ಪ್ರಗತಿ ಸ್ಟಡಿ ಸೆಂಟರ್ – 20ನೇ ವಸಂತಕ್ಕೆ ಹೆಜ್ಜೆ ಇಟ್ಟ ಜ್ಞಾನದೀವಿಗೆ

0

ಪುತ್ತೂರು : 18 ಆಗಸ್ಟ್ 2008 ರಂದು ಪುತ್ತೂರಿನ ನೆಲದಲ್ಲಿ ಬಿತ್ತಿದ ಸಣ್ಣ ಆಶಯದ ಬೀಜವೊಂದು, ಇಂದಿಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗುವ ಮಹಾವೃಕ್ಷವಾಗಿ ಬೆಳೆದು ನಿಂತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಬದುಕಿಗೆ ಸರಿಯಾದ ದಾರಿ ತೋರಿಸುವ ಕನಸಿನೊಂದಿಗೆ ಆರಂಭವಾದ ಪ್ರಗತಿ ಸ್ಟಡಿ ಸೆಂಟರ್, ಇದೀಗ 19 ಯಶಸ್ವಿ ವರ್ಷಗಳನ್ನು ಪೂರೈಸಿ 20ನೇ ವಸಂತಕ್ಕೆ ಹೆಜ್ಜೆ ಇಡುತ್ತಿದೆ.

ಪ್ರಗತಿ ಎಜುಕೇಷನಲ್ ಫೌಂಡೇಶನ್ (R) ನ ಸ್ಥಾಪಕಾಧ್ಯಕ್ಷ ಗೋಕುಲ್‌ನಾಥ್ ಪಿ.ವಿ. ಅವರ ದೂರದೃಷ್ಟಿ ಮತ್ತು ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಅವರ ಆಡಳಿತಾತ್ಮಕ ಕಾಳಜಿ ಈ ಯಶಸ್ಸಿನ ಮೂಲಶಕ್ತಿ.


ಕಳೆದ 19 ವರ್ಷಗಳಿಂದ ನಿರಂತರವಾಗಿ ಶೇ. 100ರಷ್ಟು ಶ್ರೇಷ್ಠ ಫಲಿತಾಂಶವನ್ನು ಕಾಯ್ದುಕೊಂಡು ಬಂದಿರುವುದು ಸಂಸ್ಥೆಯ ನಿಷ್ಠೆ ಮತ್ತು ವಿದ್ಯಾರ್ಥಿಗಳ ಶ್ರಮಕ್ಕೆ ಸಾಕ್ಷಿ.
ಪುತ್ತೂರಿನಿಂದ ಆರಂಭವಾದ ಈ ಶೈಕ್ಷಣಿಕ ಪಯಣ ಇಂದು ಕರ್ನಾಟಕದ ಸುಮಾರು 18 ಜಿಲ್ಲೆಗಳ ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸಿ, ರಾಜ್ಯದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ.


ಬಾಲಕ ಮತ್ತು ಬಾಲಕಿಯರಿಗೆ ಸುರಕ್ಷಿತ ವಸತಿ ವ್ಯವಸ್ಥೆ, ಶಾಲಾ ಬಸ್‌ ವ್ಯವಸ್ಥೆ ಶಿಸ್ತುಬದ್ಧ ವಾತಾವರಣವನ್ನು ಒದಗಿಸುತ್ತಿದೆ. ಕೇವಲ ಅಂಕಗಳನ್ನು ನೀಡುವ ತರಗತಿಯಾಗಷ್ಟೇ ಉಳಿಯದೆ, ಸಾವಿರಾರು ಕುಟುಂಬಗಳ ಕನಸುಗಳಿಗೆ ರೆಕ್ಕೆ ನೀಡಿ ಭವಿಷ್ಯದ ದಾರಿದೀಪವಾಗಿರುವ ಪ್ರಗತಿ ಸಂಸ್ಥೆಯ ಈ ಜ್ಞಾನಯಜ್ಞವು 20ನೇ ವರ್ಷದ ಹೊಸ್ತಿಲಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ವಿದ್ಯಾಸಂಸ್ಥೆ, ಶಿಕ್ಷಕರ, ವಿದ್ಯಾರ್ಥಿಗಳ ಮತ್ತು ಪೋಷಕರ ಆಶಯ.

LEAVE A REPLY

Please enter your comment!
Please enter your name here