






ಒಟ್ಟು ವ್ಯವಹಾರ ರೂ.359 ಕೋಟಿ, ನಿವ್ವಳ ಲಾಭ ರೂ.1 ಕೋಟಿ 28 ಲಕ್ಷ, ಶೇ.11 ಡಿವಿಡೆಂಡ್


ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಆ.25 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು.



ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸಂಘವು ವರದಿ ವರ್ಷದಲ್ಲಿ 359 ಕೋಟಿ ರೂಪಾಯಿಗಳ ಒಟ್ಟು ವ್ಯವಹಾರ ನಡೆಸಿದ್ದು ರೂ.1 ಕೋಟಿ 28 ಲಕ್ಷದ 83 ಸಾವಿರದ 306 ರೂಪಾಯಿ ನಿವ್ವಳ ಲಾಭ ಗಳಿಸಿದೆ. ಈ ವರದಿ ವರ್ಷದಲ್ಲಿ ಸಂಘದ ಸದಸ್ಯರಿಗೆ ಶೇ.11 ಡಿವಿಡೆಂಡ್ ನೀಡುವುದಾಗಿ ಈ ಸಂದರ್ಭದಲ್ಲಿ ಅವರು ಘೋಷಿಸಿದರು. ಇದಲ್ಲದೆ ರೈತರ ಹಿತದೃಷ್ಟಿಯಿಂದ ರೈತ ಕಲ್ಯಾಣ ನಿಧಿಯನ್ನು ಈ ವರ್ಷದಿಂದ ಆರಂಭವಿಸುವುದು ಹಾಗೇ ಮುಂದಿನ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ವಿಶೇಷವಾಗಿ ಸುವರ್ಣ ಮಹೋತ್ಸವ ಉಳಿತಾಯ ಪತ್ರ ತೆರೆಯುವುದು ಎಂದು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್.ರವರು ಹಿಂದಿನ ಸಭೆಯ ನಡಾವಳಿಗಳನ್ನು ಸಭೆಯ ಮುಂದಿಟ್ಟರು ಅಲ್ಲದೆ ಲೆಕ್ಕಪರಿಶೋಧನಾ ವರದಿಯ ಪರಿಶೀಲನೆ ಮತ್ತು ಮಂಜೂರಾತಿ, ಮುಂದಿನ ವಾರ್ಷಿಕ ವರ್ಷಕ್ಕೆ ತಯಾರಿಸಿದ ಅಂದಾಜು ಬಜೆಟ್ ಮಂಜೂರಾತಿ ಹಿAದಿನ ಬಜೆಟ್ಗಿಂತ ಹೆಚ್ಚಾಗಿ ಖರ್ಚಾದ ವಿವರ ಇತ್ಯಾದಿಗಳನ್ನು ಸಭೆಯ ಮುಂದಿಟ್ಟರು. ಸಂಘದ ಲೆಕ್ಕಿಗರಾದ ವೀಣಾ ರೈಯವರು 2025-26 ನೇ ಸಾಲಿನ ವರದಿ ಮಂಡನೆ ಮಾಡುತ್ತಾ, ವರದಿ ವರ್ಷದ ಆರಂಭದಲ್ಲಿ 4250 ಮಂದಿ ಸದಸ್ಯರಿದ್ದು ರೂ. 5,13,84,620 ಪಾಲುಬಂಡವಾಳವಿತ್ತು, ವರದಿ ವರ್ಷದಲ್ಲಿ 170 ಜನ ಸದಸ್ಯರು ಸೇರ್ಪಡೆಯಾಗಿ 78 ಜನ ಸದಸ್ಯತ್ವವನ್ನು ಬಿಟ್ಟಿರುತ್ತಾರೆ. ಪಾಲುಬಂಡವಾಳ ರೂ. 37,09,300 ಜಮೆಯಾಗಿರುತ್ತದೆ. ರೂ. 11,43,030 ಪಾಲುಬಂಡವಾಳ ಪಾವತಿಸಿದೆ. ವರ್ಷಾಂತ್ಯಕ್ಕೆ 4342 ಮಂದಿ ಸದಸ್ಯರಿದ್ದು ರೂ. 