60ನೇ ವರ್ಷದ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ- ವಿವಿಧ ಸ್ಪರ್ಧೆಗಳಿಂದ ಚಾಲನೆ

0

ಪುತ್ತೂರು: 60ನೇ ವರ್ಷದ ಸಂಭ್ರಮದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪ್ರತಿ ವರ್ಷದಂತೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಒಂದು ವಾರಗಳ ಕಾಲ ನಡೆಯುವ ವಿವಿಧ ಸ್ಪರ್ಧೆಗಳಿಗೆ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಆ.16 ರಂದು ಚಾಲನೆ ನೀಡಲಾಯಿತು. ಪ್ರಥಮ ಸ್ಪರ್ಧೆಯಾಗಿ ಅಂದವಾದ ಬರಹ ಸ್ಪರ್ಧೆ ನಡೆಯಿತು.


ಪ್ರತಿಭೆಗೆ ವೇದಿಕೆಯಾಗಿ ಗಣೇಶೋತ್ಸವ ನಿಂತಿದೆ:
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಹಿರಿಯ ಸಹಶಿಕ್ಷಕಿ ಗಾಯತ್ರಿ ಅವರು ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಮಕ್ಕಳ ಪ್ರತಿಭಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಪ್ರತಿಭೆಗೆ ಸೂಕ್ತ ವೇದಿಕೆಯಾಗಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ಸ್ಪರ್ಧೆಗಳು ಮನಸ್ಸಿನ ಏಕಾಗ್ರತೆಯಲ್ಲಿ ನಿಂತಿದೆ. ಅದು ಬಾಲ್ಯದಿಂದಲೇ ಬರಬೇಕು. ಇವತ್ತು ತಾಂತ್ರಿಕ ವ್ಯವಸ್ಥೆ ಮುಂದುವರಿದೆ. ಪೋಷಕರು ಮಕ್ಕಳಿಗೆ ಸರಿಯಾದ ದಾರಿತೋರಿಸಬೇಕೆಂದರು.


ಮಕ್ಕಳಲ್ಲಿ ಭಕ್ತಿ, ಶ್ರದ್ದೆಯನ್ನು ಬೆಳೆಸುವ ಉದ್ದೇಶ:
ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ ಅವರು ಮಾತನಾಡಿ ಹಿಂದೆ ಸ್ವಾಂತ್ರದ ಸಂಘಟನೆಗಾಗಿ ಆರಂಭಗೊಂಡ ಗಣೇಶೋತ್ಸವ ಇಂದು ಹಿಂದು ಧರ್ಮದ ಸಂಘಟನೆಯಾಗಿ ಗಣೇಶೋತ್ಸವ ವಿಜೃಂಭಣೆಯಿಂದ ಪ್ರತಿ ವರ್ಷ ನಡೆಯುತ್ತಿದೆ. ಇವತ್ತು ದೇಶ ವಿದೇಶದಲ್ಲಿ ಗಣೇಶೋತ್ಸವ ಆಚರಣೆ ನಡೆಯುತ್ತದೆ. ನಮ್ಮಲ್ಲಿ ವಿಶೇಷವಾಗಿ ಮಕ್ಕಳಿಗೆ ಸಾರ್ವಜನಿಕರಿಗೆ ವಿಶೇಷವಾಗಿ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಭಕ್ತಿ ಮತ್ತು ಶ್ರದ್ದೆಯನ್ನು ಬೆಳೆಸುವ ಕಾರ್ಯಗಳು ನಡೆಯುತ್ತಿವೆ. ಸೆ.೧೪ರಿಂದ ನಡೆಯುವ ನಾಲ್ಕು ದಿನಗಳ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಎಲ್ಲರು ಪಾಲ್ಗೊಳ್ಳುವಂತೆ ವಿನಂತಿಸಿದರು.


ಗಣೇಶೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿದವರು ಸಾಧಕರಾಗಿದ್ದಾರೆ
ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ ಅವರು ಸ್ವಾಗತಿಸಿ ಮಾತನಾಡಿ ಮಕ್ಕಳ ಪ್ರತಿಭೆಗಳನ್ನು ಅನಾವರಣವಾಗಬೇಕೆಂಬ ನೆಲೆಯಲ್ಲಿ ಗಣೇಶೋತ್ಸವದಲ್ಲಿ ಒಂದು ತಿಂಗಳ ಮುಂದೆ ಸ್ಪರ್ಧಾ ಕಾರ್ಯಕ್ರಮ ಏರ್ಪಸಿಸುತ್ತೇವೆ. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಅನೇಕರು ರಾಷ್ಟ್ರಮಟ್ಟದ ಸಾಧನೆ ಮಾಡಿದ್ದಾರೆ. ಕೆಂದ್ರದ ಜಿ.ರಾಮ್‌ಜಿ ಲೋಗೋ ತಯಾರು ಮಾಡಿದ ಪ್ರತಿಭೆ, ಚಿತ್ರಕಲೆಯಲ್ಲಿ ಜಪಾನ್‌ನಲ್ಲಿ ಪ್ರಶಸ್ತಿ ಪಡೆದವರು, ಚದುರಂಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದವರು ಹೀಗೆ ಹಲವಾರು ಮಂದಿ ಸಮಿತಿ ಆಯೋಜಿಸಿದ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಣೇಶನ ಆಶೀರ್ವಾದಿಂದ ಇವತ್ತು ಉತ್ತಮ ಸಾಧಕರಾಗಿದ್ದಾರೆ ಎಂದರು.


ಸ್ಪರ್ಧೆಯಲ್ಲಿ ನಿಯಪಾಲಿಸಿ:
ಸಮಿತಿ ಸ್ಪರ್ಧಾ ಕಾರ್ಯದರ್ಶಿ ಸಹಶಿಕ್ಷಕ ಶ್ರೀಕಾಂತ್ ಕಂಬಳಕೋಡಿ ಅವರು ಮಾತನಾಡಿ ಹಲವು ಸ್ಪರ್ಧೆಗಳು ಸಮಿತಿಯಿಂದ ಆಯೋಜನೆಗೊಂಡಿವೆ. ಅವೆಲ್ಲಕ್ಕೂ ಒಂದೊಂದು ನಿಯಮವಿದೆ. ಅದನ್ನು ಪಾಲಿಸಿ. ಅಂದಬರಹ ಸ್ಪರ್ಧೆಯಲ್ಲೂ ಅಕ್ಷರ ಬರೆಯುವಲ್ಲಿ ತಪ್ಪು ಮಾಡಿಕೊಳ್ಲಬೇಡಿ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಶ್ರೀನಿವಾಸ ಮೂಲ್ಯ, ಜೊತೆ ಕಾರ್ಯದರ್ಶಿ ನೀಲಂತ್, ಸ್ಪರ್ಧಾ ನಿರ್ವಾಹಕ ಪುಷ್ಪರಾಜ್, ಪ್ರಮೋದ್ ಹೆಗ್ಡೆ, ನಿತ್ಯಾನಂದ, ಮೋಹನ್ ಶೆಟ್ಟಿ, ಜಯಪ್ರಕಾಶ್ ಅಮೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಕೊನೆಯಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ವಿಜೇತರಿಗೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.

LEAVE A REPLY

Please enter your comment!
Please enter your name here