






ಪುತ್ತೂರು: ಶಿವಳ್ಳಿ ಸಂಪದ ಪುತ್ತೂರು ಇದರ ಬೊಳುವಾರು ವಲಯದ ನೇತೃತ್ವದಲ್ಲಿ ಸೆ.15 ರಿಂದ 21ರ ತನಕ ಕೆಮ್ಮಾಯಿ ಶ್ರೀ ವಿಷ್ಣು ಮಂಟಪದಲ್ಲಿ ನಡೆಯಲಿರುವ ‘ಹರಿವಂಶ ಪುರಾಣ ಪ್ರವಚನ’ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಎಡನೀರು ಮಠದಲ್ಲಿ ಎಡನೀರು ಶ್ರೀಗಳು ಬಿಡುಗಡೆಗೊಳಿಸಿದರು.



ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಬ್ರಾಹ್ಮಣ ಸಮಾಜದ ಜೊತೆಗೆ ಇಡೀ ಹಿಂದೂ ಸಮಾಜವೇ ಜೊತೆಯಾಗಬೇಕು. ಮಾತ್ರವಲ್ಲದೇ ನಮ್ಮಲ್ಲಿ ಹಲವು ಪ್ರಬೇಧ, ಹಲವು ಆಚರಣೆ, ಚಿಂತನೆಗಳಿದ್ದರೂ ಕೂಡಾ ಎಲ್ಲವನ್ನು ಸ್ವೀಕರಿಸುತ್ತಾ ಜೊತೆಯಾಗಿರಬೇಕು.



ಎಲ್ಲರಿಗೂ ಕ್ಷೇತ್ರದ ಅದಿಪತಿ ಮಂಗಳವನ್ನು ಉಂಟುಮಾಡಲಿ. ಯೋಜಿತ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದು ಸಮಾಜಕ್ಕೆ ಒಳಿತಾಗಲಿ ಎಂದು ಹರಸಿದರು. ಈ ಸಂದರ್ಭದಲ್ಲಿ ಶಿವಳ್ಳಿ ಸಂಪದ ಪುತ್ತೂರು ವಲಯದ ಅಧ್ಯಕ್ಷರಾದ ಸತೀಶ್ ಕೆ.ಎಸ್., ಸಂಘಟನಾ ಕಾರ್ಯದರ್ಶಿ ರವೀಂದ್ರ ಟಿ.ನೆಲ್ಯಾಡಿ, ಕಾರ್ಯದರ್ಶಿ ಬಾಲಚಂದ್ರ ಮುಚ್ಚಿಂತ್ತಾಯ, ಕೋಶಾಧಿಕಾರಿ ಕೃಷ್ಣರಾಜ ಎರ್ಕಡಿತ್ತಾಯ, ಬೊಳುವಾರ ವಲಯದ ಅಧ್ಯಕ್ಷ ಅನಂತಕೃಷ್ಣ ಪಡ್ಡಿಲ್ಲಾಯ, ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ, ತಾಲೂಕು ಮಹಿಳಾ ಸಂಪದದ ಗೌರವಾಧ್ಯಕ್ಷೆ ವತ್ಸಲಾ ರಾಜ್ಞಿ, ಪ್ರಮುಖರಾದ ಎ.ವಿ.ನಾರಾಯಣ, ಶರತ್‌ಕುಮಾರ್, ಬಾಲಕೃಷ್ಣ ಎಡಪಡಿತ್ತಾಯ, ಸಂತೋಷ್‌ಕುಮಾರ್, ಕೆ.ಆರ್.ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.