5,39,50,890 ಪಾಲುಬಂಡವಾಳವಿರುತ್ತದೆ. ಸರ್ಕಾರದ ಪಾಲುಬಂಡವಾಳ ಇರುವುದಿಲ್ಲ ಎಂದು ತಿಳಿಸಿದರು. ಠೇವಣಿಗಳಲ್ಲಿ ವರ್ಷಾರಂಭದಲ್ಲಿ ವಿವಿಧ ಠೇವಣಿಗಳ ಬಾಬ್ತು ರೂ. 29,17,69,205.69 ಇದ್ದು, ರೂ. 1,08,02,49,642.00 ಜಮೆಯಾಗಿ ರೂ. 1,04,17,30,205.40 ಪಾವತಿಸಿದೆ. ವರ್ಷಾಂತ್ಯಕ್ಕೆ ವಿವಿಧ ಠೇವಣಿಗಳಾಗಿ ರೂ. 33,02,88,643.09 ಇರುತ್ತದೆ. ಪಡೆದ ಸಾಲಗಳಲ್ಲಿ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನಿAದ ಪಡೆದ ಸಾಲಗಳು ವರ್ಷಾರಂಭಕ್ಕೆ ರೂ. 38,75,45,515.00 ಇದ್ದು, ವರದಿ ವರ್ಷದಲ್ಲಿ ರೂ. 31,51,04,900.00 ಸಾಲವಾಗಿ ಪಡೆಯಲಾಗಿದೆ ಹಾಗೂ ರೂ. 31,13,87,465.00 ಮರುಪಾವತಿಸಲಾಗಿದೆ. ವರ್ಷಾಂತ್ಯಕ್ಕೆ ಕೇಂದ್ರ ಬ್ಯಾಂಕ್ನಿAದ ಪಡೆದ ಸಾಲವಾಗಿ ರೂ. 39,12,62,950.00 ಇರುತ್ತದೆ. ಈ ಪೈಕಿ ವಾಯಿದೆ ದಾಟಿದ ಸಾಲಗಳಿರುವುದಿಲ್ಲ ಎಂದು ತಿಳಿಸಿದರು.
ಸದಸ್ಯರ ಸಾಲಗಳಲ್ಲಿ ವರ್ಷಾರಂಭಕ್ಕೆ ರೂ. 45,53,45,342.00 ಸದಸ್ಯರ ಹೊರಬಾಕಿ ಸಾಲವಾಗಿ ಇದ್ದು, ವರದಿ ವರ್ಷದಲ್ಲಿ ರೂ. 62,43,01,081.00 ಸಾಲ ವಿತರಿಸಿದೆ. ಹಾಗೂ ರೂ. 60,34,23,902.00 ವಸೂಲಾತಿಯಾಗಿದೆ. ವರ್ಷಾಂತ್ಯಕ್ಕೆ ರೂ. 47,62,22,521.00 ಸದಸ್ಯರ ಸಾಲ ಹೊರಬಾಕಿ ಇರುತ್ತದೆ. ಈ ಪೈಕಿ ವಾಯಿದೆ ಮೀರಿದ ಸಾಲ ರೂ. 39,64,302 ಇರುತ್ತದೆ. ನಗದು ಶಿಲ್ಕುಗಳಲ್ಲಿ ವರ್ಷಾರಂಭದಲ್ಲಿ ನಗದು ಶಿಲ್ಕು ರೂ. 27,21,613.00 ಇದ್ದು, ರೂ. 12,50,68,292.00 ಜಮೆಯಾಗಿ ರೂ. 12,50,12,748.00 ಪಾವತಿಸಿದೆ. ವರ್ಷಾಂತ್ಯಕ್ಕೆ ನಗದು ಶಿಲ್ಕು ರೂ. 27,77,157.00 ಇರುತ್ತದೆ. ಕೇಂದ್ರ ಬ್ಯಾಂಕ್ನಲ್ಲಿರುವ ನಗದು ಶಿಲ್ಕುಗಳಲ್ಲಿ ಆರಂಭಕ್ಕೆ ರೂ. 5,23,53,778.84 ಬ್ಯಾಂಕ್ನ ವಿವಿಧ ಖಾತೆಗಳಲ್ಲಿ ನಗದು ಶಿಲ್ಕು ಇದ್ದು, ವರದಿ ವರ್ಷದಲ್ಲಿ ರೂ. 