ಎವಿಜಿ ಶಾಲೆಯಲ್ಲಿ ಶಿಕ್ಷಕ-ಪೋಷಕರ ಸಭೆ : ಮಕ್ಕಳ ಓದು, ಶಿಸ್ತು ಕುರಿತು ಚರ್ಚೆ- ಪೋಷಕರಿಂದ ಅಭಿಪ್ರಾಯ ಮಂಡನೆ

0

ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.24ರಂದು ಶಿಕ್ಷಕ ಪೋಷಕರ ಸಭೆ ನಡೆಯಿತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆಯಲ್ಲಿ ಅನೇಕ ಪೋಷಕರು ಭಾಗವಹಿಸಿ, ಮಕ್ಕಳ ಕಲಿಕೆ ಮತ್ತು ಶೈಕ್ಷಣಿಕ ಪ್ರಗತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.


ಸಭೆಯಲ್ಲಿ ವಿದ್ಯಾರ್ಥಿಗಳ ಓದಿನ ಪ್ರಗತಿ, ಶಿಸ್ತು ಹಾಗೂ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರು ಮತ್ತು ಪೋಷಕರು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಯಿತು. ಪೋಷಕರು ತಮ್ಮ ಸಲಹೆಗಳನ್ನು ಮಂಡಿಸಿದರು. ಶಾಲೆಯ ಸಂಚಾಲಕ ಎ.ವಿ. ನಾರಾಯಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುನೀತಾ ಭಾಗವಹಿಸಿದ್ದರು.

ವೇದಿಕೆಯಲ್ಲಿ ಶಾಲೆಯ ಉಪಾಧ್ಯಕ್ಷ ಉಮೇಶ್ ಮಳುವೇಲು, ನಿರ್ದೇಶಕ ಸೀತಾರಾಮ ಕೇವಳ, ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಹಾಗೂ ಮುಖ್ಯೋಪಾಧ್ಯಾಯ ಅಮರನಾಥ ಪಟ್ಟೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶ್ರೀವಿಕಾ, ಅನಿಕ ಮತ್ತು ಜ್ಞಾನ ಪ್ರಾರ್ಥಿಸಿದರು. ಶಿಕ್ಷಕಿ ಸುಚಿತ ಸ್ವಾಗತಿಸಿದರು. ಶ್ವೇತಾ ವಂದಿಸಿದರು. ರೀಮಾ ಲೋಬೋ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here