






ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪುತ್ತೂರು ವತಿಯಿಂದ ತಾಲೂಕು ಮಟ್ಟದ ಗೀತಗಾಯನ (ದೇಶಭಕ್ತಿ ಗೀತೆ) ಹಾಗೂ ರೋವರ್-ರೇಂಜರ್‌ಗಳಿಗೆ ಜಾನಪದ ಗೀತೆ ಸ್ಪರ್ಧೆ ಬೊಳುವಾರು ಸ್ಕೌಟಿಂಗ್ ಸೆಂಟರ್ ಹಾಲ್‌ನಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ಪುತ್ತೂರು ತಾಲೂಕಿನ ಶಾಲೆಯ 38 ಸ್ಕೌಟ್, ಗೈಡ್, ಕಬ್, ಬುಲ್‌ಬುಲ್, ರೋವರ್ ಮತ್ತು ರೇಂಜರ್ ತಂಡಗಳು ಭಾಗವಹಿಸಿದ್ದವು.


ಫಲಿತಾಂಶ:
ಕಬ್ ವಿಭಾಗದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ, ನರಿಮೊಗರು ಪ್ರಥಮ, ಸ.ಹಿ.ಪ್ರಾ. ಶಾಲೆ, ಕಾಣಿಯೂರು ದ್ವಿತೀಯ, ಹಾಗೂ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪಾಂಗ್ಳಾಯಿ ತೃತೀಯ ಸ್ಥಾನ ಪಡೆದುಕೊಂಡಿದೆ. ಬುಲ್‌ಬುಲ್ ವಿಭಾಗದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ, ನರಿಮೊಗರು ಪ್ರಥಮ, ಸರಸ್ವತಿ ವಿದ್ಯಾ ಮಂದಿರ, ಪುರುಷರಕಟ್ಟೆ ದ್ವಿತೀಯ ಹಾಗೂ ಸ.ಹಿ.ಪ್ರಾ. ಶಾಲೆ, ಕಾಣಿಯೂರು ತೃತೀಯ ಸ್ಥಾನ ಪಡೆದಿದೆ.



ಸ್ಕೌಟ್ ವಿಭಾಗದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ, ನರಿಮೊಗರು ಪ್ರಥಮ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ದ್ವಿತೀಯ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಂಪಾಡಿ ತೃತೀಯ, ಹಾಗೂ ಸುದಾನ ವಸತಿಯುತ ಶಾಲೆ, ಮಂಜಲಡ್ಪು ತೃತೀಯ ಸ್ಥಾನ ಪಡೆದುಕೊಂಡಿದೆ. ಗೈಡ್ಸ್ ವಿಭಾಗದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ, ನರಿಮೊಗರು ಪ್ರಥಮ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ದ್ವಿತೀಯ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ ತೃತೀಯ ಸ್ಥಾನ ಪಡೆದಿದೆ. ರೋವರ್ ಮತ್ತು ರೇಂಜರ್ ಎರಡೂ ವಿಭಾಗದಲ್ಲಿ ದರ್ಬೆ ಸೇಂಟ್ ಫಿಲೋಮಿನಾ ಕಾಲೇಜು ತಂಡಗಳು ವಿಜೇತರಾಗಿದ್ದಾರೆ.
ಪ್ರಥಮ ಸ್ಥಾನ ಪಡೆದ ಶಾಲೆ/ಕಾಲೇಜುಗಳ ತಂಡಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ ಎಂದು ಪುತ್ತೂರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಗೌರಿ ತಿಳಿಸಿದ್ದಾರೆ.










