







ರಾಮಕುಂಜ: ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣ ಕಲಬುರ್ಗಿಯಲ್ಲಿ ಜು.28, 29 ಹಾಗೂ 30ರಂದು ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಕ್ರೀಡಾಕೂಟದ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡು ಸೆ.5,6,7ರಂದು ಹೈದರಾಬಾದ್ನಲ್ಲಿ ನಡೆಯುವ ಕ್ಷೇತ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.


ಬಾಲಕರ ಬಾಲವರ್ಗ ವಿಭಾಗದಲ್ಲಿ ಧನುಷ್ ಪಿ.(100 ಮೀ.ಪ್ರಥಮ, 200 ಮೀ. ಪ್ರಥಮ, 80ಮೀ. ಹರ್ಡಲ್ಸ್ ಪ್ರಥಮ) ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ. ತೇಜಸ್ವಿ (600 ಮೀ.ದ್ವಿತೀಯ), ವರ್ಣಿತ್ ಕುಮಾರ್ (ಡಿಸ್ಕಸ್ ತ್ರೋ ದ್ವಿತೀಯ) ಹಾಗೂ ಬಾಲಕರ ತಂಡ 4*100 ಮೀ.ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬಾಲಕರ ಕಿಶೋರವರ್ಗ ವಿಭಾದಲ್ಲಿ ಗಗನ್ ಎಂ.(ಎತ್ತರ ಜಿಗಿತ ಪ್ರಥಮ), ಯಶವಂತ್ ಎಸ್.ವಿ.(ಹ್ಯಾಮರ್ ತ್ರೋ ಪ್ರಥಮ), ಹರ್ಷಿತ್ ವೈ(ಹ್ಯಾಮರ್ ತ್ರೋ ದ್ವಿತೀಯ), ತನುಷ್ ಬಿ.ಎಂ.(5 ಕಿ.ಮೀ. ವೇಗದ ನಡಿಗೆ ತೃತೀಯ, ಎತ್ತರ ಜಿಗಿತ ತೃತೀಯ), ವಿನಯ್ (800 ಮೀ.ತೃತೀಯ), ಹಿತೇಶ್ ಪಿ.ಗೌಡ (300ಮೀ. ತೃತೀಯ) ಬಹುಮಾನ ಪಡೆದುಕೊಂಡಿದ್ದಾರೆ.



ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೇಮ ಬಿ., ರಾಘವ, ದಿವ್ಯ ಪಿ.ಯನ್ ತರಬೇತಿ ನೀಡಿದ್ದಾರೆ.










