







ಪುತ್ತೂರು: ಅಂಬಾ ಬ್ರದರ್ಸ್ ಸವಣೂರು ಇದರ ಆಶ್ರಯದಲ್ಲಿ ಸವಣೂರು ಬಸದಿ ಬಳಿಯ ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್ ಇವರ ಗದ್ದೆಯಲ್ಲಿ ಕೆಸರ್ದ ಕಂಡೊಡು ಕುಸಲ್ದಗೊಬ್ಬು ಕಾರ್ಯಕ್ರಮ ಅದ್ದೂರಿಯಾಗಿ ಆ.9ರಂದು ನಡೆಯಿತು.


ತುಂಬಾ ಸಂತೋಷ ತಂದಿದೆ- ನಿರ್ಮಲ್ ಕುಮಾರ್ ಜೈನ್
ನ್ಯಾಯವಾದಿಗಳು ಗದ್ದೆಯ ಮಾಲಕರೂ ಆದ ನಿರ್ಮಲ್ ಕುಮಾರ್ ಜೈನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ನನ್ನ ಗದ್ದೆಯಲ್ಲಿ ಕಳೆದ ೫ ವರ್ಷಗಳಿಂದ ಅಂಬಾ ಬ್ರದರ್ಸ್ ತಂಡದ ಬಾಲಚಂದ್ರ ರೈ ಕೆರೆಕ್ಕೋಡಿ ಮತ್ತು ತಂಡದವರು ಅನೇಕ ಕಾರ್ಯಕ್ರಮಗಳನ್ನು ಮಾಡಿ ಕೊಂಡು ಬಂದಿದ್ದಾರೆ, ಇದು ನನಗೆ ತುಂಬಾ ಸಂತೋಷ ತಂದಿದೆ, ಗದ್ದೆ ಬೇಸಾಯ, ಕೆಸರಿನಲ್ಲಿ ಆಟೋಟ ಸ್ವರ್ಧೆಗಳನ್ನು ಮಾಡುವ ಮೂಲಕ, ಊರಿನ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ನಮ್ಮ ಸಂಸ್ಕೃತಿಯ ಪರಿಚಯವನ್ನು ಮಾಡಿ ತೋರಿಸಿದ್ದಾರೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.




ಅತ್ಯಂತ ಸಂತಸವನ್ನು ತರುವ ಕಾರ್ಯಕ್ರಮವಾಗಿದೆ- ಕೃಷ್ಣಕುಮಾರ್ ರೈ ದೇವಸ್ಯ
ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಅಂಬಾ ಬ್ರದರ್ಸ್ ತಂಡದ ಸದಸ್ಯರು ನಡೆಸುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ನಮ್ಮ ಸಂಸ್ಕೃತಿ ಆಚಾರ-ವಿಚಾರಗಳು ನಿಜಕ್ಕೂ ಅತ್ಯಂತ ಶ್ರೇಷ್ಠವಾದದ್ದು, ಇದನ್ನು ಉಳಿಸಿ ಬೆಳೆಸುತ್ತಿರುವ ಅಂಬಾ ಬ್ರದರ್ಸ್ ತಂಡದ ಪ್ರಯತ್ನ ಶ್ಲಾಘನೀಯ ಎಂದರು.
ಸಮಾಜಮುಖಿ ಕಾರ್ಯಕ್ರಮ- ರಾಕೇಶ್ ರೈ ಕೆಡೆಂಜಿ
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡಂಜಿ ಅವರು ಮಾತನಾಡಿ ಬಾಲಚಂದ್ರ ರೈ ಕೆರೆಕ್ಕೋಡಿ ಮತ್ತು ಅವರ ತಂಡ ಅಂಬಾ ಬ್ರದರ್ಸ್ ಸಂಘಟನೆಯ ಮುಖಾಂತರ ಒಳ್ಳೆಯ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದಾರೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.

ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲಯಾದ ರಾಜಲಕ್ಷ್ಮಿ ಎಸ್ ರೈರವರು ಸಂದಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ರಾಜ್ಯ ಯುವಜನ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸುಡಿಮುಳ್ಳು, ಸವಣೂರು ಜಿನಬಸದಿಯ ಆರ್ಚಕ ಶ್ರೇಯಾಂಸ್ ಕುಮಾರ್ ಇಂದ್ರ, ಸವಣೂರು ಗ್ರಾ.ಪಂ, ನಿಕಟಪೂರ್ವ ಸದಸ್ಯ ತೀರ್ಥರಾಮ್ ಕೆಡೆಂಜಿ,, ಸವಣೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಭರತ್, ಅಂಬಾ ಬ್ರದರ್ಸ್ ತಂಡದ ಹಿರಿಯ ಸದಸ್ಯ ಜಯರಾಮ ರೈ ಮೂಡಂಬೈಲು, ಸುದ್ದಿಬಿಡುಗಡೆ ದಿನಪತ್ರಿಕೆಯ ಹಿರಿಯ ವರದಿಗಾರ ಉಮಾಪ್ರಸಾದ್ ರೈ ನಡುಬೈಲು, ಸಾಮಾಜಿಕ ಮುಂದಾಳು ರಾಮಕೃಷ್ಣ ಪ್ರಭು ಉಪಸ್ಥಿತರಿದ್ದರು

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಚ ಚೇತನ್ ಕುಮಾರ್ ಕೋಡಿಬೈಲು, ಕೆದಂಬಾಡಿ-ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಉದ್ಯಮಿ ರಾಜರಾಮ್ ಪ್ರಭು ಅಶ್ವಿನಿ ಫಾರ್ಮ್, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಸಚಿನ್ ಸವಣೂರು, ದಿವಾಕರ್ ಬಸ್ತಿ, ಸವಣೂರು ಗ್ರಾ.ಪಂ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ವಿದ್ಯಾರಶ್ಮಿ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ಆಳ್ವ, ಕಾಣಿಯೂರು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ, ಶೋಭಾ ರೈ ಕೆರೆಕ್ಕೋಡಿ ಸಹಿತ ಅನೇಕ ಮಂದಿ ಭಾಗವಹಿಸಿದ್ದರು. ನಿಭಾ ರೈ ಕೆರೆಕ್ಕೋಡಿ ಪ್ರಾರ್ಥನೆಗೈದರು. ಅಂಬಾ ಬ್ರದರ್ಸ್ ತಂಡದ ಸದಸ್ಯ ಬಾಲಚಂದ್ರ ರೈ ಕೆರೆಕ್ಕೋಡಿ ಸ್ವಾಗತಿಸಿದರು.ಲಿಖಿತ್ ರೈ ಕಲಾಯಿ ಕಾರ್ಯಕ್ರಮ ನಿರೂಪಿಸಿದರು. ಅಂಬಾ ಬ್ರದರ್ಸ್ ತಂಡದ ಸದಸ್ಯರುಗಳು ಅತಿಥಿಗಳನ್ನು ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಹಗ್ಗ ಜಗ್ಗಾಟದಲ್ಲಿ ಪ್ರಥಮ- ವಿನಾಯಕ ಫ್ರೆಂಡ್ಸ್ ಕುಂಬ್ರ ಬಿ, ದ್ವಿತೀಯ-ವಿನಾಯಕ ಫ್ರೆಂಡ್ಸ್ ಕುಂಬ್ರ ಎ, ತೃತೀಯ- ಶ್ರೀ ಸಾಯಿ ಮೊಗರು ಬಂದಾರು ಹಾಗೂ ಚತುರ್ಥ- ವಿದ್ಯಾರಶ್ಮಿ ಸವಣೂರು










