







ಪುತ್ತೂರು:ಹನ್ನೊಂದು ವರ್ಷಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್ಸೊಂದಕ್ಕೆ ಬೆಂಕಿ ಹಚ್ಚಿದ್ದಾರೆನ್ನಲಾದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.


2015 ನ.12ರಂದು ಘಟನೆ ನಡೆದಿತ್ತು.ಕೆಎಸ್‌ಆರ್‌ಟಿಸಿ ಬಸ್ಸು(ಕೆಎ 01-ಎಫ್-:8483)ಬೆಂಕಿಗಾಹುತಿಯಾಗಿ ನಷ್ಟ ಉಂಟಾಗಿದ್ದ ಕುರಿತು ಬಸ್ಸಿನ ಚಾಲಕ ಕಂ ನಿರ್ವಾಹಕ ಹೊನ್ನಾವರದ ಆನಂದ ನಾಯ್ಕ ಎಂಬವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.



ಬಸ್ಸಿಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಪೊಲೀಸರು ಬನ್ನೂರು ನಿವಾಸಿ ಪ್ರಜ್ವಲ್ ಮತ್ತು ಕುಂಜೂರುಪಂಜ ನಿವಾಸಿ ಜಯಂತ್ ಕೆ.ಪಿ.ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ,ರಾಕೇಶ್ ಬಲ್ನಾಡು, ಮೋಹಿನಿ ಕೆ.ವಾದಿಸಿದ್ದರು.










