ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

0

ಪುತ್ತೂರು : ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ’ಮಹತಿ’ ಕನ್ನಡ ಸಂಘದ ವತಿಯಿಂದ ಗುರುಪೂರ್ಣಿಮೆ ಆಚರಣೆ ಮಾಡಲಾಯಿತು.

ಶಾಲಾ ಹಿರಿಯ ಶಿಕ್ಷಕಿ ರೇವತಿ ಮಾತನಾಡಿ ಗುರುಗಳ ಮಾರ್ಗದರ್ಶನವನ್ನು ಪ್ರಾಮಾಣಿಕವಾಗಿ ಅನುಸರಿಸಿದವನಿಗೆ ಜೀವನದಲ್ಲಿ ಎಂದಿಗೂ ಸೋಲೆಂಬುದು ಇರುವುದಿಲ್ಲ ಎಂದು ಹೇಳಿ ಗುರುಪೂರ್ಣಿಮೆಯ ವಿಶೇಷತೆಯನ್ನು ತಿಳಿಸಿದರು.

ವಿದ್ಯಾರ್ಥಿಗಳಾದ ಮೌಲ್ಯ, ಶ್ರುತಿ, ಸೃಜನ್ ಇವರು ಸಮರ್ಥ ರಾಮದಾಸ-ಛತ್ರಪತಿ ಶಿವಾಜಿ, ಮಹರ್ಷಿ ವೇದವ್ಯಾಸ, ದ್ರೋಣಾಚಾರ್ಯ-ಅರ್ಜುನರ ಗುರು ಶಿಷ್ಯ ಸಂಬಂಧದ ಬಗ್ಗೆ ಘಟನೆಗಳೊಂದಿಗೆ ತಿಳಿಸಿದರು. ಶಾಲೆಯ ಎಲ್ಲಾ ಗುರು ವೃಂದದವರು ವ್ಯಾಸ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗುರುನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here