






ಓಟು ಹಾಕಿ ಗೆಲ್ಲಿಸಿದ ಜನಪ್ರತಿನಿಧಿಯನ್ನು, ಸರಕಾರವನ್ನು ಕೇಳೋಣ
ಪ್ರಜೆಗಳಾಗಿ (ರಾಜರುಗಳಾಗಿ) ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ
ಅದು ಸಾಧ್ಯವಾಗದಿದ್ದರೆ ರಸ್ತೆಗಿಳಿದು ಸರಿಪಡಿಸಲು ಮುಂದಾಗೋಣವೇ.
ಅಭಿಪ್ರಾಯಗಳನ್ನು ಕಳುಹಿಸಿ
ಉಪ್ಪಿನಂಗಡಿ -ಗುರುವಾಯನಕೆರೆ ರಸ್ತೆಯಲ್ಲಿ ಬರೋಬ್ಬರಿ 1,148 ಹೊಂಡಗಳು, ಗುರುವಾಯನಕೆರೆ – ಹೊಸಂಗಡಿ ರಸ್ತೆಯಲ್ಲಿ 294 ಮಹಾಗುಂಡಿಗಳು, 700ಕ್ಕೂ ಅಧಿಕ ಸಣ್ಣ ಗುಂಡಿಗಳು ಇವೆ ಎಂದು ವಿವರವಾದ ಲೇಖನ ಕಳೆದ ಸುದ್ದಿಬಿಡುಗಡೆಯಲ್ಲಿ, ಈ ವಾರ ಸುದ್ದಿ ಚಾನೆಲ್‌ನಲ್ಲಿ ಬಂದಿದೆ. ಜನರ ಅಭಿಪ್ರಾಯಗಳು, ಕಷ್ಟನಷ್ಟಗಳು ನೋವುಗಳು, ಅಸಹಾಯಕತೆಗಳು ಪತ್ರಿಕೆ ಮತ್ತು ಸುದ್ದಿ ಚಾನೆಲ್‌ನಲ್ಲಿ ಪ್ರಸಾರಗೊಂಡಿದೆ.


ಬ್ರಿಟಿಷರಿಂದ ಸ್ವಾತಂತ್ರ್ಯ ಬಂದು 80 ವರ್ಷವಾಯಿತು. ಪ್ರಜಾಪ್ರಭುತ್ವ ಬಂದು 74 ವರ್ಷವಾಯಿತು. ಪ್ರಜಾಪ್ರಭುತ್ವದಲ್ಲಿ ಜನರು ತಮಗೆ ಬೇಕಾಗಿ ಓಟು ಹಾಕಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಅವರಿಂದ ನೇಮಕಗೊಂಡ ಅಽಕಾರಿಗಳು ನಮಗಾಗಿ ಕೆಲಸ ಮಾಡುತ್ತಾರೆ. ಜನರು ತೆರಿಗೆ ಪಾವತಿಸುತ್ತಿದ್ದಾರೆ. ರೋಡ್ ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಅದು ನಮ್ಮ ರಸ್ತೆ ಅದರ ಜವಾಬ್ದಾರಿ ಪ್ರಜೆಗಳಾದ ನಮಗೂ ಇದೆ. ಹೀಗಿರುವಾಗ ನಮ್ಮ ಕಷ್ಟಗಳನ್ನು ಯಾರ ಬಳಿ ಹೇಳಬೇಕು.? ಯಾರು ಪರಿಹರಿಸಬೇಕು?, ಯಾರು ಹೊಣೆಗಾರರು ಎಂಬ ಪ್ರಶ್ನೆಯನ್ನು ಪಕ್ಷ, ಜಾತಿ, ಧರ್ಮ ಬೇಧ ಭಾವ ಬಿಟ್ಟು ಪ್ರತಿಯೊಬ್ಬ ಪ್ರಜೆ ಕೇಳಬೇಕು.



