







ಘಟಕದ ಶಾಶ್ವತ ಯೋಜನೆ ಜೇಸಿ ಪ್ರದೀಪ್ ಬಾಕಿಲರ ಸ್ಮರಣಾರ್ಥ ನಿರ್ಮಿಸಲಾದ ಬಸ್ಸು ತಂಗುದಾಣದ ಲೋಕಾರ್ಪಣಾ ಕಾರ್ಯಕ್ರಮ


ಆಲಂಕಾರು:ಜೇಸಿಐ ಆಲಂಕಾರು ಘಟಕದಲ್ಲಿ ವಲಯಾಧ್ಯಕ್ಷರ ಅಧಿಕೃತ ಭೇಟಿ ಹಾಗೂ ಘಟಕದ ಈ ವರ್ಷದ ಶಾಶ್ವತ ಯೋಜನೆಯಾದ ಜೇಸಿ ಪ್ರದೀಪ್ ಬಾಕಿಲರ ಸ್ಮರಣಾರ್ಥ ಆಲಂಕಾರು ಗ್ರಾಮದ ನೆಕ್ಕರೆಯಲ್ಲಿ ನಿರ್ಮಿಸಲಾದ ಬಸ್ಸು ತಂಗುದಾಣದ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.ಜೇಸಿಐ ಭಾರತದ ವಲಯ 15ರ ವಲಯಾಧ್ಯಕ್ಷ JFS ಸಂತೋಷ್ ಶೆಟ್ಟಿಯವರನ್ನು ಆಲಂಕಾರು ಪೇಟೆಯಲ್ಲಿ ಜೇಸಿಐ ಘಟಕದ ಅಧ್ಯಕ್ಷ ಮಹೇಶ್ ಪಾಟಾಳಿ ಹಾಗೂ ಸದಸ್ಯರು ಸ್ವಾಗತಿಸಿದರು.
ಬಳಿಕ ಆಲಂಕಾರು ಗ್ರಾಮದ ನೆಕ್ಕರೆಯಲ್ಲಿ ಘಟಕದಿಂದ ನಿರ್ಮಿಸಲಾಗಿದ್ದ ನೂತನ ಬಸ್ಸು ತಂಗುದಾಣವನ್ನು ವಲಯಾಧ್ಯಕ್ಷರು ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಈ ಶಾಶ್ವತ ಯೋಜನೆಯು ಜನರಿಗೆ ಉಪಯೋಗವಾಗುವ ಅರ್ಥಪೂರ್ಣವಾದ ಯೋಜನೆಯಾಗಿದ್ದು,ಇದನ್ನು ಜೇಸಿ ಪ್ರದೀಪ್ ಬಾಕಿಲರ ಸ್ಮರಣಾರ್ಥ ನಿರ್ಮಿಸಿದ್ದು ನಾವು ಅವರಿಗೆ ಸಲ್ಲಿಸುತ್ತಿರುವ ಗೌರವ ಎಂದು ತಿಳಿಸಿದರು.ಈ ಸಂದರ್ಭ ಬಸ್ಸು ತಂಗುದಾಣದ ನಿರ್ಮಾಣಕ್ಕೆ ಸಹಕರಿಸಿದ ಜೇಸಿಯೇತರ ಬಂಧುಗಳನ್ನು ಘಟಕದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಸಂಜೆ ಆಲಂಕಾರು ಸಿ ಎ ಬ್ಯಾಂಕಿನ ಸಭಾಂಗಣದಲ್ಲಿ ವಲಯಾಧ್ಯಕ್ಷರ ಅಧಿಕೃತ ಭೇಟಿಯ ಸಭಾ ಕಾರ್ಯಕ್ರಮವು ಘಟಕದ ಅಧ್ಯಕ್ಷ ಜೇಸಿ ಮಹೇಶ್ ಪಾಟಾಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಘಟಕದ 2026ನೇ ಸಾಲಿನ ಪದಗ್ರಹಣ ಸಮಾರಂಭದಿಂದ ಇಲ್ಲಿಯವರೆಗೆ ನಡೆಸಲಾದ ಕಾರ್ಯಕ್ರಮಗಳ ವರದಿಯನ್ನು ಕಾರ್ಯದರ್ಶಿ ಜನಾರ್ದನ್ ಸುರ್ಯ ಸಭೆಯಲ್ಲಿ ವಾಚಿಸಿ ವಲಯಾಧ್ಯಕ್ಷರಿಗೆ ಹಸ್ತಾಂತರಿಸಿದರು.
