ಸರ್ವೆ: ಬಿಎಲ್‌ಓ ಪುಷ್ಪಾವತಿ, ಬಿಎಲ್‌ಎ ಸುಂದರ ಬಲ್ಯಾಯರಿಗೆ ಗೌರವಾರ್ಪಣೆ

0

ಪುತ್ತೂರು: ಸರ್ವೆ ಗ್ರಾಮದ 194 ಬೂತ್‌ನ ಬಿಎಲ್‌ಓ ಪುಷ್ಪಾವತಿಯವರು ಗ್ರಾಮದ ಎಲ್ಲಾ ಮನೆಗಳಿಗೆ ತೆರಳಿ ಎಸ್‌ಐಆರ್ ಫಾರ್ಮನ್ನು ಸಮಯಕ್ಕೆ ಸರಿಯಾಗಿ ಭರ್ತಿ ಮಾಡಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು ಅವರನ್ನು ಬೂತ್ ಮಟ್ಟದಲ್ಲಿ ಗೌರವಿಸಲಾಯಿತು.

ಅವರಿಗೆ ಸಹಕಾರ ನೀಡಿದ ಬಿಎಲ್‌ಎ ಸುಂದರ ಬಲ್ಯಾಯ ಅವರನ್ನು ಕೂಡಾ ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಎನ್‌ಎಸ್‌ಡಿ, ಸದಾಶಿವ ಭಂಡಾರಿ ಬೊಟ್ಯಾಡಿ, ಮಾಜಿ ಸದಸ್ಯ ಕರುಣಾಕರ ಗೌಡ ಎಲಿಯ, ಅಶೋಕ್ ರೈ ಸೊರಕೆ, ಹೇಮರಾಜ್. ರಾಧಾಕೃಷ್ಣ ರೈ ರೆಂಜಲಾಡಿ, ಜಯಪ್ರಕಾಶ್ ಬಾಲಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here