ಆಗ ನಿಜ ಅರ್ಥದಲ್ಲಿ ನಾವು ರಾಜರುಗಳಾಗುತ್ತೇವೆ. ನಮ್ಮ ಕೆಲಸಗಳು ಸುಗಮವಾಗುತ್ತದೆ. ಸಮಸ್ಯೆಗಳು ಪರಿಹಾರಗೊಳ್ಳುತ್ತವೆ ಎಂಬುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಕಾರಣಕ್ಕಾಗಿ ನಮ್ಮ ಓಟಿನಲ್ಲಿ ಗೆದ್ದಿರುವ ಜನಪ್ರತಿನಿಧಿಗಳ, ಸರಕಾರದ ಪ್ರತಿನಿಧಿಯ ಫೋಟೋಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಅವರ ಉತ್ತಮ ಕೆಲಸಗಳನ್ನು ಗುರುತಿಸೋಣ, ಅವರ ಜವಾಬ್ದಾರಿಯನ್ನು ನೆನಪಿಸೋಣ, ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ. ಅವರಿಂದ ಸಾಧ್ಯವಾಗದಿದ್ದರೆ ಕೊನೆಗೆ ರಸ್ತೆಗಿಳಿದಾದರೂ ರಸ್ತೆಯನ್ನು ಸರಿಪಡಿಸಲು ಮುಂದಾಗೋಣವೇ?.

1148 ಹೊಂಡಗಳ ರಸ್ತೆ ವೀಕ್ಷಿಸಿದ ಜಿಲ್ಲಾಧಿಕಾರಿ
ಬಹಳ ಕೆಟ್ಟದಾಗಿದೆ ಈ ರೋಡ್ ಎಂದ ಡಿಸಿಪಿಲಿಗೂಡುನಿಂದ ಉಪ್ಪಿನಂಗಡಿ ತನಕ ರಸ್ತೆಯಲ್ಲಿರುವ 1148 ಗುಂಡಿಗಳನ್ನು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ.ಅವರು ವೀಕ್ಷಣೆ ಮಾಡಿದರು.
ಬೆಳ್ತಂಗಡಿಯಲ್ಲಿ ನಡೆದ ಪ.ಜಾತಿ,.ಪಂಗಡದ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿಯವರು ವಾಪಸ್ ಸುಳ್ಯಕ್ಕೆ ಹೋಗುವಾಗ ಅದೇ ರಸ್ತೆಯಲ್ಲಿ ಪ್ರಯಾಣಿಸಿದರು.ಸಭೆಯಲ್ಲಿ ಈಶ್ವರಿ ಪದ್ಮುಂಜರವರು ರಸ್ತೆ ದುಸ್ಥಿತಿ ವಿಚಾರ ಪ್ರಸ್ತಾಪಿಸಿದ್ದರು.ಪಿಲಿಗೂಡು-ಉಪ್ಪಿನಂಗಡಿ ರಸ್ತೆ ಅವ್ಯವಸ್ಥೆ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಗಿತ್ತು.ಈ ಸಂದರ್ಭ ಜಿಲ್ಲಾಧಿಕಾರಿಯವರು,ನಾನು ಅದೇ ರಸ್ತೆಯಲ್ಲಿ ಹೋಗುವುದಾಗಿ ತಿಳಿಸಿದ್ದರು.ಬಳಿಕ ಸುದ್ದಿ ತಂಡವೂ ಅವರ ಕಾರನ್ನು ಹಿಂಬಾಲಿಸಿತ್ತು.ಉಪ್ಪಿನಂಗಡಿಯಲ್ಲಿ ಸುದ್ದಿ ತಂಡ ಅವರನ್ನು ಸಂಪರ್ಕಿಸಿ ರಸ್ತೆ ದುಃಸ್ಥಿತಿ ಕುರಿತು ಮಾತನಾಡಿಸಿದಾಗ, ‘ಬಹಳ ಕೆಟ್ಟದಾಗಿದೆ ಈ ರೋಡ್.ನಾನು ಈ ಕುರಿತು ಪಿಡಬ್ಲ್ಯೂಡಿ ಅಧಿಕಾರಿಗಳ ಜೊತೆ ಮಾತನಾಡುವುದಾಗಿ’ ತಿಳಿಸಿದರು.ಪಿಲಿಗೂಡುವಿನಿಂದ ಉಪ್ಪಿನಂಗಡಿ ತನಕದ ರಸ್ತೆಯಲ್ಲಿ 1148 ಹೊಂಡಗಳಿರುವ ಕುರಿತು ಕಳೆದ ವಾರದ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.










