






ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರಿನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಕಾಣಿಯೂರು ಕುಮಾರ್ ಕ್ಲೀನಿಕ್ನ ವೈದ್ಯಾಧಿಕಾರಿ ಡಾ.ಉದಯ ಕುಮಾರ್, ಸ್ವಾತಂತ್ರ್ಯೋತ್ಸವ ಕುರಿತು ಮಾತನಾಡಿದರು.


ಸಂಘದ ಮಾಜಿ ಅಧ್ಯಕ್ಷರಾದ ಆನಂದ ಗೌಡ ಮೇಲ್ಮನೆ, ಧರ್ಮೇಂದ್ರ ಗೌಡ ಕಟತ್ತಾರು, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಸುಂದರ ಗೌಡ ದೇವಸ್ಯ, ಅನಂತ್ಕುಮಾರ್ ಬೈಲಂಗಡಿ, ದಿವಾಕರ ಮರಕ್ಕಡ ಲೋಕೇಶ್ ಗೌಡ ಆತಾಜೆ, ಶೀಲಾವತಿ ಮುಗರಂಜ, ರಮೇಶ್ ಉಪ್ಪಡ್ಕ, ಮಾಜಿ ನಿರ್ದೇಶಕ ಪುಟ್ಟಣ್ಣ ಗೌಡ ಮುಗರಂಜ, ಚಂದ್ರಶೇಖರ ಬರೆಪ್ಪಾಡಿ ರಾಶಿ, ದರ್ಣಪ್ಪ ಗೌಡ ಅಂಬುಲ, ಕಾಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಕೊಪ್ಪ, ಸದಸ್ಯರಾದ ಪ್ರವೀಣ್ಚಂದ್ರ ರೈ ಕುಮೇರು, ದೇವಿಪ್ರಸಾದ್ ದೋಳ್ಪಾಡಿ, ರಾಮಣ್ಣ ಗೌಡ ಮುಗರಂಜ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ನಿರ್ದೇಶಕ ರಾಜೇಶ್ ಮೀಜೆ, ಸಂಘದ ನಿವೃತ್ತ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಶೇ?ಪ್ಪ ಗೌಡ ಇಡ್ಯಡ್ಕ, ಕುಸುಮಾಧರ ಇಡ್ಯಡ್ಕ, ಮಾಧವ ಕೊಲ್ಪೆ, ಯಶವಂತ ಕೇಪುಳಗುಡ್ಡೆ ಹಾಗೂ ಸಿಬ್ಬಂದಿಗಳು, ಮತ್ತೀತರರು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಸ್ವಾಗತಿಸಿ, ಅಧ್ಯಕ್ಷ ಗಣೇಶ್ ಉದನಡ್ಕ ವಂದಿಸಿದರು.