ಜೇಸಿಐ ಭಾರತ ನಡೆಸುವ JCSAT ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿರುವ ಘಟಕದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.ಮುಖ್ಯಅತಿಥಿಗಳಾಗಿ ವಲಯ 15ರ ವಲಯಾಧ್ಯಕ್ಷ ಜೇಸಿ ಸಂತೋಷ್ ಶೆಟ್ಟಿ,ವಲಯ ಉಪಾಧ್ಯಕ್ಷ ಜೇಸಿ ಕಾಶೀನಾಥ್ ಗೋಗಟೆ,ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿ ಲೂಯಿಸ್ ಮಸ್ಕರೇನಸ್,ವಲಯಾಧಿಕಾರಿ ವಿನೀತ್ ಶಗ್ರಿತ್ತಾಯ ಭಾಗವಹಿಸಿದ್ದರು.ವಲಯಾಧ್ಯಕ್ಷರು ಮಾತನಾಡುತ್ತಾ ಇದುವರೆಗೆ ಜೇಸಿಐ ಆಲಂಕಾರು ಘಟಕದಲ್ಲಿ ನಡೆಸಿಕೊಂಡು ಬಂದಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ :
ಕಾರ್ಯಕ್ರಮದಲ್ಲಿ ಶ್ರೀ ಭಾರತಿ ಶಾಲೆ ಆಲಂಕಾರಿನ ಶಿಕ್ಷಕ ಹಾಗೂ ಕ್ರೀಡಾ ತರಬೇತುದಾರ ಚಂದ್ರಹಾಸ ಕೆ.ಸಿ ಇವರಿಗೆ ಆಗಸ್ಟ್ ತಿಂಗಳ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ನೀಡಿ ಗೌರವಿಸಲಾಯಿತು.




ಅಭಿಮಾನದ ಸನ್ಮಾನ :
ಕರುನಾಡಿನ ಮನೆಮಾತಾಗಿರುವ,ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡ, ಜನಪ್ರಿಯ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದ್ಭುತ ಪ್ರತಿಭೆ ತೋರಿದ ಘಟಕದ ಜೇಸಿಲೆಟ್ ಅದ್ವಿಕಾ ಬಾಕಿಲ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಗೌರವಾರ್ಪಣೆ :
ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ,ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ,ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಲೂಯಿಸ್ ಮಸ್ಕರೇನಸ್,ಬಸ್ಸು ತಂಗುದಾಣದ ಪ್ರಾಜೆಕ್ಟ್ ಡೈರೆಕ್ಟರ್ ಜೇಸಿ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಇವರಿಗೆ ಘಟಕದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಲಯದ ಆಡಳಿತ ವಿಭಾಗದ ನಿರ್ದೇಶಕ ಜೇಸಿ ಸುಹಾಸ್ ಮರಿಕೆ ಪುತ್ತೂರು,ಘಟಕದ ನಿಕಟಪೂರ್ವಾಧ್ಯಕ್ಷ ಗುರುರಾಜ್ ರೈ,ಕಾರ್ಯದರ್ಶಿ ಜನಾರ್ದನ್ ಸುರ್ಯ,ಕಾರ್ಯಕ್ರಮ ನಿರ್ದೇಶಕ ಲಕ್ಷ್ಮೀನಾರಾಯಣ ಅಲೆಪ್ಪಾಡಿ,ಮಹಿಳಾ ಜೇಸಿ ಸಂಯೋಜಕಿ ಕೃತಿಕಾ ಟಿ.ರೈ,ಜೂನಿಯರ್ ಜೇಸಿ ಅಧ್ಯಕ್ಷೆ ಕೀರ್ತಿ ಶೆಟ್ಟಿ,ಆಲಂಕಾರು ಜೇಸಿಐ ನ ಸ್ಥಾಪಕ ಪ್ರಶಾಂತ್ ಕುಮಾರ್ ರೈ,ಸ್ಥಾಪಕಾಧ್ಯಕ್ಷ ಜನಾರ್ದನ್ ಬಿ.ಎಲ್,ಪೂರ್ವಾಧ್ಯಕ್ಷರುಗಳು ಮತ್ತು ಸದಸ್ಯರು,ವಿಶ್ರಾಂತ ಪ್ರಾಂಶುಪಾಲರಾದ ವಿಠಲ್ ರೈ,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಡಬ ತಾಲೂಕಿನ ಅಧ್ಯಕ್ಷ ವಿಮಲ್ ಕುಮಾರ್ ನೆಲ್ಯಾಡಿ,ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೆಯಲ್ಗ,ಎ.ಎಸ್ ಫಾತಿಮಾ ಎಂಟರ್ ಪ್ರೈಸಸ್ ನ ಮಾಲಕ ಆದಂ ಹಾಜಿ,ಶ್ರೀ ಮಾತಾ ಇಂಡಸ್ಟ್ರಿ ಮಾಲಕ ಬಾಬು ಮೇಸ್ತ್ರಿ ,ನಿವೃತ್ತ ಮುಖ್ಯ ಗುರುಗಳಾದ ನಾಗಪ್ಪ ಗೌಡ ಮರುವಂತಿಲ,ಸಾಮಾಜಿಕ ಕಾರ್ಯಕರ್ತ ಅಬೂಬಕ್ಕರ್ ನೆಕ್ಕರೆ,ಪೀರ್ ಮಹಮ್ಮದ್ ಆಲಂಕಾರು,ಶಿವಣ್ಣ ಗೌಡ ಕಕ್ವೆ,ಮನೋಹರ್ ಕಲ್ಲೇರಿ ,ಬಾಕಿಲ ಕುಟಂಬಸ್ಥರಾದ ಮೋನಪ್ಪ ಗೌಡ,ಪ್ರಕಾಶ್ ಬಾಕಿಲ ,ಚಕ್ರಪಾಣಿ ಬಾಕಿಲ ಹಾಗೂ ಹೇಮಲತಾ ಪ್ರದೀಪ್ ಉಪಸ್ಥಿತರಿದ್ದರು.ಜೇಸಿ ಮನೋಹರ್ ಜೇಸಿವಾಣಿ ವಾಚಿಸಿದರು.ಜೇಸಿ ಗುರುಕಿರಣ್ ಶೆಟ್ಟಿ,ಜೇಸಿ ಪುರಂದರ ಕೆ,ಜೇಸಿ ಕೃತಿ ಕೆ.ಎಸ್,ಜೇಸಿ ಧನ್ಯಶ್ರೀ ರೈ ಸನ್ಮಾನಿತರ ಪರಿಚಯ ಮಾಡಿದರು.ಅಧ್ಯಕ್ಷ ಮಹೇಶ್ ಪಾಟಾಳಿ ಸ್ವಾಗತಿಸಿ ಕಾರ್ಯದರ್ಶಿ ಜನಾರ್ದನ್ ಸುರ್ಯ ವಂದಿಸಿದರು.ಪ್ರದೀಪ್ ರೈ ಮನವಳಿಕೆ,ಗಣೇಶ್ ಕಟ್ಟಪುಣಿ ,ಶ್ರುತಿ ಪ್ರಸಾದ್ ರೈ ಕಾರ್ಯಕ್ರಮ ನಿರ್ವಹಿಸಿದರು.










