






ಪುತ್ತೂರು: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿ 112ಗೆ ಕರೆ ಬಂದ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ್ದ ಪೊಲೀಸರಿಗೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಸೆ.4ರಂದು ರಾತ್ರಿ ಪಡ್ನೂರಿನಲ್ಲಿ ನಡೆದಿದೆ.


112 ಪೊಲೀಸ್ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಾದ ಮಧು ಮತ್ತು ಬೀಮಣ್ಣ ಗೌಡ ಹಲ್ಲೆಗೊಳಗಾದವರು.



ಪಡ್ನೂರು ಸಮೀಪ ಮಹಿಳೆಯೊಬ್ಬರ ಕರೆ ಬಂದಂತೆ ಸ್ಥಳಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ನವೀನ್ ಪಡ್ನೂರು ಎಂಬವರು ಅವರ ಪತ್ನಿ ಮತ್ತು ಮಾವನಿಗೆ ಪೊಲೀಸರ ಎದುರಲ್ಲೇ ಹಲ್ಲೆ ನಡೆಸುತ್ತಿರುವುದನ್ನು ತಡೆಯಲು ಹೋದ ಪೊಲೀಸರ ಮೇಲೆ ನವೀನ್ ಅವರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳಾದ ಮಧು ಮತ್ತು ಭೀಮಣ್ಣ ಗೌಡ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನವೀನ್ ಅವರು ಹಲ್ಲೆ ನಡೆಸಿದ್ದಾರೆನ್ನಲಾದ ಮಹಿಳೆ ಮತ್ತು ಆಕೆಯ ತಂದೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಂದು ತಿಳಿದು ಬಂದಿದೆ.










