







ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ವಿದ್ಯಾಗಿರಿ ಯಲ್ಲಿ ಆಟಿ ಆಚರಣೆ ಆ. 15 ರಂದು ಸಾಂಪ್ರದಾಯಿಕವಾಗಿ ನಡೆಯಿತು.


ನಿವೃತ್ತ ಶಿಕ್ಷಕ ಮಹಾಬಲ ರೈ ಕರ್ನೂರು ಕಾರ್ಯಕ್ರಮವನ್ನು ಚೆನ್ನೆಮಣೆ ಆಡುವುದರೊಂದಿಗೆ ಉದ್ಘಾಟಿಸಿದರು. ಆಟಿ ಆಚರಣೆ ಅದರ ಮಹತ್ವ, ಆಟಿ ಖಾದ್ಯಗಳ ಸೇವನೆ ಆರೋಗ್ಯಕ್ಕೆ ಪೂರಕ ಇವುಗಳ ಬಗೆಗಿನ ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು ‘ಇಂತಹ ಆಚರಣೆಗಳು ಶಾಲೆಯಲ್ಲಿ ನಡೆಯುತ್ತಿರುವುದು ವಿದ್ಯಾರ್ಥಿಗಳ ಸೌಭಾಗ್ಯ ಎಂದರು.




ಸುಮಾರು 26 ಬಗೆಯ ಖಾದ್ಯಗಳಿಂದ ವಿದ್ಯಾರ್ಥಿಗಳು ಆಟಿಊಟದ ಸವಿಯನುಂಡರು. ಮುಖ್ಯಗುರು ರಾಜೇಶ್ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ತುಳುನಾಡಿನ ಸೊಗಡನ್ನು ಬಿಂಬಿಸುವ ನೃತ್ಯ ಪ್ರದರ್ಶನ ನಡೆಸಿಕೊಟ್ಟರು. ಸಹ ಶಿಕ್ಷಕಿ ಕುಮಾರಿ ಭಾಗ್ಯಶ್ರೀ ರೈ ಕಾರ್ಯಕ್ರಮ ನಿರೂಪಿಸಿದರು.










