







ಪಾಣಾಜೆ: ಪಾಣಾಜೆ ಬಂಟರ ಸಂಘದ ಮುಂದಿನ 3 ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಆ.8 ರಂದು ನಡೆಯಿತು.


ಗೌರವಾಧ್ಯಕ್ಷರಾಗಿ ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ, ಎಸ್‌ಸಿಡಿಸಿಸಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಗೌರವ ಸಲಹೆಗರರಾಗಿ ಉದ್ಯಮಿ ಜಗನ್ಮೋಹನ್ ರೈ ಸೂರಂಬೈಲು, ಅಧ್ಯಕ್ಷರಾಗಿ ಮಾಜಿ ಸೈನಿಕ ರಮನಾಥ ರೈ ಪಡ್ಯಂಬೆಟ್ಟು, ಉಪಾಧ್ಯಕ್ಷರಾಗಿ ಸದಾಶಿವ ರೈ ಸೂರಂಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಶಿಕ್ಷಕ ಮನೋಜ್ ರೈ ಸೂರಂಬೈಲು, ಕಾರ್ಯದರ್ಶಿಯಾಗಿ ಪಾಣಾಜೆ ಗ್ರಾ.ಪಂ. ಮಾಜಿ ಸದಸ್ಯ ಸುಭಾಸ್ ರೈ ಚೆಂಬರಕಟ್ಟ, ಕೋಶಾಧಿಕಾರಿಯಾಗಿ ಪಾಣಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ವೇಳೆ ಸಂಘದ ನಿಕಟಪೂರ್ವ ಪದಾಧಿಕಾರಿಗಳು, ಸದಸ್ಯರು, ಬಂಟ ಸಮುದಾಯದವರು ಉಪಸ್ಥಿತರಿದ್ದರು.













