥ್ ನಾಯ್ಕ ಎನ್.ಎಸ್ ರವರು ಸಂಘದ ಮಾಜಿ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ ಇದರ ಉಪಾಧ್ಯಕ್ಷರಾಗಿ, ಪುತ್ತೂರಿನ ಲ್ಯಾoಪ್ಸ್ ಸಹಕಾರಿ ಸಂಘದ ನಿರ್ದೇಶಕರಾಗಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ, ವೃತ್ತಿಯಲ್ಲಿ ಪುತ್ತೂರಿನಲ್ಲಿ ನೋಟರಿ ವಕೀಲರಾಗಿರುತ್ತಾರೆ. ನೂತನ ಕಾರ್ಯದರ್ಶಿಯಾಗಿರುವ ರಾಮಚಂದ್ರ ನಾಯ್ಕರವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಆಗಿದ್ದು, ಪುತ್ತೂರು ಮರಾಟಿ ಸಮಾಜ ಸೇವಾ ಸಂಘದಲ್ಲಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ನೂತನ ಕೋಶಾಧಿಕಾರಿಯಾಗಿರುವ ಶಿವಪ್ಪ ನಾಯ್ಕರವರು ಕೆನರಾ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಆಗಿ, ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ. ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯವರು ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ ಇದರ ಆಡಳಿತ ಮಂಡಳಿ ಸದಸ್ಯರಾಗಿರುತ್ತಾರೆ.

LEAVE A REPLY

Please enter your comment!
Please enter your name here