ಪುತ್ತೂರು ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ದುರಸ್ಥಿಗಾಗಿ ಕೈಗಾರಿಕಾ ಸಂಘದಿಂದ ನಗರಸಭೆ ಪೌರಾಯುಕ್ತರಿಗೆ ಮನವಿ

0

ಪುತ್ತೂರು: ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಕೈಗಾರಿಕಾ ವಲಯದಲ್ಲಿರುವ ನಿವೇಶನಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ತಿ ಮತ್ತು ಕಾಂಕ್ರೀಟಿಕರಣ ಮಾಡುವಂತೆ ಪುತ್ತೂರು ಕೈಗಾರಿಕಾ ಸಂಘದ ನಿಯೋಗ ಪುತ್ತೂರು ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.


ಮುಕ್ರಂಪಾಡಿಯಲ್ಲಿರುವ ಕೈಗಾರಿಕಾ ವಲಯದಲ್ಲಿ ನಿವೇಶನಗಳಿಗೆ ಮೊಟ್ಟೆತಡ್ಕ ಕಡೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹದೆಗೆಟ್ಟಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.ಈ ರಸ್ತೆಯ ದುಸ್ಥಿತಿಯಿಂದ ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಛಾವಸ್ತುಗಳ ಸಾಗಾಟ ಮತ್ತು ತಯಾರಾದ ಉತ್ಪನಗಳ ರವಾನೆಯಲ್ಲಿ ಬಹಳಷ್ಟು ತೊಂದರೆ ಆಗಿದೆ. ಈ ಭಾಗದ ಫಲಾನುಭವಿಗಳು ತೆರಿಗಳನ್ನು ನಗರಭೆಗೆ ಸಮರ್ಪಕವಾಗಿ ಸಲ್ಲಿಸುತ್ತಿದ್ದಾರೆ. ಹಾಗಾಗಿ ಈ ರಸ್ತೆಗೆ ತಾತ್ಕಾಲಿಕ ಪರಿಹಾರವಾಗಿ ದುರಸ್ತಿ ಮಾಡಿ ಮುಂದಕ್ಕೆ ಶಾಶ್ವತವಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಕೈಗಾರಿಕಾ ಸಂಘದ ಅಧ್ಯಕ್ಷ ಎಸ್.ಆರ್.ಕೆ. ಲ್ಯಾಡರ‍್ಸ್ ಮಾಲಕ ಕೇಶವ ಅಮೈ, ಗೌರವಾಧ್ಯಕ್ಷ ಶಿವಶಂಕರ ಬೋನಂತಾಯ, ಕಾರ್ಯದರ್ಶಿ ರೂಪೇಶ್ ನಾೖಕ್‌, ಉಪಾಧ್ಯಕ್ಷ ಮಹಮ್ಮದ್ ಸಾದೀಕ್, ಕೈಗಾರಿಕೋದ್ಯಮಿ ಆರೀಪ್, ಎಸ್.ಆರ್.ಕೆ.ಲ್ಯಾಡರ‍್ಸ್ ಸಂಸ್ಥೆಯ ಸಿಬ್ಬಂದಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here