






ಪುತ್ತೂರು: ಕಥೋಲಿಕ್ ಸಭಾ ಬನ್ನೂರು ಘಟಕ ಮತ್ತು ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಸಹಭಾಗಿತ್ವದಲ್ಲಿ ಕೋಡಿಂಬಾಡಿಯ ಕೆಪಿಎಸ್ ಶಾಲೆಯಲ್ಲಿ ವನಮಹೋತ್ಸವ ನಡೆಯಿತು.
ಸಸಿಗಳನ್ನು ನೆಟ್ಟು ಮಕ್ಕಳಿಗೆ ಸಿಹಿ ತಿಂಡಿ ನೀಡುವ ಮೂಲಕ ಶಿಕ್ಷಕರು ಮತ್ತು ಮಕ್ಕಳ ಜೊತೆ ಕಾರ್ಯಕ್ರಮ ನಡೆಸಲಾಯಿತು.



ಕಥೋಲಿಕ್ ಸಭಾ ಬನ್ನೂರು ಘಟಕದ ಅಧ್ಯಕ್ಷ ಡೆನ್ನಿಸ್ ಮಸ್ಕರೆನ್ಹಸ್, ಲಯನ್ಸ್ ಕ್ಲಬ್ ಪುತ್ತೂರ್ ಕ್ರೌನ್ ಅಧ್ಯಕ್ಷೆ ಲೀನಾ ಮಚಾದೊ,ಶಾಲೆಯ ಮುಖ್ಯೋಪಾಧ್ಯಾಯಿನಿ ಭಾರತಿ ಸ್ವರಮನೆ, ಎಸ್.ಡಿ.ಎಮ್.ಸಿ ಅಧ್ಯಕ್ಷೆ ಸ್ಪೂರ್ತಿ ಆರ್. ರೈ, ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಧ್ಯಕ್ಷ ಜಯಪ್ರಕಾಶ್ ಬದಿನಾರು, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷೆ ವಿಲ್ಮಾ ಗೋನ್ಸಲ್ವಿಸ್, ಕಾರ್ಯದರ್ಶಿ ನಿಶಾ ಮಿನೆಜಸ್, ಕಥೋಲಿಕ್ ಸಭಾ ಬನ್ನೂರು ಘಟಕ ಮತ್ತು ಲಯನ್ಸ್ ಕ್ಲಬ್ ಪುತ್ತೂರ್ ಕ್ರೌನ್ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಪವನಾ ಕೆ.ಆರ್. ಕಾರ್ಯಕ್ರಮ ನಿರೂಪಿಸಿದರು.













