ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ‌ – 10.66 ಲಕ್ಷ ನಿವ್ವಳ ಲಾಭ: 22.5 ಶೇ. ಡಿವಿಡೆಂಡ್ ಘೋಷಣೆ

0

ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘವು 33 ವರ್ಷಗಳನ್ನು ಪೂರೈಸಿದ್ದು, 2025-26ನೇ ಸಾಲಿನಲ್ಲಿ ಹಾಲು ಮಾರಾಟ ಸೇರಿದಂತೆ ಎಲ್ಲಾ ವ್ಯವಹಾರಗಳಿಂದ 10,66,072.83 ರೂ. ನಿವ್ವಳ ಗಳಿಸಿದ್ದು, ಲಾಭಾಂಶದಲ್ಲಿ ಸದಸ್ಯರಿಗೆ 22.5 ಶೇ. ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಕಿಂಡೋವು ಘೋಷಿಸಿದರು.‌


ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ದುರ್ಗಾ ಸಭಾಭವನ’ದಲ್ಲಿ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ಸಾಲಿನಲ್ಲಿ 4,49,492 ಲೀ. ಹಾಲನ್ನು 1,83,28,430.65 ರೂ. ಮೌಲ್ಯಕ್ಕೆ ರೈತರಿಂದ ಖರೀದಿ ಮಾಡಿ 4,55,492 ಕೆ.ಜಿ. 1,93,83,956.16 ರೂ. ಮೌಲ್ಯದ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಮತ್ತು ಸ್ಥಳೀಯವಾಗಿ ಮೂಲಕ 5,86,485 ರೂ.ನ 9,836 ಲೀ. ಹಾಲನ್ನು ಮಾರಾಟ ಮಾಡಲಾಗಿದೆ. ಒಟ್ಟು ಹಾಲಿನ ವ್ಯಾಪಾರದಿಂದ 15,23,388.40 ರೂ. ಲಾಭ ಬಂದಿದ್ದು, ಪಶು ಆಹಾರ ಮಾರಾಟ, ಸಮೃದ್ಧಿ ಮಾರಾಟದಿಂದ 52,929.71 ರೂ. ಲಾಭ ಬಂದಿದೆ. ಇತರೆ ಆದಾಯಗಳಿಂದ 5,09,196.99 ರೂ. ಲಾಭ ಬಂದಿದ್ದು, ಹೀಗೆ ಒಟ್ಟು ಎಲ್ಲಾ ವ್ಯವಹಾರಗಳಿಂದ ಖರ್ಚು ಕಳೆದು 10,66,072.83 ರೂ. ನಿವ್ವಳ ಲಾಭವು ಸಂಘಕ್ಕೆ ಬಂದಿದೆ. ಅಡಿಟ್ ವರ್ಗೀಕರಣದಲ್ಲಿಎ’ ಗ್ರೇಡ್ ಅನ್ನು ಸಂಘವು ಪಡೆದುಕೊಂಡಿರುತ್ತದೆ ಎಂದರು.


ಸಂಘದ ಯಶಸ್ವಿಗೆ ಹಾಲು ಉತ್ಪಾದಕ ಸದಸ್ಯರು, ಸಿಬ್ಬಂದಿ ವರ್ಗ, ಒಕ್ಕೂಟದ ಅಧಿಕಾರಿಗಳು ಮತ್ತು ಸಂಘದ ಆಡಳಿತ ಮಂಡಳಿ ಕಾರಣವಾಗಿದ್ದು, ಅವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 602 ಅಂಕ ಗಳಿಸಿ ತೇರ್ಗಡೆಯಾದ ಸುರೇಶ್ ಗೌಂಡತ್ತಿಗೆ ಮತ್ತು ಸುಚಿತ್ರ ಎಸ್.ಜಿ. ದಂಪತಿಯ ಪುತ್ರಿ ಸುಭಿಕ್ಷಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಪರಮೇಶ್ವರ ಕಂಪ (ಪ್ರಥಮ), ವಸಂತ ಕುಂಟಿನಿ (ದ್ವಿತೀಯ), ಮಣಿಕಂಠನ್ ನಾಯರ್ (ತೃತೀಯ) ಇವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಬೊಳ್ಳಾವು, ನಿರ್ದೇಶಕರಾದ ದೇರಣ್ಣ ಗೌಡ, ಬಾಲಚಂದ್ರ ಕೆ., ಪ್ರಶಾಂತ್ ಯು., ಧರ್ನಪ್ಪ ನಾಯ್ಕ, ಸೇಸಪ್ಪ ಗೌಡ, ವಸಂತ ಕೆ., ಕೊರಗಪ್ಪ ಮುಗೇರ, ಸುಮತಿ, ವನಿತಾ, ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಉಪಸ್ಥಿತರಿದ್ದರು.
ನಿರ್ದೇಶಕ ಎಂ. ಜಗದೀಶ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ವಿದ್ಯಾಶ್ರೀ ಪಿ. ವರದಿ ಮಂಡಿಸಿದರು. ನಿರ್ದೇಶಕ ವಿಶ್ವನಾಥ ಮಾಯಿತ್ತಾಲ್ ವಂದಿಸಿದರು. ಹಾಲು ಪರೀಕ್ಷಕ ಸುರೇಶ್ ಗೌಂಡತ್ತಿಗೆ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಚೆನ್ನಯ್ಯ ಪಿ., ಬಿ.ಎಂ.ಸಿ. ಸಹಾಯಕ ವಿಶಾಂತ್ ಸಹಕರಿಸಿದರು.

LEAVE A REPLY

Please enter your comment!
Please enter your name here