






ಕಡಬ: ದೇವರ ಮೇಲೆ ಅಪಾರ ನಂಬಿಕೆಯನ್ನಿಕೊಂಡು ನಮ್ಮ ಹಿರಿಯರು ಧಾರ್ಮಿಕ ಆಚರಣೆಗಳನ್ನು ಜೀವನದಲ್ಲಿ ಆಳವಡಿಸಿಕೊಂಡಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಧಾರ್ಮಿಕ ಆಚರಣೆಯಲ್ಲಿ ನಂಬಿಕೆ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ನಮ್ಮ ಮಕ್ಕಳನ್ನು ಶ್ರದ್ದಾ ಕೇಂದ್ರಗಳಿಗೆ ಕರೆದೊಯ್ಯದು ಧಾರ್ಮಿಕ ಆಚರಣೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುವ ಕರ್ತವ್ಯ ಹಿರಿಯ ಮೇಲಿದೆ ಎಂದು ಉಪ್ಪಿನಂಗಡಿಯ ಧಾರ್ಮಿಕ ಮುಖಂಡೆ ಶೈಲಜಾ ಶೆಣೈ ಹೇಳಿದರು.



ಅವರು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಮೀ ಪೂಜೆ ಸಮಿತಿ ವತಿಯಿಂದ ನಡೆದ ಶ್ರೀ ವರಮಹಾಲಕ್ಷೀ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡಿದರು. ಹಿಂದೂ ಸಮಾಜದ ಸಂಸ್ಕಾರವನ್ನು ಜಗತ್ತೆ ಮೆಚ್ಚಿಕೊಂಡಿದೆ. ಹಿಂದು ಧರ್ಮ ಎಲ್ಲರಿಗೂ ಒಳಿತಾಗಲಿ ಎಂದು ಇಡೀ ಜಗತ್ತಿಗೆ ಮಾರ್ಗದರ್ಶನ ನೀಡಿದ ಜೀವನ ಕ್ರಮವಾಗಿದೆ. ರಾಷ್ಟç, ಸಮಾಜ ಕಟ್ಟುವ ನಿಟ್ಟಿನಲ್ಲಿ ಸಂಘಟಿತರಾಗಿ ಯೋಚನೆ ಮಾಡಬೇಕಿದೆ. ಹಿಂದೂ ಧರ್ಮ, ಸಂಸ್ಕೃತಿ ಸಂರಕ್ಷಣೆಯ ದೃಷ್ಟಿಯಿಂದ ನಾವೆಲ್ಲರೂ ಸಂಘಟಿತರಾಗಬೇಕಿದೆ. ಶ್ರದ್ಧಾಕೇಂದ್ರಗಳ ಅಭಿವೃದ್ಧಿಯಿಂದ ಧರ್ಮ ಜಾಗೃತಿ, ಸಾಮೂಹಿಕ ಆರಾಧನೆಗಳಿಂದ ದೇವರು, ದೇಶ, ಧರ್ಮ, ಸಂಸ್ಕೃತಿ ಉದ್ದೀಪನಗೊಳಿಸೊಣ ಎಂದರು.




ಸಾಮೂಹಿಕ ಶ್ರೀ ವರಮಹಾಲಕ್ಮೀ ಪೂಜೆ ಸಮಿತಿ ಅಧ್ಯಕ್ಷೆ ವಿದ್ಯಾವತಿ ಪರಂಗಾಜೆ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನೀರಜ್ ಕುಮಾರ್ ರೈ ಶುಭಹಾರೈಸಿದರು. ದೇವಸ್ಥಾನಕ್ಕೆ ಊಟದ ತಟ್ಟೆ ಕೊಡುಗೆಯಾಗಿ ನೀಡಿದ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೋರಿಕ್ಕಾರು ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಅಡುಗೆ ಪಾತ್ರೆ ಖರೀಸಿದಿಸಲು ಧನ ಸಹಾಯ ನೀಡಿದ ಮೋಹಿನಿಉಮೇಶ್ ಪಲ್ಲಡ್ಕಪಟ್ಟೆ ಹಾಗು ಕಾರ್ಯಕ್ರಮಕ್ಕೆ ವಿವಿಧ ರೂಪದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ದೇವಸ್ಥಾನ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ ನೇತೃತ್ವದಲ್ಲಿ ಸಾರ್ವಜನಿಕ ವರಮಹಾಲಕ್ಷಿ ಪೂಜಾ ವೈದಿಕ ಕಾರ್ಯ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯತೀಶ್ ಗುಂಡಿಜೆ, ಸುನೀತ್ರಾಜ್ ಶೆಟ್ಟಿ ಆರುವಾರ ಬಾಳಿಕೆ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ ಸೀಗೆತ್ತಡಿ, ಉಪಸ್ಥಿತರಿದ್ದರು. ಸುಜಾತ ಜೆ.ಶೆಟ್ಟಿ ಬಡಿಲ ಸ್ವಾಗತಿಸಿದರು. ರಂಜಿತಾನೀರಜ್ ವಂದಿಸಿದರು. ಮೀನಾಕ್ಷಿ ಕೆ.ಮುಂಡೈಮಾರು, ಜ್ಯೋತಿ ಕಲ್ಕಾಡಿ ಕಾರ್ಯಕ್ರಮ ನಿರೂಪಿಸಿದರು.










