








ಪುತ್ತೂರು: ರಾಷ್ಟ್ರಧ್ವಜದ ಗೌರವ ಕಾಪಾಡಲು ಮತ್ತು ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡದಂತೆ ನಿಷೇಧ ತರಲು ಒತ್ತಾಯಿಸಿ ಪುತ್ತೂರಿನ ಸಹಾಯಕ ಆಯುಕ್ತರು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕರಿಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆ.11ರಂದು ಮನವಿ ನೀಡಲಾಯಿತು.


ಪುತ್ತೂರಿನ ಧರ್ಮ ಪ್ರೇಮಿಗಳಾದ ಉದ್ಯಮಿ ಪ್ರಸನ್ನ ಬಲ್ಲಾಳ್, ಜಿಲ್ಲಾ ದಸ್ತಾವೇಜು ಬರಹಗಾರ ಬಾಲಚಂದ್ರ ಸೊರಕೆ , ಸತೀಶ್ ಭಂಡಾರಿ, ಹರಿಪ್ರಸಾದ್ ಶೆಟ್ಟಿ, ಹಿಂದೂ ಜನ ಜಾಗೃತಿ ಸಮಿತಿಯ ಚಂದ್ರಶೇಖರ್ ಪಣಿತೋಟ, ಬಾಲಕೃಷ್ಣ ಶೆಟ್ಟಿ, ವಂದನ ಮತ್ತು ಪದ್ಮಶ್ರೀ ಉಪಸ್ಥಿತರಿದ್ದರು.














