






ಪುತ್ತೂರು: ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿರುವ ಯೋಧ ಡಿ.ಎಸ್ ಗಣೇಶ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.


ಈ ಸಂದರ್ಭದಲ್ಲಿ ಧ್ವಜಗೀತೆಯನ್ನು ಹಾಡಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಯುತ ಕಾರ್ಗಿಲ್ ಯುದ್ಧದ ಬಗ್ಗೆ, ಸೈನ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಗಡಿ ರಕ್ಷಣೆ , ರಾಷ್ಟ್ರದ ಆಂತರಿಕ ರಕ್ಷಣೆ ಇದು ಸೈನ್ಯದ ಮುಖ್ಯ ಉದ್ದೇಶವಾಗಿದೆ ಎಂದರು. ಭಾರತ ವಿಶ್ವ ಗುರುವಾಗುವಲ್ಲಿ ಶಿಶುಮಂದಿರವು ಉತ್ತಮ ಪ್ರೇರಣೆ ಮತ್ತು ಶಿಕ್ಷಣ ನೀಡಲಿ ಜೊತೆಗೆ ದೇಶಭಕ್ತಿಯನ್ನು ಮೂಡಿಸಲಿ ಎಂದು ಹಾರೈಸಿದರು.



ಕಾರ್ಯಕ್ರಮವನ್ನು ಪದ್ಮಪ್ರಿಯ ನಿರೂಪಿಸಿದರು. ಶಿಶುಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ರಾಜ್‌ಗೋಪಾಲ್ ಭಟ್ ಸ್ವಾಗತಿಸಿದರು. ಮಾತೃ ಭಾರತಿಯ ಸದಸ್ಯೆ ರಮ್ಯ ಭಟ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ಹಂಚಲಾಯಿತು. ಪುಟಾಣಿಗಳು, ಪಾಲಕರು, ಮಾತಾಜಿಯವರು, ಶಿಶುಮಂದಿರದ ಆಡಳಿತ ಮಂಡಳಿಯ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.










