







ಪುತ್ತೂರು: ಪುಣಚ ಕೋ ಆಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕಿ ಮತ್ತು ನೀರ್ಕಜೆ ಜಯಶ್ಯಾಂ ಅವರ ಪತ್ನಿ ಭಾರತಿ ಜಯಶ್ಯಾಂ (54ವ) ಅವರು ಆ.21 ರಂದು ಹೃದಯಾಘಾತದಿಂದ ನಿಧನರಾದರು.


ಭಾರತಿ ಅವರು ಬೆಳಗ್ಗೆ ಪುಣಚ ನೀರ್ಕಜೆ ಮನೆಯಲ್ಲಿ ಹೃದಯಾಘಾತಕೀಡಾದ ತಕ್ಷಣ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತರುವಾಗಲೇ ನಿಧನರಾದರು. ಮೃತರು ಗಂಡ ಪ್ರಗತಿಪರ ಕೃಷಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರೀಯರಾದ ಜಯಶ್ಯಾಮ್ ಮತ್ತು ಪುತ್ರ ಅಜೇಯ ಅವರನ್ನು ಅಗಲಿದ್ದಾರೆ.