1,05,41,66,944.91 ಪಾವತಿಸಲಾಗಿದೆ. ರೂ. 1,04,80,18,921.44ನ್ನು ವಾಪಾಸು ಬ್ಯಾಂಕ್ನಿAದ ಪಡೆದು ನಂತರ ವರ್ಷಾಂತ್ಯಕ್ಕೆ ರೂ. 5,85,01,802.31 ಬ್ಯಾಂಕ್ನಲ್ಲಿ ವಿವಿಧ ಖಾತೆಗಳಲ್ಲಿ ನಗದು ಶಿಲ್ಕು ಇರುತ್ತದೆ ಎಂದು ಸಭೆಗೆ ತಿಳಿಸಿದರು. ಧನ ವಿನಿಯೋಗಗಳಲ್ಲಿ ವರ್ಷಾರಂಭಕ್ಕೆ ರೂ. 23,37,26,592.00 ಇದ್ದು, ವರದಿ ವರ್ಷದಲ್ಲಿ ರೂ. 25,61,00,973.00 ಹೂಡಲಾಗಿದೆ ಹಾಗೂ ರೂ. 23,35,26,052.00ನ್ನು ವಾಪಾಸು ಬ್ಯಾಂಕ್ನಿAದ ಪಡೆಯಲಾಗಿದೆ. ವರ್ಷಾಂತ್ಯಕ್ಕೆ ರೂ. 23,37,26,592 ಬ್ಯಾಂಕ್ನಲ್ಲಿ ವಿವಿಧ ಖಾತೆಗಳಲ್ಲಿ ಧನ ವಿನಿಯೋಗ ಮಾಡಲಾಗಿದೆ.ಇತರ ಸಂಸ್ಥೆಗಳಲ್ಲಿ ಪಾಲುಗಳಲ್ಲಿ ಹಿಂದಿನ ವರ್ಷದಲ್ಲಿ ರೂ. 1,95,95,100.00 ವಿವಿಧ ಸಂಸ್ಥೆಗಳಲ್ಲಿ ಪಾಲುಬಂಡವಾಳ ಇತ್ತು. ವರದಿ ವರ್ಷದಲ್ಲಿ ರೂ. 5,10,000.00 ಪಾಲು ಹೂಡಲಾಗಿದ್ದು, ಯಾವುದೇ ಪಾಲು ಹಿಂಪಡೆದಿಲ್ಲ. ವರ್ಷಾಂತ್ಯಕ್ಕೆ ರೂ. 2,01,05,100.00 ಪಾಲು ಬಂಡವಾಳವಾಗಿ ಇರುತ್ತದೆ ಎಂದು ತಿಳಿಸಿದರು.
ವ್ಯಾಪಾರ ವಹಿವಾಟುಗಳಲ್ಲಿ ವರ್ಷಾರಂಭಕ್ಕೆ ರೂ. 1,42,268.70 ಮೌಲ್ಯದ ಸರಕು ದಾಸ್ತಾನು ಇತ್ತು. ವರದಿ ವರ್ಷದಲ್ಲಿ ರೂ. 31,39,496.62 ಮೌಲ್ಯದ ಸರಕು ಖರೀದಿಸಿ, ರೂ. 26,60,289.24 ಮೌಲ್ಯದ ಸರಕು ಮಾರಾಟ ಮಾಡಲಾಗಿದೆ. ವ್ಯಾಪಾರ ಲಾಭವಾಗಿ ರೂ. 19,98,357.22ನ್ನು ಗಳಿಸಲಾಗಿದೆ. ಸ್ಥಿರ – ಚರ ಸೊತ್ತುಗಳಲ್ಲಿ ಪೀಠೋಪಕರಣಗಳು ಮತ್ತು ಜೋಡಣೆಗಳ ಮೌಲ್ಯ ರೂ. 48,26,856.87 ಇರುತ್ತದೆ. ನಿವೇಶನಗಳು ಮತ್ತು ಗೋದಾಮುಗಳ ಮೌಲ್ಯವಾಗಿ ರೂ. 87,66,259.05 ಇರುತ್ತದೆ.ಲಾಭ – ನಷ್ಟದ ಲೆಕ್ಕಚಾರದಲ್ಲಿ ವರದಿ ವರ್ಷದಲ್ಲಿ ಸಂಘವು ರೂ. 1,28,83,306.03 ನಿವ್ವಳ ಲಾಭ ಗಳಿಸಿದೆ ಎಂದು ಲೆಕ್ಕಿಗರಾದ ವೀಣಾ ರೈಯವರು ತಮ್ಮ ವರದಿ ಮಂಡನೆಯ ಮೂಲಕ ಸಭೆಗೆ ತಿಳಿಸಿದರು.
