






ಪುತ್ತೂರು: ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಅವರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ದೇವರ ಸ್ವರ್ಣ ಕವಚ ನಿರ್ಮಾಣಕ್ಕೆ 4 ಗ್ರಾಂ ಸ್ವರ್ಣ ಸಮರ್ಪಣೆ ಮಾಡಿದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರೂ ಮತ್ತು ಅಬುಧಾಮಿಯಲ್ಲಿ ಉದ್ಯಮಿಯಾಗಿರುವ ಮಿತ್ರಂಪಾಡಿ ಜಯರಾಮ ರೈ ಅವರು ಮನೆಮಂದಿಯೊಂದಿಗೆ ದೇವರಿಗೆ ಸ್ವರ್ಣ ಸಮರ್ಪಣೆ ಮಾಡಿದರು.



ಈ ಸಂದರ್ಭ ಕೆ.ಎಂ ಮೋಹನ್ ರೈ ಕುರಿಯ ಮಾಡಾವು ಏಳ್ನಾಡುಗುತ್ತು, ಎಂ.ಆರ್ ಜಯಕುಮಾರ್ ರೈ ಮಿತ್ರಂಪಾಡಿ, ಜಯಾನಂದ ರೈ ಮಿತ್ರಂಪಾಡಿ, ಜಯಂತಿ ಎಂ.ರೈ ಮಿತ್ರಂಪಾಡಿ ಸಹಿತ ಹಲವಾರು ಮಂದಿ ಜೊತೆಗಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದಾನಿಗಳನ್ನು ದೇವಳದ ಗೌರವಾರ್ಥ ಶಾಲು ಹೊದಿಸಿ ಗೌರವಿಸಿದರು.










