ಪುತ್ತೂರು ವಾರಿಯರ್ಸ್ ತಂಡದಿಂದ ಅಂತ್ಯಸಂಸ್ಕಾರಕ್ಕೆ ನೆರವು

0

ಪುತ್ತೂರು: ಆರ್ಯಾಪು ಗ್ರಾಮದ ದಂಬೆತ್ತಿಮಾರ್ ನಿವಾಸಿ, 85 ವರ್ಷ ಪ್ರಾಯದ ಮುಳಿಯರ್ ಎಂಬವರು ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರವನ್ನು ಪುತ್ತೂರು ವಾರಿಯರ್ಸ್ ತಂಡದ ವತಿಯಿಂದ ಆ.15ರಂದು ಪುತ್ತೂರು ಸ್ಮಶಾನದಲ್ಲಿ ನೆರವೇರಿಸಲಾಯಿತು.

ಸಾಮಾಜಿಕ ಕಳಕಳಿಯೊಂದಿಗೆ ಪುತ್ತೂರು ವಾರಿಯರ್ಸ್ ತಂಡವು ಮೃತರ ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ಸಹಕಾರವನ್ನು ನೀಡಿ, ಮಾನವೀಯ ಸೇವೆಯನ್ನು ಸಲ್ಲಿಸಿದ್ದು, ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here