2025-26 ನೇ ಸಾಲಿಗೆ ನಿವ್ವಳ ಲಾಭಾಂಶ ಹಂಚಿಕೆ, 2026-27 ನೇ ಸಾಲಿಗೆ ಲೆಕ್ಕಪರಿಶೋಧಕರ ನೇಮಕಾತಿ ವಿಚಾರ, ಉಪನಿಯಮಗಳ ತಿದ್ದುಪಡಿ ಸೇರಿದಂತೆ ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ಎ, ನಿರ್ದೇಶಕರುಗಳಾದ ಉಮೇಶ್ ಗೌಡ ಕೆ, ಅಮರನಾಥ ರೈ, ಸಂತೋಷ್ ಆಳ್ವ, ರಾಜೀವಿ ಎಸ್.ರೈ, ಮಲ್ಲಿಕಾ ಎ.ಜೆ, ಸತೀಶ್ ಕರ್ಕೇರ, ಶಿವರಾಮ ಬಿ, ತಿಲಕ್ ರೈ ಕುತ್ಯಾಡಿ, ವಸಂತ ಕುಲಾಲ್, ಶ್ರೀನಿವಾಸ ಪ್ರಸಾದ್ ಮುಡಾಲ, ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕರಾದ ಶರತ್ ಡಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಉದಯಶಂಕರ ಕೆ.ಪಿ ಪ್ರಾರ್ಥಿಸಿದರು. ನಿರ್ದೇಶಕ ಅಮರನಾಥ ರೈ ಕೆ ಸ್ವಾಗತಿಸಿದರು. ನಿರ್ದೇಶಕಿ ರಾಜೀವಿ ಯಸ್ ರೈ ವಂದಿಸಿದರು.ಸAಘದ ಶಾಖಾ ವ್ಯವಸ್ಥಾಪಕ ರಾಜ್ಪ್ರಕಾಶ್ ರೈ ಕುಂಬ್ರ, ಎಲ್ಐಸಿ ವಿಮಾ ಸಲಹೆಗಾರ ನಾರಾಯಣ ಕುಕ್ಕುಪುಣಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ರಾಜ್ಕಿರಣ ಕೆ.ಎಂ, ಭರತ್ ಎಸ್.ಎನ್, ಶಾಂತ ಕುಮಾರ್,ವೆಂಕಪ್ಪ ಡಿ, ಹರೀಶ್ ಕೆ, ಪ್ರೀತಿ, ಹರ್ಷಿತಾ, ಕರುಣಾಕರ , ಪ್ರದ್ವಿನ್ ಪ್ರಸಾದ್ ಸಹಕರಿಸಿದ್ದರು.
