ಪುತ್ತೂರಿನ ಅರುಣ ಕಲಾ ಮಂದಿರದಲ್ಲಿ ಜೋಯ್ ಅಲುಕ್ಕಾಸ್‌ನಿಂದ ಚಿನ್ನಾಭರಣಗಳ ಪ್ರದರ್ಶನ, ಮಾರಾಟ “ಬಿಗ್ ಜ್ಯುವೆಲ್ಲರಿ ಶೋ” ಉದ್ಘಾಟನೆ

0

ಪುತ್ತೂರು: ದೇಶ ವಿದೇಶಗಳಲ್ಲಿ ಮಳಿಗೆ ಹೊಂದಿರುವ ಪ್ರಖ್ಯಾತ ಚಿನ್ನಾಭರಣಗಳ ಮಳಿಗೆ ಜೋಯ್ ಅಲುಕ್ಕಾಸ್ ಸಂಸ್ಥೆ ವತಿಯಿಂದ ಪುತ್ತೂರಿನ ಅರುಣ ಕಲಾ ಮಂದಿರದಲ್ಲಿ ನಡೆಯಲಿರುವ ಮೂರು ದಿನಗಳ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ “ಬಿಗ್ ಜ್ಯುವೆಲ್ಲರಿ ಶೋ” ಆ.22ರಂದು ಉದ್ಘಾಟನೆಗೊಂಡಿತು.

ಅತಿಥಿ ಗಣ್ಯರು ಉದ್ಘಾಟಿಸಿದರು. ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ, ದರ್ಬೆ ಅಶ್ವಿನಿ ಹೊಟೇಲ್ ಮಾಲಕ ಕರುಣಾಕರ ರೈ ದೇರ್ಲ, ಪದ್ಮ ಸೋಲಾರ್ ಮಾಲಕ ಪದ್ಮನಾಭ ಶೆಟ್ಟಿ, ಹೊಟೇಲ್ ಹರಿಪ್ರಸಾದ್ ಮಾಲಕ ಹರೀನಾರಾಯಣ ಹೊಳ್ಳ, ವೈದ್ಯೆ ಡಾ.ತನ್ವಿ, ಮೌರೀಸ್ ಮಾಸ್ಕರೇನಸ್, ಉದ್ಯಮಿಗಳಾದ ಸುಧೀರ್ ಶೆಟ್ಟಿ, ರಾಧಾಕೃಷ್ಣ ನಾಯಕ್, ವಲೇರಿಯನ್ ಡಯಾಸ್‌ರವರು ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು. ಸಿಬ್ಬಂದಿ ಶ್ವೇತಾ ಸ್ವಾಗತಿಸಿದರು. ಮ್ಯಾನೇಜರ್ ಹಾಗು ಸಿಬಂದಿಗಳು ಸಹಕರಿಸಿದರು.

ಮೇಳದ ವಿಶೇಷತೆ:
ಆ.22ರಿಂದ 24ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟದಲ್ಲಿ ಜ್ಯುವೆಲ್ಲರಿಗಳ ಮಜೂರಿಯ ಮೇಲೆ ಫ್ಲಾಟ್ ಶೇ.40 ಡಿಸ್ಕೌಂಟ್ ಮತ್ತು ಹಳೆಯ ಚಿನ್ನ ವಿನಿಮಯದ ಮೇಲೆ ಯಾವುದೇ ರೀತಿಯ ಕಡಿತ ಇರುವುದಿಲ್ಲ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here