






ಪುತ್ತೂರು:ಇತ್ತೀಚೆಗೆ ಅಪಘಾತವೊಂದರಲ್ಲಿ ಬಲಕೈ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ತಾಲೂಕು ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಷನ್ ಮಾಲಕರ ಸಂಘದ ಸದಸ್ಯರಾಗಿದ್ದು ಸಂಘದ ವತಿಯಿಂದ ಸೀತಾರಾಮ ಬಲ್ನಾಡುರವರಿಗೆ ಸಂಘದ ಅಧ್ಯಕ್ಷರಾದ ಯೋಗೀಶ್ ಕಾವುರವರು ಸಂಘದ ಮೂಲ ಧನ ಮತ್ತು ಸರ್ವ ಸದಸ್ಯರ ಸಹಕಾರದಿಂದ ಚಿಕಿತ್ಸಾ ವೆಚ್ಚಕ್ಕಾಗಿ ರೂ. 30,000 ಸಹಾಯಧನವನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶ್ಯಾಮ್ ಮಂಜುನಾಥ್ ಪ್ರಸಾದ್, ಉಪಾಧ್ಯಕ್ಷ ಜೀವನ್ ಕಿಶೋರ್ ಫೆರ್ನಾಂಡೀಸ್, ಕಾರ್ಯದರ್ಶಿ ಶ್ರೀಹರ್ಷ ರೈ, ಕೋಶಾಧಿಕಾರಿ ಗೋವರ್ಧನ ಶೆಟ್ಟಿ ಪಿ ಉಪಸ್ಥಿತರಿದ್ದರು.













