ರಾಷ್ಟ್ರಗೀತೆಯನ್ನು ಚಿತ್ರದಲ್ಲಿ ಬಿಂಬಿಸಿದ ನೀರಾಜೆಯ ಫಾತಿಮ ಸನಿಯ್ಯಗೆ ಸಚಿವ ಯು.ಟಿ. ಖಾದರ್ ಅಭಿನಂದನೆ

0

ರಾಮಕುಂಜ: ರಾಷ್ಟ್ರಗೀತೆ ಜನ ಗಣ ಮನ ಹಾಡಿನ ಅರ್ಥವನ್ನು ಕ್ಯಾನ್ವಾಸ್ ಚಿತ್ರದ ಮೂಲಕ ವಿವರಿಸಿ ಗಮನ ಸೆಳೆದ ಫಾತಿಮ ಸನಿಯ್ಯರಿಗೆ ಸಚಿವ ಯು.ಟಿ. ಖಾದರ್ ಅವರು ಬೆಂಗಳೂರುನಲ್ಲಿ ತನ್ನ ಕಚೇರಿಯಲ್ಲಿ ಚಿತ್ರ ವೀಕ್ಷಿಸಿ, ಪ್ರಶಂಶಿಸಿ ಅಭಿನಂದಿಸಿದರು.


ಸನಿಯ್ಯ ಅವರು “ಥೀಮ್ ಆರ್ಟ್ ಪ್ರಾಜೆಕ್ಟ್”ನಲ್ಲಿ ರಾಷ್ಟ್ರಗೀತೆಯಲ್ಲಿ ಇರುವ ಗಂಗಾ, ಯಮುನಾ ನದಿಗಳನ್ನೊಳಗೊಂಡಂತೆ ರಾಷ್ಟ್ರಗೀತೆಯ ಸಾರವನ್ನು ಒಂದೇ ನೋಟದಲ್ಲಿ ತಕ್ಷಣವೇ ಗ್ರಹಿಸಲು ಸಾಧ್ಯವಾಗುವ ರೀತಿಯಲ್ಲಿ ಅರ್ಥಗರ್ಭಿತವಾಗಿ ಚಿತ್ರದಲ್ಲಿ ಬಿಂಬಿಸಿದ್ದು, ಚಿತ್ರ ಮನಸೂರೆಗೊಳ್ಳುವಂತಿದೆ. ಸಾಧಕಿ ಫಾತಿಮ ಸನಿಯ್ಯ ಕಾಸರಗೋಡು ಕುಂಬಳೆ ಇಮಾಮ್ ಶಾಫಿ ಶೀ ಕ್ಯಾಂಪಸ್ ಕಾಲೇಜಿನಲ್ಲಿ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿರುತ್ತಾರೆ. ಪ್ರೌಢ ಶಿಕ್ಷಣವನ್ನು ಉಪ್ಪಿನಂಗಡಿ ಇಂಡಿಯನ್ ಸ್ಕೂಲ್‌ನಲ್ಲಿ ಪಡೆದಿರುತ್ತಾರೆ. ಇವರು ಕಡಬ ತಾಲೂಕು ರಾಮಕುಂಜ ಗ್ರಾಮದ ನೀರಾಜೆ ನಿವಾಸಿ ನಿಯಾಝುದ್ದೀನ್ ಮತ್ತು ನಿಶಾ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here