






ಉಪ್ಪಿನಂಗಡಿ: ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ಪ್ರೆಧಾನ ಕಾರ್ಯದರ್ಶಿಯಾಗಿ ಕೊಯಿಲದ ಖಲಂದರ್ ಜೆ.ಎಸ್. ಆಯ್ಕೆಯಾಗಿದ್ದಾರೆ.


ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಭಾಗದ ಬ್ಯಾರಿ ಸಮುದಾಯದ ಯುವಕರು ಕಟ್ಟಿಕೊಂಡಿರುವ ಸಂಘಟನೆ ಇದಾಗಿದ್ದು, ಇದರ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.



ಖಲಂದರ್ ಬೆಂಗಳೂರುನಲ್ಲಿ ಹೈಕೋರ್ಟು ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾಗಿರುತ್ತಾರೆ. ಕಡಬ ತಾಲೂಕು ಕೊಯಿಲದ ಪೆರ್ಜಿ ನಿವಾಸಿಯಾಗಿರುವ ಖಲಂದರ್ ಜೆ.ಎಸ್. ಉಪ್ಪಿನಂಗಡಿಯ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.