ಸಭೆಯಿಂದ ಸಂಘದ ಸದಸ್ಯರುಗಳು ಹಲವು ಬೇಡಿಕೆ, ಸಲಹೆಗಳನ್ನು ಮುಂದಿಟ್ಟರು.ಬಡಗನ್ನೂರಿನಲ್ಲಿ ಶಾಖೆ ಆರಂಭಿಸಿ, ಈಗಾಗಲೇ ಸುಳ್ಯಪದವಿನಲ್ಲಿ ನೂತನ ಕಟ್ಟಡ ನಿರ್ಮಾಣದೊಂದಿಗೆ ಶಾಖೆ ಆರಂಭಿಸಲಾಗಿದ್ದು ಅದೇ ರೀತಿ ಬಡಗನ್ನೂರಿನಲ್ಲೂ ಶಾಖೆ ಆರಂಭಿಸಿ ಅಲ್ಲದೆ ವಾರದಲ್ಲಿ ಒಂದು ದಿನವಾದರೂ ಮೈಂದನಡ್ಕ ಭಾಗದಲ್ಲಿ ರೇಷನ್ ವಿತರಣೆಗೆ ಅವಕಾಶ ಮಾಡಿಕೊಡಿ ಎಂದು ರಾಮಕೃಷ್ಣ ಭಟ್ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈಯವರು, ಈ ಬಗ್ಗೆ ಗಣನೆಗೆ ತೆಗೆದುಕೊಳ್ಳುತ್ತೇವೆ ಮೈಂದನಡ್ಕದಲ್ಲಿ ಕಟ್ಟಡದ ವ್ಯವಸ್ಥೆ ಇದ್ದರೆ ವಾರದಲ್ಲಿ ಒಂದು ದಿನ ರೇಷನ್ ವಿತರಣೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು. ಸಂಘದ ಸಿಬ್ಬಂದಿ ವರ್ಗದವರು ಅತ್ಯುತ್ತಮ ಸೇವೆಯನ್ನು ನೀಡುತ್ತಿದ್ದಾರೆ ಎಂದು ದೇರ್ಲ ಅಮ್ಮಣ್ಣ ರೈ ಶ್ಲಾಘನೆ ವ್ಯಕ್ತಪಡಿಸಿದರು.ಶೂನ್ಯ ಬಡ್ಡಿದರದಲ್ಲಿ ರೂ.5 ಲಕ್ಷ ಸಾಲ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಮೆಸೇಜ್ ಬಂದಿದೆ ಆದರೆ ಸಾಲ ವಿತರಣೆಯಾಗುತ್ತಿಲ್ಲ, ಆದಷ್ಟು ಶೀಘ್ರದಲ್ಲಿ ಈ ಸಾಲ ವಿತರಣೆಗೆ ಆದೇಶ ಬರಲಿ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ಹರೀಶ್ ರೈ ಜಾರತ್ತಾರು ತಿಳಿಸಿದರು. ಅಕ್ರಮ ಸಕ್ರಮ ಜಾಗ ಹೊಂದಿದವರಿಗೆ ಈ ಹಿಂದೆ ಸಾಲ ನೀಡಲಾಗುತ್ತಿತ್ತು ಆದರೆ ಇನ್ನು ಮುಂದೆ ಅಕ್ರಮ ಸಕ್ರಮ ಜಾಗವು ಪ್ಲಾಟಿಂಗ್ ಆಗಿದ್ದರೆ ಮಾತ್ರ ಅದಕ್ಕೆ ಸಾಲ ನೀಡಲು ಅವಕಾಶ ಎಂದು ಆದೇಶ ಹೊರಡಿಸಿದ್ದರಿಂದ ಬಹಳಷ್ಟು ರೈತರಿಗೆ ಸಮಸ್ಯೆಯಾಗಲಿದೆ. ಇದಲ್ಲದೆ ಈ ಹಿಂದೆ ಸಾಲ ಪಡೆದುಕೊಂಡು ಸರಿಯಾಗಿ ಮರುಪಾವತಿ ಮಾಡುವ ರೈತರಿಗೂ ಮುಂದಕ್ಕೆ ಸಾಲ ಪಡೆಯಲು ಅಸಾಧ್ಯವಾಗಿದೆ.ಪ್ಲಾಟಿಂಗ್ ಆಗದೇ ಇದ್ದುದರಿಂದ ಮುಂದಕ್ಕೆ ಬಹಳಷ್ಟು ಸಮಸ್ಯೆ ಇದೆ ಆದ್ದರಿಂದ ಈ ಬಗ್ಗೆಯೂ ಸರಕಾರದ ಗಮನಕ್ಕೆ ತರುವುದು ಒಳಿತು ಎಂದು ಪುರಂದರ ಶೆಟ್ಟಿ ಮುಡಾಲ, ಶಿವರಾಮ ಮಣಿಯಾಣಿ ಮತ್ತಿತರರು ತಿಳಿಸಿದರು.
