







ಬಡಗನ್ನೂರು: ಒಳ್ಳೆಯ ಯೋಜನೆಗಳು ಜನರ ಮನಸ್ಸಿನಲ್ಲಿ ವೇಗವಾಗಿ ಮತ್ತು ಗಟ್ಟಿಯಾಗಿ ತಲವೂರುತ್ತದೆ ಎಂಬದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಕ್ಷಿ ಎಂದು ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹೇಳಿದರು.



ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಪುತ್ತೂರು, ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಡಾ॥ ಹೇಮಾವತಿ ವೀ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಕಾವು ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳು ಪಟ್ಟೆ ‘ಬಿ’ ಒಕ್ಕೂಟದ ಪದಗ್ರಹಣ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಟಿಸಿ ಮಾತನಾಡಿದರು.



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಳ್ಳಿಗಳಲ್ಲಿ ಹಾಗೂ ಗ್ರಾಮಗಳ ಅಭಿವೃದ್ಧಿಯಲ್ಲಿ ಒಂದು ಮಹತ್ವರ ಕಾಂತ್ರಿಯನ್ನೇ ಮಾಡಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬರುವ ಮೊದಲು. ಹಳ್ಳಿಯ ಮತ್ತು ಗ್ರಾಮದ ಯುವಕರು ಮತ್ತು ಮಾತೆಯರು ಹಿಂಜರಿಕೆಯಲ್ಲಿ ಮನೆಯೊಳಗಿದ್ದು ಅವರಿಗೆ ಹಣಕಾಸಿ ಆಸೌಕರ್ಯದೊಂದಿಗೆ ಸಾರ್ವಜನಿಕ ಮುಕ್ತವಾಗಿ ಬೆರೆಯಲು ಮತ್ತು ಅಭಿವೃದ್ಧಿ ಎಂದರೆ ಏನು ಎಂದು ತೋರಿಸಿಕೊಟ್ಟಿದೆ. ಒಳ್ಳೆಯ ಯೋಜನೆಗಳು ಜನರ ಮನಸ್ಸಿನಲ್ಲಿ ವೇಗವಾಗಿ ಮತ್ತು ಗಟ್ಟಿಯಾಗಿ ತಲವೂರುತ್ತದೆ ಎಂಬದಕ್ಕೆ ಸಾಕ್ಷಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಇಡೀ ಕರ್ನಾಟಕ ಯಾವ ಮೂಲೆಯಲ್ಲಿ ನೋಡಿದರೂ ಪ್ರತಿ ಮನೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಲ್ಲದ ಮನೆ ಇಲ್ಲ ಆದರಿಂದ ಇದು ಆರೋಗ್ಯಕರವಾಗಿ ಮತ್ತು ಗಟ್ಟಿಯಾಗಿ ನೆಲವೊರಿದೆ. ಅಧಿಕಾರ ಹಸ್ತಾಂತರ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಒಂದು ಪ್ರಕ್ರಿಯೆ. ಇದೊಂದು ಅಧಿಕಾರ ತಿಳಿದುಕೊಳ್ಳದೆ ಸಮಾಜ ಸೇವೆ ಮತ್ತು ಸದಸ್ಯರ ಸೇವೆ. ಎಂಬ ಭಾವನೆಯಲ್ಲಿ ಸೇವೆ ಮಾಡಬೇಕು. ಸ್ಥಾನಮಾನ ಸೇವಾ ಸಾದನ ಎಂದು ಅರಿತಾಗ ಅಧಿಕಾರದ ಅಮಲು ಹತ್ತುದಿಲ್ಲ. ಮತ್ತು ಹತ್ತಬಾರದು ಎಂದು ಶ್ರೀ ಮಂಜುನಾಥ ದೇವರಲ್ಲಿ ಪ್ರಾರ್ಥಸುತ್ತ ಒಕ್ಕೂಟದ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭ ಹಾರೖೆಸಿದರು.
