







ಕಡಬ: ಕುಂತೂರು ಗ್ರಾಮದ ಪದವು ನಿವಾಸಿ ಕೆ.ಎಂ. ತೋಮಸ್ (78ವ.)ಅವರು ಆ.16ರಂದು ನಿಧನರಾದರು.ಕೆ.ಆರ್.ಟಿ.ಸಿ.ಯ ನಿವೃತ್ತ ಸಂಚಾರ ನಿಯಂತ್ರಕ ಹಾಗೂ ವಿವಿಧ ಧಾರ್ಮಿಕ-ಶೈಕ್ಷಣಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು.


ಕೆ.ಆರ್.ಟಿ.ಸಿ.ಯಲ್ಲಿ ಬಸ್ ನಿರ್ವಾಹಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಬಳಿಕ ಪುತ್ತೂರು, ಸುಬ್ರಹ್ಮಣ್ಯ ಹಾಗೂ ಮಂಗಳೂರಿನಲ್ಲಿ ಸಂಚಾರ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸಿದ್ದರು. ತಮ್ಮ ಸೇವಾವಧಿಯಲ್ಲಿ ಸಂಸ್ಥೆಯಿಂದ ಪುರಸ್ಕೃತರಾಗಿದ್ದರು. ಪದವಿನ ಸೈಂಟ್ ಜಾರ್ಜ್ ಪ್ರೌಢಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಸಂಡೇ ಸ್ಕೂಲ್ ಶಿಕ್ಷಕರಾಗಿ ಹಾಗೂ ಚರ್ಚ್ನ ಟ್ರಸ್ಟಿ ಮತ್ತು ಕಾರ್ಯದರ್ಶಿಯಾಗಿಯೂ ಸುದೀರ್ಘ ಸೇವೆ ಸಲ್ಲಿಸಿದ್ದರು.



ಅವರು ಪತ್ನಿ, ಪುತ್ರರಾದ ಮ್ಯಾಥ್ಯು ತೋಮಸ್, ಸಜಿ ತೋಮಸ್ ಹಾಗೂ ಪುತ್ರಿ ಜೆಮಿನಿ ಕೆ.ಟಿ., ಅಳಿಯ ಈಶೋ ಪಿಲಿಫ್ ,ಸೊಸೆಯಂದಿರಾದ ಸ್ವಪ್ನ ಮ್ಯಾಥ್ಯೂ, ಸುಪ್ರಿಯಾ ಸಜಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಕಾರ್ಯಕ್ರಮವು ಆಗಸ್ಟ್ 19ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಪದವಿನ ಸೈಂಟ್ ಜಾರ್ಜ್ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ನಲ್ಲಿ ನಡೆಯಲಿದೆ.










