ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಸ್ವಾತಂತ್ರ್ಯೋತ್ಸವ, ಶ್ರೀ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಕೊಡುಗೆಗಳು

0

ಪುತ್ತೂರು: ನಗರದ ಪ್ರತಿಷ್ಠಿತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಹಾಗೂ ಶ್ರೀ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಆಫರ್‌ಗಳು ಲಭ್ಯವಿದ್ದು ಆ.15ರಿಂದ ಆ.23ರವರೆಗೆ ನಡೆಯುವ ಈ ವಿಶೇಷ ಮಾರಾಟ ಮೇಳದಲ್ಲಿ ಗ್ರಾಹಕರಿಗೆ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಖರೀದಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸಂಸ್ಥೆಯು 1957ರಿಂದ ಗುಣಮಟ್ಟ, ವಿಶ್ವಾಸ ಹಾಗೂ ವಿನೂತನ ವಿನ್ಯಾಸಗಳ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿಕೊಂಡಿದೆ.


ಈ ಅವಧಿಯಲ್ಲಿ ಚಿನ್ನದ ಆಭರಣಗಳ ಅ ಮೇಲೆ ಪ್ರತೀ ಗ್ರಾಂಗೆ ರೂ.600ವರೆಗೆ ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ಫ್ಲಾಟ್ ರೂ. 7೦೦೦/- ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿಗೆ ಫ್ಲಾಟ್ ರೂ.8೦೦೦/- ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ ಹಳೆಯ ಚಿನ್ನಾಭರಣಗಳ ಎಕ್ಸ್‌ಚೇಂಜ್ ದರದ ಮೇಲೆ ೦% ಕಡಿತದ ಸೌಲಭ್ಯವೂ ಲಭ್ಯವಿದೆ. ಇದರೊಂದಿಗೆ ಆಕರ್ಷಕ ಹಳದಿ ಟ್ಯಾಗ್ ಸಂಗ್ರಹದಲ್ಲಿ 1೦%ರಿಂದ ಪ್ರಾರಂಭವಾಗುವ ವಿಶೇಷ ರಿಯಾಯಿತಿಯೊಂದಿಗೆ ಸುಂದರ ನೆಕ್ಲೆಸ್, ಹಾರ, ಚೈನ್, ಉಂಗುರ, ಬಳೆ ಸೇರಿದಂತೆ ವೈವಿಧ್ಯಮಯ ಹಾಗೂ ಮನಮೋಹಕ ಆಭರಣಗಳ ವಿಶಾಲ ಸಂಗ್ರಹ ಗ್ರಾಹಕರಿಗಾಗಿ ಲಭ್ಯವಿದೆ.ಸಂಸ್ಥೆಯ ಪುತ್ತೂರು, ಸುಳ್ಯ, ಹಾಸನ, ಕುಶಾಲನಗರ ಹಾಗೂ ಮೂಡಬಿದ್ರೆಯ ಎಲ್ಲಾ ಮಳಿಗೆಗಳಲ್ಲಿ ಈ ವಿಶೇಷ ಆ-ರ್‌ಗಳು ಲಭ್ಯವಿದ್ದು, ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here