ಪುತ್ತೂರು ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಮಾತನಾಡಿ ಸುಮಾರು 40 ವರ್ಷದ ಕಷ್ಟ ಜೀವನದಲ್ಲಿ ಬೆಳೆದು ಬಂದವರು ನಾವು ಯಾರು ಬಡವರಾಗಿ ಮತ್ತು ಶ್ರೀಮಂತರಾಗಿ ಹುಟ್ಟಿಬರಲಿಲ್ಲ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆನಂತರದಲ್ಲಿ ಸ್ವತಂತ್ರವಾಗಿ ಬದಕಲು ಕಲಿತ್ತೇವೆ ಹೂರತು ಜೀವನ ಬದಲಾವಣೆ ಹೊಂದಿಲ್ಲ. ಆಧಕ್ಕೆ ಕೆಲವು ಸಂಪ್ರದಾಯ ಹೊರಗೆ ಬರಲು ಒಂದಿಷ್ಟು ತೊಡಗಕುಗಳು ಇದ್ದವು ಈ ತೊಡಕುಗಳನ್ನು ಹೋಗಲಾಡಿಸಲು ಪೂಜ್ಯ ಕಾವೊಂದರು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ರಮ ಹಾಕಿಕೊಂಡು ಒಂದು ಹಳ್ಳಿ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಮನಗಂಡವರು ಕಾವೊಂದರು. ಹಿಂದೆ ಪುರುಷ ಪ್ರಧಾನ ಸಮಾಜ ಇತ್ತು. ಮಹಿಳೆ ನಾಲ್ಕು ಗೋಡೆ ಮಧ್ಯೆ ಸೀಮಿತ ವಾಗಿದ್ದಳು ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಹಂತ ಹಂತವಾಗಿ ಕಾರ್ಯಕ್ರಮ ಹಾಕಿಕೊಂಡು ಇಂದು ಬದಲಾವಣೆ ಗೊಂಡು ಪುರುಷ ಪ್ರಧಾನ ವ್ಯವಸ್ಥೆ ಮಧ್ಯದಲ್ಲಿ ಮಹಿಳೆಯು ಸಮಾನವಾಗಿ ನಿಂತಿರುವುದು ಸರಕಾರದ ವಿವಿಧ ಯೋಜನೆಗಳ ಜತೆಗೆ ಗ್ರಾಮಾಭಿವೃದ್ಧಿ ಪಾಲು ಇದೆ ಎಂಬುವುದು ಸಂತೋಷ ತಂದಿದೆ. ಮಹಿಳೆಗೆ ಆತ್ಮಸೖೆರ್ಯ ತರುವಂತದು ರೖೆತರ ಬಗ್ಗೆ ಸಂಘಟನೆ ಮಾಡುವ ಬಗ್ಗೆ ಹಲವರು ಪೂಜ್ಯರನ್ನು ಕೊಂಡಾಡುತ್ತಿದ್ದಾರೆ ಸಂಘ ಸೀಮಿತವಾಗಿ ಕಟ್ಟಿ ಹಾಕಿ ಸಂಘ ಅಂದರೆ ಸಾಲ, ಸಾಲ ಅಂದರೆ ಸಂಘ ಅಂದುಕೊಂಡಿದ್ದಾರೆ ಆದರೆ ಸಂಘ ಬರೀ ಸಾಲ ಮಾತ್ರ ನೀಡುವುದಿಲ್ಲ ಜತೆಗೆ ವ್ಯಕ್ತಿಯನ್ನು ಶಕ್ತಿಯಾಗಿ ಪರಿವರ್ತನೆ ಮಾಡುತ್ತದೆ ಎಂದ ಅವರು ಪೂಜ್ಯರು ಸಾಮಾಜಿಕವಾಗಿ ಜನರ ಪರಿವರ್ತನಗಾಗಿ ಹಣಕಾಸಿನ ವ್ಯವಸ್ಥೆಯನ್ನು ಕಾನೂನು ಬಾಹಿರವಾಗಿ ನೀಡಿದ್ದಾರೆ ಎಂದು ಅಪಪ್ರಚಾರ ಕೆಲವರು ಮಾಡಿದ ಬಗ್ಗೆ ಸ್ವಷ್ಮಿಕರಣ ಮಾಡಿದ ಅವರು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಬಡವರಿಗೆ ನೀಡಿದ ಹಣಕಾಸಿನ ವ್ಯವಸ್ಥೆಯನ್ನು ದೇಶದ ಆರು ರಾಷ್ಟ್ರೀಕೃತ ಬ್ಯಾಂಕ್ ನಿಂದ ಕಾನೂನ್ಮಾಕವಾಗಿ ನೀಡಿದ್ದಾರೆ ಹೊರತು ದೇವಸ್ಥಾನದ ಹೊಂಡಿಯಿಂದ ನೀಡುತ್ತಿಲ್ಲ ಆದರೆ ಧರ್ಮಸ್ಥಳ ಮಂಜುನಾಥನ ಸಂಕಲ್ಪದಲ್ಲಿ ಇಷ್ಟೊಂದು ದೊಡ್ಡ ವ್ಯವಸ್ಥೆ ಕಾವೊಂದರ ಮೂಲಕ ಆಗಿದೆ.
ಬಡವರಿಗೆ ಕೊಟ್ಟ ಹಣ ಸೇಟ್ ಬ್ಯಾಂಕ್ ಆಪ್ ಇಂಡಿಯಾ ದಿಂದ ನೀಡಲಾಗುತ್ತಿದೆ ಗ್ರಾಮಾಭಿವೃದ್ಧಿ ಯೋಜನೆ ಲೆಕ್ಕಚಾರ ತೆರೆದ ಪುಸ್ತಕ ಇದ್ದಹಾಗೆ ಎಲ್ಲಾವೂ ಕಾನೂನಾತ್ಮಕವಾಗಿದೆ. ಗ್ರಾಮಾಭಿವೃದ್ದಿ ಯೋಜನೆ ಇಷ್ಟೂಂದು ಕಾರ್ಯಕ್ರಮಗಳು ಮಂಜುನಾಥ ದೇವರ ಅಪ್ಪಣೆಯಲ್ಲಿ ಪೂಜ್ಯರು ಮಾಡುತ್ತಿದ್ದಾರೆ ಎಂದ ಅವರು ಒಕ್ಕೂಟ ವ್ಯವಸ್ಥೆಯಿಂದ ಸಮರ್ಥನೆ ನಾಯಕತ್ವ,, ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿದೆ ದೊಡ್ಡ ಸೇವೆ ಶೌರ್ಯ ವಿಪತ್ತು ಘಟಕಗಳ ಮೂಲಕ ಸಾಮಾಜಿಕ ಸೇವೆ ಮಾಡುತ್ತ ಬರುತ್ತಿದೆ ಎಂದು ಹೇಳಿ ಶುಭ ಹಾರೖೆಸಿದರು.
ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ ಮಾತನಾಡಿ ಮನುಷ್ಯ ಸಂಘ ಜೀವಿ ಗ್ರಾಮಾಭಿವೃಧ್ಧಿ ಯೋಜನೆ ಮೂಲಕ ಜನರಲ್ಲಿ ಸಾಂಗಿಕ ಶಕ್ತಿಯನ್ನು ಕೇವಲ ಆರ್ಥಿಕ ಮಾತ್ರ ಸಾಮಾಜಿಕ ಮತು ರಾಜಕೀಯ ಬದಲಾವಣೆ ತರುವಲ್ಲಿ ಯೋಜನೆ ಮಹತ್ವವಾಗಿದೆ ಹಳ್ಳಿ ಗಾಡಿನ ಈ ಪ್ರದೇಶದಲ್ಲಿ ಸಂಘದ ಮೂಲಕ ಸಮಾನತೆ ಸಹಬಾಳ್ವೆ ಈ ಆರ್ಥಿಕವಾಗಿ ಸಾಮಾಜಿಕವಾಗಿ ಸಬಳರಾಗಿಸುವುದು ಒಳ್ಳೆಯ ಬದಲಾವಣೆ ಎಂದು ಹೇಳಿ ಒಕ್ಕೂಟದ ನೂತನ ಹಾಗೂ ನಿಕಟಪೂರ್ವ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೖೆಸಿದರು.
ಕೇಂದ್ರಿಯ ಒಕ್ಕೂಟ ಅಧ್ಯಕ್ಷ ಉದಯ ಕುಮಾರ್, ಪಟ್ಟೆ ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನಾ ಬಿ, ಪಟ್ಟೆ ಶ್ರೀಕೃಷ್ಣ ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಎನ್ ಸಂಧರ್ಭೋಚಿತ ಮಾಥನಾಡಿ ಶುಭ ಹಾರೖೆಸಿದರು.
ವೇದಿಕೆಯಲ್ಲಿ ನೂತನ ಸಮಿತಿ ಅಧ್ಯಕ್ಷ ಕೃಷ್ಣ ಪಾಟಾಳಿ, ಉಪಾಧ್ಯಕ್ಷೆ ಸಂಧ್ಯಾ, ಕಾರ್ಯದರ್ಶಿ ಜಯಶ್ರೀ ಜೊತೆ ಕಾರ್ಯದರ್ಶಿ ಸುಧೀರ್ ರೖೆ,, ಕೋಶಾಧಿಕಾರಿ ಸುಶೀಲಾ ನಿಕಟ ಪೂರ್ವ ಉಪಾಧ್ಯಕ್ಷೆ ಸವಿತ, ಕಾರ್ಯಧರ್ಶಿ ಶೋಭಿತಾ ಟಿ, ಜೊತೆ ಕಾರ್ಯಧರ್ಶಿ ಚಂದ್ರಾವತಿ, ಕೋಶಾಧಿಕಾರಿ ನಾರಾಯಣ ನಾಯ್ಕ ಉಪಸ್ಥಿತರಿದ್ದರು. ಸಭೆಯು ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ ರವರ ಅಧ್ಯಕ್ಷತೆಯಲ್ಲಿ ಅ. 23 ರಂದು ಪಟ್ಟೆ ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಊರಿನವರು ಭಾಗವಹಿಸಿದರು. ಒಕ್ಕೂಟ ಸದಸ್ಯರಾದ ಭಾಸ್ಕರ್ ನಾಯಕ್, ಕೃಷ್ಣ ಪಾಟಾಳಿ,ವಸಂತಿ,ಆಶಾ,ಶಶಿಕಲಾ,ವೀಣಾ, ಬಾಲಕೃಷ್ಣ ನಾಯ್ಕ ಅತಿಥಿಗಳಿಗೆ ಶಾಲು ಹಾಕಿ ಹೂವ ನೀಡಿ ಗೌರವಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಅಲಂತ್ತಡ್ಕ ಮಕ್ಕಳ ಕುಣಿತ ಭಜನಾ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ಹಾಗೂ ಲಹರಿ ಮತ್ತು ತಂಡದಿಂದ ತುಳುನಾಡಿನ ವೖೆಭವ ನೃತ್ಯ ವೖೆಭವ ನಡೆಯಿತು. ತುಳಸಿ ಮತ್ತು ಬಳಗದವರು ಪ್ರಾರ್ಥಿಸಿದರು. ಕಾಮಧೇನು ಸಂಘಧ ಜ್ಯೋತಿ ಕುಮಾರಿ ಸ್ವಾಗತಿಸಿದರು. ಶೋಭಿತಾ ವರದಿ ವಾಚಿಸಿದರು. ಸೇವಾಪ್ರತಿನಿಧಿ ಸಾವಿತ್ರಿ ಪೋನ್ನೆತ್ತಡ್ಕ ವಂದಿಸಿದರು. ಕಾವು ವಲಯ ಮೇಲ್ವಿಚಾರಕಿ ಪ್ರಣೀತಾ ಕಾರ್ಯಕ್ರಮ ನಿರೂಪಿಸಿದರು ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದರು.
ಹಿರಿಯ ನಾಗರಿಕರಿಗೆ ಸನ್ಮಾನ
ಪ್ರಗತಿ ಬಂಧು ಹಾಗೂ ಸ್ವ ಸಹಾಯ ಸಂಘದ ಸದಸ್ಯರಾಗಿದ್ದು ಸಂಘದ ಎಲ್ಲಾ ಚಟುವಟಿಕೆ ತನ್ನನ್ನು ತಾನು ತೊಡಗಿಸಿಕೊಂಡಿರುವ 60 ವರ್ಷಕ್ಕಿಂತ ಮೇಲ್ಪಟ್ಟ 10 ಮಂದಿ ಹಿರಿಯ ಸದಸ್ಯರನ್ನು ಈ ಸಂಧರ್ಭದಲ್ಲಿ ಶಾಲು ಹಾಕಿ ಸ್ಮರಣಿಕೆ ನೀಡಿ ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು
ಅಧಿಕಾರ ಹಸ್ತಾಂತರ
ನೂತನ ಒಕ್ಕೂಟದ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ನಿಕಟಪೂರ್ವ ಅಧ್ಯಕ್ಷರು ಪದಾಧಿಕಾರಿಗಳು ನಿರ್ಣಯ ಪುಸ್ತಕ ಬ್ಯಾಂಕ್ ಪಾಸ್ ಪುಸ್ತಕ ಹಾಗೂ ತುಳುನಾಡಿನ ಸಂಸ್ಕೃತಿಯಂತೆ ವೀಳ್ಯ ನೀಡುವ ಮೂಲಕ ಅಧಿಕಾರ ಹಸ್ತಾಂತರ ನಡೆಯಿತು.