ಹೃದಯಾಘಾತಕ್ಕೂ ವಿಮೆ ಅನ್ವಯವಾಗಬೇಕು
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚುತ್ತಿದ್ದು ಹೆಚ್ಚಾಗಿ ಯುವಕರೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ ಆದರೆ ಹೃದಯಾಘಾತಕ್ಕೆ ವಿಮೆ ಕಂಪೆನಿಯವರು ಯಾವುದೇ ವಿಮೆ ಅನ್ವಯ ಮಾಡುವುದಿಲ್ಲ ಆದ್ದರಿಂದ ಯುನೈಟೆಡ್ ಇನ್ಸೂರೆನ್ಸ್ ಕಂಪೆನಿಯವರು ಸೇರಿದಂತೆ ಎಲ್ಲಾ ವಿಮೆ ಕಂಪೆನಿಗಳು ಕೂಡ ಹೃದಯಘಾತವನ್ನು ವಿಮೆಗೆ ಒಳಪಡುವಂತೆ ಮಾಡಬೇಕು ಈ ಬಗ್ಗೆ ವಿಮೆ ಕಂಪೆನಿಗೆ ಬರೆದುಕೊಳ್ಳಬೇಕು ಎಂದು ರೈತರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು ಈ ಬಗ್ಗೆ ವಿಮೆ ಕಂಪೆನಿಗೆ ಬರೆದುಕೊಳ್ಳುವ ಎಂದು ತಿಳಿಸಿದರು.
ಸಾಲಗಾರ ರೈತರಿಗೆ ವರದಾನ : ರೈತ ಕಲ್ಯಾಣ ನಿಧಿ ಸ್ಥಾಪನೆ
ಸಂಘದ ಸಾಲಗಾರ ಸದಸ್ಯ ರೈತರ ಹಿತದೃಷ್ಟಿಯಿಂದ ರೈತ ಕಲ್ಯಾಣ ನಿಧಿ ಸ್ಥಾಪನೆ ಮಾಡುವ ಬಗ್ಗೆ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಸಭೆಯ ಮುಂದಿಟ್ಟರು. ಈ ನಿಧಿಗೆ ಸಂಘದ ಸಾಲಗಾರ ಸದಸ್ಯರು ನಿಗದಿಪಡಿಸಿದ ಚಂದಾ ಹಣವನ್ನು ವರ್ಷಕ್ಕೊಂದು ಬಾರಿ ಪಾವತಿ ಮಾಡತಕ್ಕದ್ದು, ಈ ನಿಧಿಯು ಸದಸ್ಯರ ಚಂದಾ ಹಣದ ಜೊತೆಗೆ ಸಂಘ ಪ್ರತಿವರ್ಷ ಲಾಭದ ವಿಂಗಡಣೆಯಿAದ ತೆಗೆದಿಟ್ಟ ಮೊಬಲಗನ್ನು ಹೊಂದಿರುತ್ತದೆ. ಒಂದೊಮ್ಮೆ ಸಾಲಗಾರ ಸದಸ್ಯನು ಮೃತಪಟ್ಟರೆ ಈ ಸದಸ್ಯರಿಗೆ ಬೆಳೆಸಾಲಕ್ಕೆ ಸಂಬAಧಿಸಿ ಯಾವುದೇ ವಿಮೆ ಇಲ್ಲದೆ ಇದ್ದಲ್ಲಿ ಹಾಗೂ ನಿಧಿಯನ್ನು ನೋಡಿಕೊಂಡು ಆಡಳಿತ ಮಂಡಳಿಯಿAದ ನಿರ್ದಿಷ್ಟ ಪಡಿಸಬಹುದಾದ ಸಾಲದ ಮೊತ್ತವನ್ನು ವಜಾಗೊಳಿಸುವುದು ಮತ್ತು ರೈತರ ಇತರ ಯಾವುದೇ ಸಮಸ್ಯೆಗಳಿಗೆ ಪೂರೈಸುವ ಉದ್ದೇಶವನ್ನು ಈ ನಿಧಿ ಹೊಂದಿದೆ ಎಂದು ತಿಳಿಸಿದರು. ನಿಧಿ ಸ್ಥಾಪನೆಯ ಬಗ್ಗೆ ಮಹಾಸಭೆಯಲ್ಲಿ ಅನುಮತಿಯನ್ನು ಪಡೆದುಕೊಳ್ಳಲಾಯಿತು.
