






ಹಿರೇಬಂಡಾಡಿ: ಒಕ್ಕಲಿಗ ಗೌಡ ಸೇವಾ ಸಂಘ ಹಿರೇಬಂಡಾಡಿ, ಒಕ್ಕಲಿಗ ಗೌಡ ಮಹಿಳಾ ಸಂಘ, ಒಕ್ಕಲಿಗ ಗೌಡ ಯುವ ಸಂಘ, ಮತ್ತು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಹಿರೇಬಂಡಾಡಿ ಇದರ ನೇತೃತ್ವದಲ್ಲಿ ಒಕ್ಕಲಿಗ ಗೌಡರ ಆಟಿ ಗೌಜಿ -2026 ಕಾರ್ಯಕ್ರಮ ವಿವಿಧ ಆಟೋಟ, ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮದೊಂದಿಗೆ ಅತ್ಯಂತ ಸಂಭ್ರಮದಿಂದ ಹಿರೇಬಂಡಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆ.9ರಂದು ನಡೆಯಿತು.



ಉದ್ಘಾಟನಾ ಕಾರ್ಯಕ್ರಮ
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ತಿಮ್ಮಪ್ಪ ಗೌಡ ಕಜೆಕೋಡಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರೇಬಂಡಾಡಿ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಮಠ೦ದೂರು ಅಧ್ಯಕ್ಷತೆ ವಹಿಸಿದ್ದರು, ಮರದಮೇಲು ಮಂಜುಶ್ರೀ ಭಜನಾ ಮಂದಿರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮಾಧವ ಗೌಡ ಹೆನ್ನಾಳ, ಹೀರೆಬಂಡಾಡಿ ಉಳತೊಡಿ ಶ್ರೀ ಷಣ್ಮುಖ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸುರೇಶ್ ಕಜೆ, ಮಾಗಣೆ ಗೌಡ್ರುಗಳಾದ ಯಾನಪ್ಪ ಗೌಡ ಬಂಡಾಡಿ, ಊರ ಗೌಡರುಗಳಾದ ಜನಾರ್ಧನ ಗೌಡ ಶಾಂತಿದಡ್ಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಯುವ ಒಕ್ಕಲಿಗ ಘಟಕದ ಜೊತೆ ಕಾರ್ಯದರ್ಶಿ ರಾಧಾಕೃಷ್ಣ ಸ್ವಾಗತಿಸಿ ಒಕ್ಕಲಿಗ ಸ್ವ ಸಹಾಯ ಒಕ್ಕೂಟದ ಜತೆ ಕಾರ್ಯದರ್ಶಿ ಶುಭಲತಾ ವಂದಿಸಿದರು.




ಯುವ ಸಮುದಾಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು -ಸಂಜೀವ ಮಠಂದೂರು
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಸಂಜೀವ ಮಠ0ದೂರು ಸಮುದಾಯದ ಯುವಕ ಯುವತಿಯರು ಸಮುದಾಯದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜವನ್ನು ಸಂಘಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು, ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉನ್ನತ ನಾಯಕರಾಗಿ ಮೂಡಿ ಬರಬೇಕು ಎಂದರು.

ತಾಲೂಕಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮ,ಕಾರ್ಯಯೋಜನೆಗಳಲ್ಲಿ ಗ್ರಾಮದ ಸಮಾಜ ಭಾಂದವರು ಕೈ ಜೋಡಿಸಬೇಕು- ಸುಂದರ ಗೌಡ ನಡುಬೈಲು
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಸುಂದರ ಗೌಡ ನಡಬೈಲು ಮಾತನಾಡಿ ಸಮುದಾಯದ ಸಂಘಟನೆಗಾಗಿ ನಡೆಯುವ ಸಮಾಜಜಮುಖಿ ಕಾರ್ಯಕ್ರಮ, ಸದಸ್ಯತ್ವ ಅಭಿಯಾನ,ಜಾತಿ ಸಮೀಕ್ಷೆ ಮುಂತಾದ ಕಾರ್ಯಯೋಜನೆಗಳಲ್ಲಿ ಗ್ರಾಮದ ಪ್ರತಿ ಮನೆಯ ಸಮಾಜಭಾಂದವರು ಸಮುದಾಯದ ಅಭಿವೃದ್ಧಿಗಾಗಿ ಕೈ ಜೋಡಿಸಿಕೊಳ್ಳುವಂತೆ ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಕೇಶವ ಗೌಡ ಎ.ಎಂ, ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿಯ ಉಪ ತಹಸೀಲ್ದಾರರಾದ ಕವಿತಾ ಎಸ್,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರೇಬಂಡಾಡಿ ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಅಧ್ಯಕ್ಷರಾದ ಸುಬ್ರಾಯ ಗೌಡ ಪನ್ನೊಟ್ಟು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು, ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಗೌಡ ಕೆಯ್ಯುರೂ, ಉಪಾಧ್ಯಕ್ಷರು ಪುರುಷೋತ್ತಮ ಮುಂಗ್ಲಿಮನೆ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಉಪಾಧ್ಯಕ್ಷರು ದಿವ್ಯೆಶ್ ಕಲ್ಯ, ಹಿರೇಬಂಡಾಡಿ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಮಠ0ದೂರು, ಮಹಿಳಾ ಘಟಕದ ಅಧ್ಯಕ್ಷರು ಚಂದ್ರಾವತಿ, ಯುವ ಘಟಕದ ಅಧ್ಯಕ್ಷರಾದ ಗಣೇಶ್ ಕರೆಂಕಿ, ಭಾಗೀರಥಿ ಬಂಡಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ
2025-2026 ನೇ ಶೈಕ್ಷಣಿಕ ಸಾಲಿನಲ್ಲಿ 7 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಲಕ್ಷ್ಯ, ವರೀತ ಕುಬಲ, ವೈಷ್ಣವಿ ಸಿಂಕ್ರುಕೊಡಂಗೆ, ಖುಷಿ, ವೇದಿಕ್ಷಾ ಮತ್ತು ಎಸ್ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಯಾಕ್ಷಿತಾ ಹೊಸಮನೆ, ತನುಶ್ರೀ ಮುಗುಳಿ, ಮೌಲ್ಯಶ್ರೀ ಕಟ್ಟಮನೆ, ನಿಶಾ ಪೆಲತ್ತಡಿ, ತೀರ್ಥಶ್ ಪಂಜಲಪ್ಪು ಇವರುಗಳಿಗೆ ಉಮೇಶ್ ಬಂಡಾಡಿ ಇವರ ಪ್ರಾಯೋಜಕತ್ವದಲ್ಲಿ ಇವರ ಪತ್ನಿ ಭಾಗೀರಥಿ ಬಂಡಾಡಿ ಇವರು ನಗದು ಬಹುಮಾನ ನೀಡಿ ಗೌರವಿಸಿದರು. ಹಾಗೂ ಒಕ್ಕಲಿಗ ಗೌಡ ಸೇವಾ ಸಂಘ ಗ್ರಾಮ ಸಮಿತಿಯಿಂದ 2025-2026 ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ 90% ಹೆಚ್ಚು ಅಂಕ ಗಳಿಸಿದ ತನ್ವಿ ಕನ್ಯಾನ, ಯಕ್ಷಿತ್ ಜೆ ಹೆಚ್, ಪಿಯುಸಿ ಯಲ್ಲಿ ಸಾಧನೆಗೈದ ಗೌತಮ್ ಪಂಚೆರು,ಪ್ರಧಾನ್ ಪಾಟಾರ್ತಿ, ಮೈನಾಶ್ರೀ ಮಠ0ದೂರು, ಚರಣ್ ಮುಗುಳಿ, ಮನೀಶ್ ಹೆಚ್ ಪದ್ಯೋಟ್ಟು ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ತಾಲೂಕು ಮಟ್ಟದ ಉತ್ತಮ ಕೃತಕ ಗರ್ಭಧಾರಣ ತಂತ್ರಜ್ಞ ಪ್ರಶಸ್ತಿ ಸ್ವೀಕರಿಸಿದ ಗಣೇಶ್ ಮಠ0ದೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಯಜ್ಞಶ್ರೀ ಹೊಸಮನೆ ಇವರುಗಳನ್ನು ಶಾಲು ಹಾಕಿ, ಪಲಾಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.ಹಾಗೂ ಹಿರೇಬಂಡಾಡಿ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದಲ್ಲಿರುವ ಒಟ್ಟು 29 ಸ್ವ ಸಹಾಯ ಸಂಘಗಳ ಪೈಕಿ ಅತ್ಯುತ್ತಮ ಸ್ವ ಸಹಾಯ ಸಂಘವಾಗಿ ಆಯ್ಕೆಗೊಂಡ ವರಲಕ್ಷ್ಮಿ ಸ್ವ ಸಹಾಯ ಸಂಘದ ಸದಸ್ಯರಿಗೆ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮ ದಲ್ಲಿ ಆಶಾಲತಾ ಮತ್ತು ತಂಡದವರು ಪ್ರಾರ್ಥಿಸಿದರು, ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರು ಸುಧಾಕರ್ ಕೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು, ಸ್ವ ಸಹಾಯ ಸಂಘಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ರೇವತಿ ವಂದಿಸಿದರು,ಸೋಮೇಶ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳು, ವಲಯ ಪದಾಧಿಕಾರಿಗಳು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಮೇಲ್ವಿಚಾರಕರು, ಪ್ರೇರಕರು, ಗ್ರಾಮದ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.ಸಭಾ ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಗ್ರಾಮದ ಸಮಾಜ ಬಾಂಧವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಆಟೋಟ ಸ್ಪರ್ಧೆ, ಬಹುಮಾನ ವಿತರಣೆ
ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಗೆ, ಬಾಲಕ- ಬಾಲಕಿಯರಿಗೆ ಮಹಿಳೆ ಮತ್ತು ಪುರುಷರಿಗೆ, ಹಿರಿಯರಿಗೆ ವಿವಿಧ ಸ್ಪರ್ಧೆಯಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು, ಕ್ರೀಡಾಕೂಟದ ಉದ್ಘಾಷಕರಾಗಿ ಗಂಗಾಧರ್ ಪಟಾರ್ತಿ ನಿರ್ವಹಿಸಿದರು. ಮಧ್ಯಾಹ್ನ ವಿವಿಧ ಆಟಿ ಖಾದ್ಯಾಗಳ ಭೋಜನ ಏರ್ಪಡಿಸಲಾಗಿತ್ತು










