






ಪುತ್ತೂರು: ಬೆಟ್ಟಂಪಾಡಿ ಗೆಳೆಯರ ಬಳಗದ ವತಿಯಿಂದ ಬೆಟ್ಟಂಪಾಡಿ ಗುತ್ತು ಮನೆಯ ಸಹಕಾರದಲ್ಲಿ ಆ.9ರಂದು ಬೆಟ್ಟಂಪಾಡಿ ಗುತ್ತು ಧರ್ಮಚಾವಡಿಯ ಗದ್ದೆಯಲ್ಲಿ “ಕೆಸರ್ದ ಗೊಬ್ಬು” ಕಾರ್ಯಕ್ರಮ ನಡೆಯಿತು.


ಬೆಳಿಗ್ಗೆ ಬೆಟ್ಟಂಪಾಡಿ ಗುತ್ತು ಧರ್ಮಚಾವಡಿಯಲ್ಲಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಕೆಸರ್ದ ಗೊಬ್ಬು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನಾಟೆಕಲ್ಲು ರತ್ನಾ ಕ್ಲಿನಿಕ್ನ ಡಾ.ಮೋಹನದಾಸ್ ರೈ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಶುಭಹಾರೈಸಿದರು. ಬೆಟ್ಟಂಪಾಡಿ ಗುತ್ತು ಮನೆತನದ ವಿನೋದ್ ಕುಮಾರ್ ರೈ ಗುತ್ತು ಹಿಂಗಾರ ಅರಳಿಸಿ ಶುಭಹಾರೈಸಿದರು. ಬೆಟ್ಟಂಪಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು. ಬೆಟ್ಟಂಪಾಡಿ ಗುತ್ತು ಮನೆತನದ ಹಿರಿಯರಾದ ಚಂದ್ರಾವತಿ ಎ. ರೈ ಗದ್ದೆಗೆ ಹಾಲೆರೆದು ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಂಗನಾಥ ರೈ ಗುತ್ತು ಮಾತನಾಡಿ ಶುಭಹಾರೈಸಿದರು.




ವಿವಿಧ ಗಣ್ಯರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಿವಪ್ರಸಾದ್ ತಲೆಪ್ಪಾಡಿ ಸಭಾಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಗೌಡ ಮಿತ್ತಡ್ಕ, ಕೃಷ್ಣಪ್ರಸಾದ್ ಬೆಟ್ಟಂಪಾಡಿ, ಬಾಲಕೃಷ್ಣ ಇರ್ದೆ, ಸೀತಾರಾಮ ಗೌಡ ಕಕ್ಕೂರು, ಮಮತಾವಿಜಯ ಪಾರ, ರಮ್ಯಶ್ರೀ ಪಾರ ವಿವಿಧ ಆಟೋಟ ಸ್ಪರ್ಧೆ ನಿರ್ವಹಿಸಿದರು. ಬೆಟ್ಟಂಪಾಡಿ ಗೆಳೆಯರ ಬಳಗದ ಸದಸ್ಯರು ಸಹಕರಿಸಿದರು. ಬಾಬು ನಲಿಕೆ ತಂಡದಿಂದ ಆಟಿ ಕಳೆಂಜ ಪ್ರದರ್ಶನ ನಡೆಯಿತು. ಮಕ್ಕಳು, ಯುವಕರು, ಮಹಿಳೆಯರು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.