ಸುವರ್ಣ ಮಹೋತ್ಸವ ಉಳಿತಾಯ ಪತ್ರ
ಸಂಘವು ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಠೇವಣಿ ಪತ್ರ( ಸುವರ್ಣ ಮಹೋತ್ಸವ ಉಳಿತಾಯ ಪತ್ರ)ವನ್ನು ಹೊರತಂದಿದ್ದು ಸೆ.1 ರಿಂದ 30 ರವರೇಗೆ ಈಠೇವಣಿ ಪತ್ರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಠೇವಣಿಯು 1 ವರ್ಷದ ಅವಧಿಗೆ ಇರುತ್ತದೆ. ಹೆಚ್ಚಿನ ವಿವರಗಳಿಗೆ ಸಂಘದ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ಅಧ್ಯಕ್ಷರ ಮಾತು
ಸಂಘವು ವರದಿ ವರ್ಷದಲ್ಲಿ 359 ಕೋಟಿ ವ್ಯವಹಾರ ನಡೆಸಿ 1ಕೋಟಿ 28 ಲಕ್ಷ ನಿವ್ವಳ ಲಾಭವನ್ನು ಪಡೆದುಕೊಂಡಿದೆ. ಸದಸ್ಯರಿಗೆ ಶೇ.11 ಡಿವಿಡೆಂಡ್ ಕೂಡ ಘೋಷಣೆ ಮಾಡಿದ್ದೇವೆ.ಈಗಾಗಲೇ ಸಂಘವು 50 ನೇ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ಇದರ ಅಂಗವಾಗಿ ಪ್ರತಿ ತಿಂಗಳಿಗೊಂದರಂತೆ ರೈತರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ. ಮುಂದೆ ಅದ್ಧೂರಿಯಾಗಿ ಸುವರ್ಣ ಮಹೋತ್ಸವವನ್ನು ಆಚರಿಸುವ ಸಿದ್ದತೆಯನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಸುವರ್ಣ ಮಹೋತ್ಸವ ಉಳಿತಾಯ ಪತ್ರ ಆರಂಭಿಸುತ್ತಿದ್ದೇವೆ. ಸಾಲಗಾರ ರೈತರ ಹಿತದೃಷ್ಟಿಯನ್ನು ಇಟ್ಟುಕೊಂಡು ರೈತ ಕಲ್ಯಾಣ ನಿಧಿಯನ್ನು ಆರಂಭಿಸುತ್ತಿದ್ದೇವೆ. ಒಟ್ಟಿನಲ್ಲಿ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ರೈತರ ಅಭ್ಯುದಯಕ್ಕೆ ಬೇಕಾದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಕೃಷಿ ಮತ್ತು ರೈತರ ಕಲ್ಯಾಣ ಅಭಿವೃದ್ಧಿ ಕೆಲಸಗಳಿಗೆ ಸದಾ ಸಿದ್ದವಿದೆ. ಸಂಘದ ಸಮಗ್ರ ಅಭಿವೃದ್ಧಿಯಲ್ಲಿ ಮೊತ್ತ ಮೊದಲಿಗೆ ನಮ್ಮ ರೈತಾಪಿ ಸದಸ್ಯರು ಕಾರಣರಾಗಿದ್ದಾರೆ. ಇದಲ್ಲದೆ ನಮ್ಮ ಸಂಘಕ್ಕೆ ಸಕಾಲದಲ್ಲಿ ಆರ್ಥಿಕ ನೆರವನ್ನು ನೀಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ಸೂಕ್ತ ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡಿದ ಸಹಕಾರ ಸಂಘಗಳ ಉಪನಿಬಂಧಕರು, ಸಹಾಯಕ ನಿಬಂಧಕರು, ಸಕಾಲದಲ್ಲಿ ಲೆಕ್ಕಪರಿಶೋಧನೆ ನಡೆಸಿ ವರದಿಯನ್ನು ನೀಡಿದವರಿಗೆ, ಸದಸ್ಯರ ಸಾಲ ವಸೂಲಾತಿಯಲ್ಲಿ ಶೇಕಡಾ 99 ಸಾಧನೆಗೆ ಸಹಕರಿಸಿದ ಹಾಗೂ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಠೇವಣಿದಾರರಿಗೆ, ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ, ಸಂಘದ ಸರ್ವ ಸದಸ್ಯರಿಗೆ, ಸಿಬ್ಬಂದಿಗಳಿಗೆ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳೊಂದಿಗೆ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.
ಪ್ರಕಾಶ್ಚಂದ್ರ ರೈ ಕೈಕಾರ, ಅಧ್ಯಕ್ಷರು ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ










