






ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಈ ಹುದ್ದೆ ಸಿಕ್ಕಿದೆ- ಶಶಿಕುಮಾರ್ ರೈ ಬಾಲ್ಯೊಟ್ಟು


ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪುತ್ತೂರು ಶಾಖೆಯ ವತಿಯಿಂದ ಅಭಿನಂದನಾ ಸಮಾರಂಭ ಶಾಖಾ ಕಛೇರಿಯಲ್ಲಿ ನಡೆಯಿತು. ಪುತ್ತೂರು ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು, ಸೂಪರ್ವೈಸರ್ಗಳು ಹೂಹಾರ, ಶಾಲು, ಪೇಟ, ಫಲಪುಷ್ಪ ನೀಡಿ ಅಭಿನಂದಿಸಿದರು.



ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ನಿಮ್ಮ ಪ್ರೀತಿ, ಹಾರೈಕೆಯಿಂದ ಈ ಸ್ಥಾನಕ್ಕೆ ಏರಿದ್ದೇನೆ. ನನ್ನ ಕರ್ತವ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕನಾಗಬೇಕೆಂಬ ಬಯಕೆ ಇತ್ತು. ನನ್ನ ಬಯಕೆಯನ್ನು ಪೂರೈಸಿದವರು ಡಾ|ಎಂ.ಎನ್. ರಾಜೇಂದ್ರ ಕುಮಾರ್ರವರು. ಅವರ ಶಿಫಾರಸ್ಸಿನ ಮೇರೆಗೆ ನಾನು ಆಯ್ಕೆಯಾಗಿದ್ದೇನೆ. ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷನಾಗಿ ನಾನು ಮಾಡಿದ ಕೆಲಸ ಗುರುತಿಸಿ ನಿರ್ದೇಶಕ ಸ್ಥಾನಕ್ಕೆ ನನ್ನ ಹೆಸರು ಕೊಟ್ಟಿದ್ದಾರೆ. ಮುಖ್ಯಮಂತ್ರಿಯವರು ನನ್ನ ಬೆನ್ನು ತಟ್ಟಿ ನಿರ್ದೇಶಕ ಸ್ಥಾನ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಈ ಹುದ್ದೆ ಸಿಕ್ಕಿದೆ ಎಂದ ಅವರು ಈ ಹುದ್ದೆಯಿಂದ ನಾನು ಎತ್ತರಕ್ಕೆ ಏರುವುದಿಲ್ಲ. ಸದಾ ನಿಮ್ಮೊಂದಿಗೆ ಇದ್ದೇನೆ ಎಂದರು.
ಎಸ್ಸಿಡಿಸಿಸಿ ಪುತ್ತೂರು ಶಾಖೆಯ ವ್ಯವಸ್ಥಾಪಕ ಹರೀಶ್ ಮಾತನಾಡಿ ನಮ್ಮ ಚಿಕ್ಕ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಇದು ಅವರ ದೊಡ್ಡ ಗುಣ. ಈ ಹುದ್ದೆ ಅವರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹೇಳಿ ಶುಭ ಹಾರೈಸಿದರು.
ಎಸ್ಸಿಡಿಸಿಸಿ ಕುಂಬ್ರ ಶಾಖೆಯ ವ್ಯವಸ್ಥಾಪಕ ವಿಶ್ವನಾಥ್ ಗೌಡ ಮಾತನಾಡಿ ಅವರಿಗೆ ಹುದ್ದೆ ಸಿಕ್ಕಿರುವುದು ನಾವು ಖುಷಿ ಪಡುವ ವಿಚಾರ. ಇದರಿಂದ ನಮ್ಮ ಕನಸು ನನಸಾಗಿದೆ. ಮುಂದೆ ಕೂಡ ಉನ್ನತ ಹುದ್ದೆಗೆ ಎರಲಿ ಎಂದು ಶುಭ ಹಾರೈಸಿದರು.
ಎಸ್ಸಿಡಿಸಿಸಿ ಪುತ್ತೂರು ಶಾಖೆಯ ಸೂಪರ್ವೈಸರ್ ಶರತ್ ಮಾತನಾಡಿ ಶಶಿ ಕುಮಾರ್ ರೈರವರು ಸರಳ ವ್ಯಕ್ತಿತ್ವದವರು. ಅವರ ವ್ಯಕ್ತಿತ್ವದಿಂದ ಅವರಿಗೆ ದೊಡ್ಡ ಹುದ್ದೆ ಸಿಕ್ಕಿದೆ. ವ್ಯಕ್ತಿತ್ವವನ್ನು ಕಳೆದು ಕೊಳ್ಳಬೇಡಿ. ವೈಯುಕ್ತಿಕವಾಗಿ ನನ್ನ ಕಷ್ಟಗಳಿಗೆ ಬಂಡೆಯಾಗಿ ನಿಂತು ಬಗೆಹರಿಸಿದ್ದೀರಿ. ಮುಂದೆ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರಾಗುವ ಯೋಗ ಸಿಗಲಿ ಎಂದು ಹೇಳಿ ಶುಭಹಾರೈಸಿದರು.
ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ ಮಾತನಾಡಿ ಶಶಿಕುಮಾರ್ ರೈರವರಲ್ಲಿ ಸಮಸ್ಯೆಗೆ ಸ್ಪಂದಿಸುವ ಗುಣ ಇದೆ. ಎಷ್ಟೇ ಅಡೆತಡೆ ಇದ್ದರೂ ಮೆಟ್ಟಿ ನಿಲ್ಲುವ ಗುಣ ಅವರಲ್ಲಿದೆ. ಎಲ್ಲರನ್ನು ಸೆಳೆಯುವ ವ್ಯಕ್ತಿತ್ವ ಅವರಿಗಿದೆ. ಅಲ್ಲದೆ ಇಚ್ಛಾ ಶಕ್ತಿಯೂ ಅವರಿಗೆ ಇದೆ ಎಂದು ಹೇಳಿ ಶುಭ ಹಾರೈಸಿದರು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿಇಒ ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಸ್ಸಿಡಿಸಿಸಿ ಕಬಕ ಶಾಖೆಯ ವ್ಯವಸ್ಥಾಪಕ ಸೀತಾರಾಮ ಗೌಡ, ಪುತ್ತೂರು ಶಾಖೆಯ ಇನ್ಸ್ಪೆಕ್ಟರ್ ಉರ್ಮಿಳಾ, ಮಾರಾಟ ವ್ಯಾಸ್ಥಾಪಕ ಆದರ್ಶ, ಸೂಪರ್ವೈಸರ್ ವಸಂತ, ಸಿಬ್ಬಂದಿಗಳಾದ ರೋಹಿತ್, ದೀಪಕ್, ವಿಘ್ನೇಶ್, ಭವ್ಯ, ಮುಸ್ತಾಕ್, ಆಕಾಶ್, ವಿನಯ್ ಕುಮಾರ್, ಪ್ರದೀಪ್ ಉಪಸ್ಥಿತರಿದ್ದರು. ಸಿಬ್ಬಂದಿ ದೀಕ್ಷಿತ್ ರೈ ವಂದಿಸಿದರು.










