







ಪುತ್ತೂರು: ಕಡಬ ತಾಲೂಕು ಕೋಡಿಂಬಾಳ ಕೋಲ್ಪೆ ನಿವಾಸಿ ಮೋನಪ್ಪ ಗೌಡ (78ವ)ರವರು ಅಲ್ಪಕಾಲದ ಅಸೌಖ್ಯದಿಂದ ಜು.30 ರಂದು ನಿಧನರಾದರು.


ಕೃಷಿಕರಾಗಿದ್ದ ಇವರು ಭಾರತ್ ರೈಲ್ವೆ ಇಲಾಖೆಯಲ್ಲಿ ಗ್ಯಾಂಗ್ಮೇಟ್ ಆಗಿ 35 ವರ್ಷ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಹೊನ್ನಮ್ಮ, ಪುತ್ರ ಗಣೇಶ್, ಪುತ್ರಿಯರಾದ ಯಶೋಧ, ಲತಾ ಕುಮಾರಿ, ಅಳಿಯಂದಿರು, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.













