ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.1.91 ಕೋಟಿ ಲಾಭ

0

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2025-2026 ನೇ ಸಾಲಿನ ಆಡಿಟ್ ನಡೆದು ಸತತ 24 ನೇ ಬಾರಿಗೆ “ಎ” ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇಕಡಾ 99.31% ಸಾಲ ವಸೂಲಾತಿಯೊಂದಿಗೆ ರೂ 1.91 ಕೋಟಿ ಲಾಭ ಗಳಿಸಿದ್ದು , ಸಂಘವು ಸತತ 14 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ.ಈ ಅಭಿವೃದ್ದಿಗೆ ಸಹಕರಿಸಿದ ಸಮಸ್ತ ಸದಸ್ಯರಿಗೆ , ಠೇವಣಿದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಂಘದ ಅದ್ಯಕ್ಷ ತಾರಾನಾಥ ಕಾಯರ್ಗ ತಿಳಿಸಿದ್ದಾರೆ.


ಸಂಘದಲ್ಲಿ 3566 ಸದಸ್ಯರಿದ್ದು , ರೂ. 5.81 ಕೋಟಿ ಪಾಲು ಬಂಡವಾಳ ಮತ್ತು ರೂ. 45.98 ಕೋಟಿ ಠೇವಣಿ ಸಂಗ್ರಹಿಸಲಾಗಿದೆ., ವರದಿ ವರ್ಷದಲ್ಲಿ ಅಲ್ಪಾವಧಿ, ಮದ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ, ಕೃಷಿಯೇತರ ಸಾಲ , ಚಿನ್ನಾಭರಣ ಈಡಿನ ಸಾಲ, ಸ್ವಸಹಾಯ ಗುಂಪು ಸಾಲ, ಇತ್ಯಾದಿಗಳಿಗೆ ರೂ 74.64 ಕೋಟಿ ಸಾಲ ವಿತರಿಸಲಾಗಿದೆ. ಕೇಂದ್ರ ಬ್ಯಾಂಕಿನಿಂದ ರೂ. 34.96 ಕೋಟಿ ಸಾಲ ಪಡೆಯಲಾಗಿದೆ.

ಮಾಸ್ ಸಹಯೋಗದಲ್ಲಿ ಅಡಿಕೆ ಖರೀದಿ
ಮಾಸ್ ಲಿ, ಮಂಗಳೂರು ಇವರ ಸಹಯೋಗದೊಂದಿಗೆ ರೈತರ ರೂ. 4.34 ಕೋಟಿ ಮೌಲ್ಯದ 887.81 ಕ್ವಿಂಟಾಲ್ ಅಡಿಕೆ ಖರೀದಿಸಲಾಗಿದೆ, ಅತ್ಯಧಿಕ ಅಡಿಕೆ ಖರೀದಿಗಾಗಿ ಮಾಸ್ ಲಿ ನಿಂದ ಕಳೆದ 3 ವರ್ಷಗಳಿಂದ ಸಂಘಕ್ಕೆ ಪ್ರಶಸ್ತಿ ಲಬಿಸಿರುತ್ತದೆ. ಬ್ಯಾಂಕಿAಗ್ ವ್ಯವಹಾರದ ಜೊತೆಗೆ ರಸಗೊಬ್ಬರ ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಪಡಿತರ ವ್ಯವಸ್ಥೆಯನ್ನು 4 ಪಡಿತರ ಶಾಖೆಗಳಲ್ಲಿ ವಿತರಿಸಲಾಗುತ್ತಿದೆ.
ಆರ್ಥಿಕವಾಗಿ ಸಂಕಷ್ಟಲ್ಲಿರುವ ಸುಮಾರು 18 ಸದಸ್ಯರಿಗೆ ತಲಾ ರೂ. 5000/-ದಂತೆ ರೂ. 90,000 ವಿತರಿಸಲಾಗಿದೆ,. ಗ್ರಾಹಕರ ಅನುಕೂಲತೆಗಾಗಿ ಕಳೆದ 2 ವರ್ಷಗಳಿಂದ RTGS /NEFT ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ತಿಳಿಸಿದ್ದಾರೆ.

ರೈತರ ಪಾಲಿಗೆ ವರದಾನವಾಗಿರುವ 2026-27 ನೇ ಸಾಲಿಗೆ 2969 ಸದಸ್ಯರು ಹವಾಮಾನ ಆಧಾರತ ಬೆಳೆವಿಮಾ ಯೋಜನೆಗೆ ರೂ. 80.86 ಲಕ್ಷ ಪ್ರೀಮಿಯಂ ಪಾವತಿಸಿದ್ದಾರೆ. 870 ಕುಟುಂಬದ 3243 ಸದಸ್ಯರನ್ನು ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ನೋಂದಾಯಿಸಲಾಗಿದೆ.

ಆ.16 ರಂದು ವಾರ್ಷಿಕ ಮಹಾಸಭೆ
ಸಂಘದ 2025-26 ನೇ ಸಾಲಿನ ಮಹಾಸಭೆಯು ಆ. 16 ರಂದು ಬೆಳಿಗ್ಗೆ 9.30ಕ್ಕೆ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷ ಕೂಡ ಸಂಘದ ಕಾರ್ಯವ್ಯಾಪ್ತಿಯ ಸದಸ್ಯರ ಮನೆಯ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಶೇಕಡಾ 90% ಕ್ಕಿಂತ ಹೆಚ್ಚು ಮತ್ತು ಡಿಗ್ರಿಯಲ್ಲಿ ಶೇಕಡಾ 80% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಧನದೊಂದಿಗೆ ಪುರಸ್ಕರಿಸಲಾಗುವುದು. ಮಾಸ್ ಲಿ ಸಂಸ್ಥೆಯಲ್ಲಿ ಅತೀ ಹೆಚ್ಚು ಅಡಿಕೆ ವ್ಯವಹಾರ ಮಾಡಿದ ರೈತರನ್ನು ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಮತ್ತು ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here