






ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ‘ಯಕ್ಷ ಶ್ರಾವಣ-1’ ತಾಳಮದ್ದಳೆ ಕಾರ್ಯಕ್ರಮವು ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ, ಬಂಟ್ವಾಳದ ಶ್ರಾವಣ ಮಾಸದ ಸರಣಿ ಕಾರ್ಯಕ್ರಮದ ಅಂಗವಾಗಿ ಆ.16ರಂದು ದೇವಳದಲ್ಲಿ ನಡೆಯಿತು.


‘ಭೀಷ್ಮ ಪ್ರತಿಜ್ಞೆ’ ಆಖ್ಯಾನದೊಂದಿಗೆ ನಡೆದ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ ಹಾಗೂ ಸತೀಶ್ ಇರ್ದೆ, ಚೆಂಡೆ-ಮದ್ದಳೆಗಳಲ್ಲಿ ಮುರಳೀಧರ ಆಚಾರ್ಯ ನೇರಂಕಿ, ಅನೀಶ್ ಕೃಷ್ಣ ಪುಣಚ ಹಾಗೂ ಸಮರ್ಥ ವಿಷ್ಣು ಕಡಂಬಳಿಕೆ ಸಹಕರಿಸಿದರು.



ಮುಮ್ಮೇಳದಲ್ಲಿ ಶಂತನು ಪಾತ್ರದಲ್ಲಿ ಭಾಸ್ಕರ ಬಾರ್ಯ, ಯೋಜನಾಗಂಧಿ ಪಾತ್ರದಲ್ಲಿ ನಾ. ಕಾರಂತ ಪೆರಾಜೆ, ದೇವವೃತ ಪಾತ್ರದಲ್ಲಿ ಗುಡ್ಡಪ್ಪ ಬಲ್ಯ ಹಾಗೂ ದಾಶರಾಜ ಪಾತ್ರದಲ್ಲಿ ಗಾಯತ್ರಿ ಹೆಬ್ಬಾರ್ ಭಾಗವಹಿಸಿ ಕಲಾಭಿಮಾನಿಗಳಿಗೆ ರಸದೌತಣ ನೀಡಿದರು.ದೇವಳದ ಆಡಳಿತ ಮಂಡಳಿ ಸದಸ್ಯ ನಾಗೇಂದ್ರ ಪೈ ಸ್ವಾಗತಿಸಿ, ವಂದಿಸಿದರು.










